Home News Delhi: ಕೇಜ್ರೀವಾಲ್‌ ನಿವಾಸಕ್ಕೆ ಎಸಿಬಿ ದಾಳಿ!

Delhi: ಕೇಜ್ರೀವಾಲ್‌ ನಿವಾಸಕ್ಕೆ ಎಸಿಬಿ ದಾಳಿ!

Hindu neighbor gifts plot of land

Hindu neighbour gifts land to Muslim journalist

Delhi: ದೆಹಲಿಯ ಮಾಜಿ ಸಿಎಂ ಕೇಜ್ರಿವಾಲ್‌ ಮನೆಗೆ ಎಸಿಬಿ ದಾಳಿಯಾಗಿದೆ. ಕೇಜ್ರಿವಾಲ್‌ ಅಪರೇಷನ್‌ ಕಮಲ ಆರೋಪ ಮಾಡಿದ ಬೆನ್ನಲ್ಲೇ ದಾಳಿ ನಡೆದಿದೆ. ಬಿಜೆಪಿಯಿಂದ ಒಟ್ಟು ಹದಿನೈದು ಕೋಟಿ ಆಮಿಷ, ಹದಿನಾರು ಆಮ್‌ ಆದ್ಮಿ ಪಕ್ಷದವರಿಗೆ ಬಂದಿತ್ತು ಎನ್ನುವ ಆರೋಪ ಮಾಡಿದ್ದರು. ಭ್ರಷ್ಟಾಚಾರ, ಹಣ ಕೊಡುವ ಆಫರ್‌ ನೀಡಿದ್ದಾರೆಂದು ಆರೋಪ ಮಾಡಿರುವ ಕೇಜ್ರಿವಾಲ್‌ ಮನೆ ಮೇಲೆ ಎಸಿಬಿ ದಾಳಿಯಾಗಿದೆ.

ನಾಳೆ ದೆಹಲಿಯಲ್ಲಿ ಎಲ್ಲಾ 70 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರ ಬೀಳುತ್ತದೆ. ಇಂದು ಅರವಿಂದ ಕೇಜ್ರಿವಾಲ್‌ ಅವರು ಆಪ್‌ ನಾಯಕರುಗಳ, ಶಾಸಕರ ಸಭೆಯನ್ನು ಕರೆದಿದ್ದರು. ಇದರಲ್ಲಿ ಮುಖ್ಯವಾಗಿ ಚರ್ಚೆಯೊಂದನ್ನು ಮಾಡಿದ್ದಾರೆ. ಆಮ್‌ ಆದ್ಮಿ ಪಕ್ಷದ ಯಾವ ಶಾಸಕರು ಗೆಲ್ತಾರೆನ್ನುವ ವಿಶ್ವಾಸವಿದೆಯೋ ಅವರಿಗೆ ಬಿಜೆಪಿ ಒಬ್ಬೊಬ್ಬರಿಗೆ 15 ಕೋಟಿ ಆಮಿಷವನ್ನು ಒಡ್ಡಿದೆ ಎನ್ನುವ ಆರೋಪ ಮಾಡಿದ್ದರು. ಆಮ್‌ ಆದ್ಮಿ ಪಕ್ಷದ ಸಂಜಯ್‌ ಸಿಂಗ್‌ ಅವರು ಈ ಆರೋಪವನ್ನು ಮಾಡಿದ್ದರು. ಬಿಜೆಪಿ ನಾಯಕರು, ಆಮ್‌ ಆದ್ಮಿ ಪಕ್ಷದ ಶಾಸಕರಿಗೆ ಕರೆ ಮಾಡಿ ಒಬ್ಬೊಬ್ಬರಿಗೆ ಹದಿನೈದು ಕೋಟಿ ಆಮಿಷ ಒಡ್ಡಿರುವ ಜೊತೆಗೆ, ಮತ್ತು ಇನ್ನೊಬ್ಬ ಶಾಸಕನನ್ನು ಕರೆದುಕೊಂಡು ಬಂದಲ್ಲಿ ಅವರಿಗೆ ಮಂತ್ರಿ ಸ್ಥಾನವನ್ನು ಕೂಡಾ ಕೊಡ್ತೀವಿ ಎನ್ನುವ ಆಮಿಷವನ್ನು ಒಡ್ಡಿದ್ದಾರೆ ಎನ್ನುವ ಆರೋಪ ಮಾಡಿರುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಎಕ್ಸಿಟ್‌ ಪೋಲ್‌ನಲ್ಲಿ ಬಿಜೆಪಿ 50-60 ಸ್ಥಾನದಲ್ಲಿ ಗೆಲ್ತಾರೆ ಎನ್ನುವುದಾದರೆ, ಆಮ್‌ ಆದ್ಮಿ ಪಕ್ಷದವರಿಗೆ ಯಾಕೆ ಕರೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತು ಇದರ ಕುರಿತು ತನಿಖೆಯನ್ನು ನಡೆಸಬೇಕು ಎನ್ನುವ ಕುರಿತು ಸಭೆಯಲ್ಲಿ ಹೇಳಿದ್ದರು.

ಆದರೆ, ಇದಕ್ಕೆ ಬಿಜೆಪಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಆಮ್‌ ಆದ್ಮಿ ಪಕ್ಷ ಸುಖಾಸುಮ್ಮನೆ ಆರೋಪವನ್ನು ಮಾಡ್ತಾ ಇದೆ, ಯಾವುದೇ ರೀತಿಯ ಸಾಕ್ಷ್ಯಗಳನ್ನು ನೀಡದೆ ಆರೋಪ ಮಾಡುವ ಕುರಿತು ಬಿಜೆಪಿ ನಾಯಕರುಗಳು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರಿಗೆ ದೂರನ್ನು ನೀಡಿತ್ತು. ಇದೀಗ ವಿ.ಕೆ.ಸಕ್ಸೇನಾ ಅವರು ತನಿಖೆಗೆ ಆದೇಶವನ್ನು ನೀಡಿದ್ದಾರೆ. ಎಸಿಬಿ ಈಗಾಗಲೇ ತನಿಖೆ ಮಾಡುತ್ತಿದೆ. ಹಾಗಾಗಿ ಇದೀಗ ಅರವಿಂದ ಕೇಜ್ರಿವಾಲ್‌ ಅವರ ನಿವಾಸಕ್ಕೆ ಎಸಿಬಿ ಅಧಿಕಾರಿಗಳು ಈಗಾಗಲೇ ದಾಳಿ ಮಾಡುತ್ತಿದ್ದಾರೆ. ಆದರೆ ಇಲ್ಲಿ ಆಮ್‌ ಆದ್ಮಿ ಪಕ್ಷದವರು ನಾವು ಆರೋಪವನ್ನು ಮಾಡಿದ್ದು, ನಮ್ಮ ಮೇಲೆ ಯಾಕೆ ದಾಳಿ ಮಾಡುತ್ತಿದ್ದೀರಾ ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ.