Home News Mangaluru: ಮೇ.25ರಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಭವನ ಘಟಕ ಉದ್ಘಾಟನೆ

Mangaluru: ಮೇ.25ರಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಭವನ ಘಟಕ ಉದ್ಘಾಟನೆ

Hindu neighbor gifts plot of land

Hindu neighbour gifts land to Muslim journalist

Mangaluru: ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಹಾಗೂ ಗ್ರಂಥಾಲಯದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವು ಮೇ.25ರಂದು ಅಪರಾಹ್ನ 2ರಿಂದ ಮಂಗಳೂರು (Mangaluru) ಉರ್ವಸ್ಟೋರಿನ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸಭಾ ಭವನದಲ್ಲಿ ನಡೆಯಲಿದೆ.

ಕನ್ನಡ ಭವನ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಡಾ. ರವೀಂದ್ರ ಜೆಪ್ಪು ದೀಪ ಬೆಳಗಿಸುವರು. ಕೆ ಉದಯ ಕುಮಾರ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರದೀಪ್ ಕುಮಾರ ಕಲ್ಕೂರಾ ಅವರು ಕನ್ನಡ ಧ್ವಜ ನೀಡುವ ಮೂಲಕ ಘಟಕಕ್ಕೆ ಚಾಲನೆ ನೀಡಲಿದ್ದು, ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಗಣೇಶ ಕಾರ್ಣಿಕ್, ಡಾ. ಶಿವಾನಂದ ಬೇಕಲ್ ಅವರಿಗೆ ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ-25 ಪ್ರದಾನ ಮಾಡಲಾಗುವುದು.

ಯೋಗೀಶ್ ಕುಮಾರ ಜೆಪ್ಪು, ಜೆ ಕೆ ರಾವ್ ಮಂಗಳೂರು, ನಾಡೋಜ ಡಾ ಕೃಷ್ಣ ಪ್ರಸಾದ ಕೂಡ್ಲು, ಕೆ ಉದಯ ಕುಮಾರ, ಡಾ ಮಂಜುಳಾ ಅನಿಲ್ ರಾವ್, ಡಾ. ಕೆ ವಿ ದೇವಪ್ಪ ಮಂಗಳೂರು ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ-25 ಪ್ರದಾನ ಮಾಡಲಾಗುವುದು.

ಕಾಸರಗೋಡಿನ ಕನ್ನಡ ಭವನ ಪ್ರಕಾಶನದ 8ನೇ ಕೃತಿಯಾದ, ರೇಖಾ ಸುದೇಶ್ ರಾವ್ ಅವರ, ‘ಶರಧಿಯಾಚೆ ಪ್ರಪ್ರಥಮ ಹೆಜ್ಜೆ’ ಕೃತಿ ಹಾಗೂ ಮಾನ್ಯ ನುಳ್ಳಿಪ್ಪಾಡಿ ರಚಿಸಿದ ‘ಏನ್ ಆರ್ಟ್ ಅಫ್ ಪೊಯೆಟ್ರಿ’ ಕೃತಿ ಬಿಡುಗಡೆಯಾಗಲಿದೆ.