Home News Viral Post: ಐಸ್ ಕ್ರೀಮ್ ನಲ್ಲಿ ಸತ್ತ ಹಾವು ಪತ್ತೆ!!

Viral Post: ಐಸ್ ಕ್ರೀಮ್ ನಲ್ಲಿ ಸತ್ತ ಹಾವು ಪತ್ತೆ!!

Hindu neighbor gifts plot of land

Hindu neighbour gifts land to Muslim journalist

Viral Post: ಇತ್ತೀಚಿಗೆ ಪ್ರತಿಷ್ಠಿತ ಆಹಾರ ಕಂಪನಿಗಳು ತಯಾರಿಸುವಂತಹ ಕೆಲವು ತಿನಿಸುಗಳಲ್ಲಿ ಕೀಟಗಳು,ಹಲ್ಲಿ, ಇಲಿಯಂತಹ ಜೀವಿಗಳು ಕಂಡುಬಂದು ಗ್ರಾಹಕರಿಗೆ ಅಘಾತ ಉಂಟು ಮಾಡಿರುವಂತಹ ಕೆಲವು ಘಟನೆಗಳನ್ನು ನಾವು ನೋಡಿದ್ದೇವೆ. ಇದೀಗ ಮತ್ತೆ ಅಂತದ್ದೇ ಪ್ರಕರಣ ಒಂದು ಬೆಳಕಿಗೆ ಬಂದಿದ್ದು ಇದು ಕೊಂಚ ವಿಚಿತ್ರವೆನಿಸುತ್ತದೆ. ಯಾಕೆಂದರೆ ಇಲ್ಲಿ ಐಸ್ ಕ್ರೀಮ್ ಒಂದರಲ್ಲಿ ಹಾವು ಪತ್ತೆಯಾಗಿದೆ.

ಹೌದು, ಥೈಲ್ಯಾಂಡ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದುವ್ಯಕ್ತಿಯೊಬ್ಬ ತನ್ನ ಐಸ್ ಕ್ರೀಮ್ನಲ್ಲಿ ಸತ್ತ, ಹೆಪ್ಪುಗಟ್ಟಿದ ಹಾವನ್ನು ಕಂಡುಹಿಡಿದಿದ್ದಾನೆ. ಅಂದಹಾಗೆ ಥೈಲ್ಯಾಂಡ್ ಮುಯಾಂಗ್ ರಾಚಬುರಿ ಪ್ರದೇಶದ ‘ರೇಬನ್ ನಕ್ಲೆಂಗ್ಬೂನ್’ ಎಂಬ ವ್ಯಕ್ತಿ ತನಗೆ ಬ್ಲ್ಯಾಕ್ ಬೀನ್ ಐಸ್ ಕ್ರೀಮ್ ಬಾರ್ ತಂದಿದ್ದಾನೆ. ತಿನ್ನಲು ಹೋದ ಗ್ರಾಹಕನಿಗೆ ಶಾಕ್ ಎದುರಾಗಿದೆ. ಅಲ್ಲದೆ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ‘ಕಪ್ಪು ಬೀನ್ಸ್, ಬೀದಿ ಆಹಾರ. ನಾನೇ ಖರೀದಿಸಿದ್ದು’ ಇಂದು ಪೋಸ್ಟ್ ಹಾಕಿಕೊಂಡಿದ್ದಾನೆ.