Home News Mangaluru : ದಿನದಿಂದ ದಿನಕ್ಕೆ ದಿಗಂತ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು – ‘ನಾನು ವಾಪಸ್...

Mangaluru : ದಿನದಿಂದ ದಿನಕ್ಕೆ ದಿಗಂತ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು – ‘ನಾನು ವಾಪಸ್ ಮನೆಗೆ ಹೋಗಲಾರೆ’ ಎಂದು ದಿಗಂತ್ !!

Hindu neighbor gifts plot of land

Hindu neighbour gifts land to Muslim journalist

Mangaluru : ಇತ್ತೀಚಿಗಷ್ಟೇ ಬಂಟ್ವಾಳದ ದಿಗಂತ್ ಎಂಬ ವಿದ್ಯಾರ್ಥಿ ನಾಪತ್ತೆ ಪ್ರಕರಣ ರಾಜ್ಯದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ದಿಗಂತ್ ಪತ್ತೆಯಾಗಿದ್ದು ಪರೀಕ್ಷೆ ಭಯದಿಂದ ಈತ ಮನೆ ಬಿಟ್ಟು ಹೋಗಿದ್ದ ಎಂಬ ವಿಚಾರದಿಂದ ಈ ಕೇಸ್ ಸುಖಾಂತ್ಯ ಕಾಣುವ ಹಂತದಲ್ಲಿತ್ತು. ಪ್ರಸ್ತುತ ಬಾಲಮಂದಿರದಲ್ಲಿರುವ ದಿಗಂತ್ ನನ್ನು ಮಾ. 12ರಂದು ಹೈಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಆದರೆ ಈ ಪ್ರಕರಣ ದಿನದಿಂದ ದಿನಕ್ಕೆ ತಿರುಗು ಪಡೆದುಕೊಳ್ಳುತ್ತಿದ್ದು ಇದೀಗ ದಿಗಂತ್ ನಾನು ಮರಳಿ ಮನೆಗೆ ಹೋಗುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದಾನೆ ಎಂದು ತಿಳಿದು ಬಂದಿದೆ.

ಹೌದು, ಫರಂಗಿಪೇಟೆ ಕಿದೆಬೆಟ್ಟು ‌ನಿವಾಸಿ ದಿಗಂತ್ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿತ್ತು. ದಿಗಂತ್ ಪತ್ತೆಯಾದ ಕೂಡಲೇ ಪೋಲೀಸರ ಆತನನ್ನು ವಶಕ್ಕೆ ಪಡೆದುಕೊಂಡು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತ್ರತ್ವದಲ್ಲಿ ಮಂಗಳೂರಿಗೆ ಕರೆತಂದಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಪಿಯುಸಿ ಪರೀಕ್ಷೆ ಭಯದಿಂದ ನಾನು ಮನೆ ಬಿಟ್ಟು ಹೋಗಿದ್ದೆ ಎಂದು ಹೇಳಿದಾನೆ. ಆದರೆ ಫರಂಗಿಪೇಟೆ ಕಿದೆಬೆಟ್ಟಿನ ದಿಗಂತ್ ಪತ್ತೆಯಾದ ಬಳಿಕವೂ ಪ್ರಕರಣದಲ್ಲಿ ಬೇರೆಬೇರೆ ಆಯಾಮಗಳು ಕಂಡು ಬರುತ್ತಿವೆ.

ವಿಚಾರಣೆ ವೇಳೆ ತಾನು ಯಾವ ಕಾರಣಕ್ಕೆ ಮನೆ ಬಿಟ್ಟು ತೆರಳಿರುವುದು ಎಂಬುದರ ಬಗ್ಗೆ ದಿಗಂತ್ ತಿಳಿಸಿರುತ್ತಾನೆ. ಮತ್ತು ಮಹತ್ವದ ಹೇಳಿಕೆಯನ್ನು ಕೂಡ ಹೇಳಿರುತ್ತಾನೆ. ನಾನು ವಾಪಸು ಮನೆಗೆ ಹೋಗುವುದು ಇಲ್ಲ ಎಂಬ ಮಾತನ್ನು ಪೋಲೀಸರಲ್ಲಿ ಹೇಳಿಕೊಂಡಿದ್ದಾನೆ. ಆದರೆ ಯಾವ ಕಾರಣಕ್ಕಾಗಿ ವಾಪಸು ಮನೆಗೆ ಹೋಗುವುದಿಲ್ಲ ಎಂಬುದನ್ನು ಪೋಲೀಸರು ಸ್ಪಷ್ಟಪಡಿಸಿಲ್ಲ. ಇದೇ ಮಾತನ್ನು ಆತನ ಪೋಷಕರ ಬಳಿಯೂ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈತನ ಈ ಹೇಳಿಕೆ ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ. ಸತತವಾಗಿ 12 ದಿನಗಳ ಕಾಲ ಊರೂರು ಸುತ್ತಿದ ದಿಗಂತ್ ಉಡುಪಿಯಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಮನೆಗೆ ತೆರಳುವುದಿಲ್ಲ ಎಂಬ ಮಾತಿನ ಮರ್ಮವೇನು? ಎಂಬುದು ನಿಗೂಢವಾಗಿ ಉಳಿದಿದೆ.