Home News Davanagere: ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ ಆತ್ಮಹತ್ಯೆಗೆ ಶರಣು

Davanagere: ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ ಆತ್ಮಹತ್ಯೆಗೆ ಶರಣು

Davanagere

Hindu neighbor gifts plot of land

Hindu neighbour gifts land to Muslim journalist

Davanagere: ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರ ಅಳಿಯ ಪ್ರತಾಪ್‌ ಕುಮಾರ್‌ ಕೆಜಿ (41) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.

Bharath Shetty: ʼರಾಹುಲ್‌ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು ಅನ್ನಿಸುತಿದೆʼ- ಶಾಸಕ ಡಾ. ವೈ ಭರತ್‌ ಶೆಟ್ಟಿ ಆಕ್ರೋಶ

ಬಿಸಿ ಪಾಟೀಲ್‌ ಅವರ ದೊಡ್ಡ ಮಗಳ ಗಂಡ ಪ್ರತಾಪ್‌ ಕುಮಾರ್‌ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿರುವವರು.

ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರನ್ನು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳಿಯರು ಕೂಡಲೇ ಪ್ರತಾಪ್‌ ಕುಮಾರ್‌ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಹೀಗಾಗಿ ಅವರು ಮೃತ ಹೊಂದಿದ್ದಾರೆ.

ಬಿಸಿ ಪಾಟೀಲ್‌ ಅವರ ದೊಡ್ಡ ಮಗಳನ್ನು 15 ವರ್ಷದ ಹಿಂದೆ ಪ್ರತಾಪ್‌ ಕುಮಾರ್‌ ಅವರು ಮದುವೆಯಾಗಿದ್ದರು. ಕಾರಿನಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪ್ರತಾಪ್‌ ಕುಮಾರ್‌ ಅವರು ಬಿ.ಸಿ.ಪಾಟೀಲ್‌ ಅವರ ಪತ್ನಿ ವನಜಾ ಅವರ ಸಹೋದರರಾಗಿದ್ದು, ತಮಗೆ ಗಂಡು ಮಕ್ಕಳು ಇಲ್ಲದ ಕಾರಣ ತಮ್ಮ ಹಿರಿಮಗಳಾದ ಸೌಮ್ಯಳಿಗೆ ಪ್ರತಾಪ್‌ ಕುಮಾರ್‌ ಅವರಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆ ನಂತರ ಪ್ರತಾಪ್‌ ಅವರು ಮಾವ ಬಿ.ಸಿ.ಪಾಟೀಲ್‌ ಅವರ ಕೃಷಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಈ ಆತ್ಮಹತ್ಯೆ ಸುದ್ದಿ ಕೇಳಿ ಬಿ.ಸಿ.ಪಾಟೀಲ್‌ ಅವರು ಶಾಕ್‌ಗೊಳಗಾಗಿದ್ದಾರೆ.

School Holiday: ನಾಳೆ (ಜುಲೈ 9) ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ