Home News D K Shivkumar : ರಾತ್ರಿ ಆದ್ರೆ ಸಾಕು ದಕ್ಷಿಣ ಕನ್ನಡ ಫುಲ್ ಡೆಡ್ ಆಗುತ್ತೆ,...

D K Shivkumar : ರಾತ್ರಿ ಆದ್ರೆ ಸಾಕು ದಕ್ಷಿಣ ಕನ್ನಡ ಫುಲ್ ಡೆಡ್ ಆಗುತ್ತೆ, ಅವರಿಗೆ ನೈಟ್ ಎಂಟರ್ಟೈನ್ಮೆಂಟ್ ಬೇಕು – ಸದನದಲ್ಲಿ ಡಿಕೆಶಿ ಹೇಳಿಕೆ!!

Hindu neighbor gifts plot of land

Hindu neighbour gifts land to Muslim journalist

D K Shivkumar : ದಕ್ಷಿಣ ಕನ್ನಡ ಜಿಲ್ಲೆಯವರಿಗೆ ರಾತ್ರಿ 7:00ಯ ಬಳಿಕ ಎಂಟರ್ಟೈನ್ಮೆಂಟ್ ಇರಲೇಬೇಕು. ಇಲ್ಲ ಅಂದರೆ ಅವರು ಯಾರು ಮನೆ ಬಿಟ್ಟು ಹೊರಗೆ ಬರುವುದಿಲ್ಲ ಇಂದು ವಿಧಾನಸೌಧ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಡಿಕೆ ಶಿವಕುಮಾರ್ ಅವರು ಈ ರೀತಿಯ ಸ್ವಾರಸ್ಯಕರವಾದ ಚರ್ಚೆ ಒಂದನ್ನು ಎತ್ತಿಕೊಂಡಿದ್ದು ದಕ್ಷಿಣ ಕನ್ನಡದಲ್ಲಿ ಎಲ್ಲದಕ್ಕೂ ಅವಕಾಶವಿದೆ. ಅಲ್ಲಿ ಹೆಲ್ತ್ ಟೂರಿಸಂ ಮಾಡಬಹುದು, ಅತೀ ಎಜುಕೇಷನಲ್ ಟೂರಿಸಂ ಮಾಡಬಹುದು, ಧಾರ್ಮಿಕ ಟೂರಿಸಂ ಮಾಡಬಹುದು. ಅತೀ ಹೆಚ್ಚು ಕಾಲೇಜುಗಳು, ಬೀಚ್ ಎಲ್ಲವೂ ಇದೆ. ಆದರೆ ಅಲ್ಲಿ ರಾತ್ರಿ ಆದರೆ ಸಾಕು ಸಿಟಿ ಡೆಡ್ ಆಗಿರುತ್ತದೆ.

ಯುವ ಜನತೆ ಮನೆಯಿಂದಾನೇ ಹೊರಗೆ ಬರಲ್ಲ. ಯಾಕೆಂದರೆ ಅಲ್ಲಿ ರಾತ್ರಿ ಯುವಜನತೆ ಮನೆಯಿಂದ ಹೊರಗೆ ಬರುವಂತೆ ಯಾವುದೇ ಎಂಟರ್ ಟೈನ್ ಮೆಂಟ್ ನಡೆಯಲ್ಲ. ಕೇವಲ ಯಕ್ಷಗಾನ, ಜಾತ್ರೆ, ಧಾರ್ಮಿಕ ಉತ್ಸವ ಬಿಟ್ಟರೆ ರಾತ್ರಿಯಾದರೆ ಸಾಕು ಸಿಟಿ ಡೆಡ್ ಆಗಿಬಿಡುತ್ತದೆ. ಹೀಗಾಗಿ ಇಲ್ಲಿನ ಶಾಸಕರು, ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಯುವಜನತೆಯನ್ನು ಹೊರಗೆ ಬರುವಂತೆ ಮಾಡಿ ಎಂದು ವಿನಂತಿಸಿದರು.

ಈ ವೇಳೆ ಎದ್ದು ನಿಂತು ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ಜಿಲ್ಲೆಯ ಅಭಿವೃದ್ದಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿಗಳ ಜೊತೆ ನಾವು ಎಲ್ಲಾ ಬಿಜೆಪಿ ಶಾಸಕರು ಒಟ್ಟಾಗಿ ನಿಲ್ಲುತ್ತೇವೆ ಎಂದು ಹೇಳಿದರು.