Home News Delhi : ದರ್ಗಾ ಬಳಿ ದೀಪ ಬೆಳಗಲು ಆದೇಶ – ಮದ್ರಾಸ್ ಹೈಕೋರ್ಟ್ ಜಡ್ಜ್ ಪದಚ್ಯುತಿಗಾಗಿ...

Delhi : ದರ್ಗಾ ಬಳಿ ದೀಪ ಬೆಳಗಲು ಆದೇಶ – ಮದ್ರಾಸ್ ಹೈಕೋರ್ಟ್ ಜಡ್ಜ್ ಪದಚ್ಯುತಿಗಾಗಿ ಸಹಿ ಮಾಡಿ ಸ್ಪೀಕರ್ ಗೆ ದೂರು ಕೊಟ್ಟ 120 ಸಂಸದರು!!

Hindu neighbor gifts plot of land

Hindu neighbour gifts land to Muslim journalist

Delhi : ತಮಿಳುನಾಡಿನ ತಿರುಪರನಕುಂದ್ರಂ ಬೆಟ್ಟದಲ್ಲಿ ದರ್ಗಾದ ಬಳಿ ಇರುವ ಕಲ್ಲಿನ ಕಂಬದ ಮೇಲೆ ಸಾಂಪ್ರದಾಯಿಕ ದೀಪ ಬೆಳಗಲು ಅನುಮತಿ ನೀಡಿದ್ದ ನ್ಯಾಯಾಧೀಶ ಜಿ. ಆರ್ ಸ್ವಾಮಿನಾಥನ್ ವಿರುದ್ಧ ಪ್ರತಿಪಕ್ಷದ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದು ಅವರನ್ನು ಪದಚ್ಯುತಿಗೊಳಿಸಬೇಕೆಂಬುದಾಗಿ 120 ಸಂಸದರು ಸಹಿ ಅಭಿಯಾನ ನಡೆಸಿದ್ದಾರೆ.

ಹೌದು, ಮದುರೈ ಕಾರ್ತೀಕ ದೀಪೋತ್ಸವ ಪ್ರಕರಣದ ಬಗ್ಗೆ ತೀರ್ಪು ನೀಡಿದ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದ ನ್ಯಾ.ಜಿ.ಆರ್‌. ಸ್ವಾಮಿನಾಥನ್‌ ಅವರ ವಿರುದ್ಧ ವಾಗ್ದಂಡನೆಗೆ ಸಂಬಂಧಿಸಿದ ನಿಲುವಳಿ ಮಂಡನೆಗೆ ಕೋರಿ ಡಿಎಂಕೆ ಪಕ್ಷ ಸೇರಿ ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ನೋಟಿಸ್‌ ಸಲ್ಲಿಸಿದ್ದಾರೆ.

ಆದೇಶವನ್ನು ವಿರೋಧಿಸಿರುವ ಡಿಎಂಕೆ, ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ INDI ಮೈತ್ರಿಕೂಟದ ಸಂಸದರು ಜಡ್ಜ್ ವಿರುದ್ಧ ಮಹಾಭಿಯೋಗ (ವಿಚಾರಣೆಗೆ ಒಳಪಡಿಸಿ ಪದಚ್ಯುತಿಗೊಳಿಸುವ ಪ್ರಕ್ರಿಯೆ) ಕ್ಕೆ ಸಹಿ ಹಾಕಿ, ಈ ಪ್ರಕ್ರಿಯೆಯನ್ನು ಚಾಲು ಮಾಡುವುದಕ್ಕೆ ಅನುಮತಿ ನೀಡಬೇಕೆಂದು ಓಂ ಬಿರ್ಲಾಗೆ ಮನವಿ (ನೊಟೀಸ್) ಸಲ್ಲಿಸಿದ್ದಾರೆ.

ನ್ಯಾಯಾಲಯದ ಆದೇಶದಂತೆ ಡಿ.4ರ ವೇಳೆಗೆ ‘ದೀಪತ್ತೋನ್’ ಸ್ತಂಭದ ಮೇಲೆ ದೀಪವನ್ನು ಬೆಳಗಿಸಬೇಕಿತ್ತು. ದೇವಸ್ಥಾನದ ಅಧಿಕಾರಿಗಳು ಮತ್ತು ದರ್ಗಾ ಆಡಳಿತ ಸಮಿತಿ ಎತ್ತಿದ್ದ ಆಕ್ಷೇಪಣೆಗಳನ್ನು ತಿರಸ್ಕರಿಸಿದ್ದ ನ್ಯಾಯಾಧೀಶರು, ಇದರಿಂದ ಮುಸ್ಲಿಮ್ ಸಮುದಾಯದ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಪೋಲಿಸರ ಬೆಂಗಾವಲಿನೊಂದಿಗೆ ದೀಪ ಹಚ್ಚುವ ವಿಧಿಯನ್ನು ನಡೆಸಲು ಭಕ್ತರ ಸಣ್ಣ ಗುಂಪೊಂದಕ್ಕೆ ಅವಕಾಶ ಒದಗಿಸುವಂತೆಯೂ ನ್ಯಾಯಾಲಯವು ನಿರ್ದೇಶನ ನೀಡಿತ್ತು.

ಆದರೆ ರಾಜ್ಯ ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಕಳವಳಗಳನ್ನು ಉಲ್ಲೇಖಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸಲು ನಿರಾಕರಿಸಿತ್ತು. ಇದು ಹಿಂದುತ್ವ ಪರ ಗುಂಪುಗಳಿಂದ ಪ್ರತಿಭಟನೆಗಳು,ಪೋಲಿಸರೊಂದಿಗೆ ಸಂಘರ್ಷಗಳಿಗೆ ಕಾರಣವಾಗಿದ್ದು, ಈಗ ಪ್ರಮುಖ ರಾಜಕೀಯ ಮತ್ತು ನ್ಯಾಯಾಂಗ ಸಂಘರ್ಷವಾಗಿ ಉಲ್ಬಣಗೊಂಡಿದೆ.