Home News Viral Video: ಮಗಳ ತಲೆಗೆ ಕಿರೀಟದಂತೆ ಸಿಸಿ ಕ್ಯಾಮೆರಾ ಅಳವಡಿಸಿದ ಅಪ್ಪ – ಕಾರಣ ತಿಳಿದು...

Viral Video: ಮಗಳ ತಲೆಗೆ ಕಿರೀಟದಂತೆ ಸಿಸಿ ಕ್ಯಾಮೆರಾ ಅಳವಡಿಸಿದ ಅಪ್ಪ – ಕಾರಣ ತಿಳಿದು ಬೆಚ್ಚಿಬಿದ್ದ ನೆಟ್ಟಿಗರು

Viral Video

Hindu neighbor gifts plot of land

Hindu neighbour gifts land to Muslim journalist

Viral Video: ಹೆತ್ತವರಿಗೆ ತಮ್ಮ ಮಕ್ಕಳು ಸಮಾಜದಲ್ಲಿ ಸಭ್ಯರಾಗಿ ಬಾಳಬೇಕು, ಒಳ್ಳೇ ದಾರಿ ಹಿಡಿಯಬೇಕು ಎಂಬುದು ಆಸೆ. ಆದರೆ ಇಂದಿನ ಯುಗದಲ್ಲಿ ಮಕ್ಕಳ ಸ್ಥಿತಿ, ಮಕ್ಕಳು ಸಾಗುವ ದಾರಿ ಕಂಡು ಹೆತ್ತವರು ಆತಂಕಕ್ಕೆ ಒಳಗಾಗಿದ್ದಾರೆ. ಹೆಚ್ಚಿನ ಮಕ್ಕಳು ಆಕರ್ಷಣೆ, ದುಶ್ಚಟಗಳಿಗೆ ಒಳಗಾಗಿ ಬದುಕನ್ನೇ ಕೆಡಿಸಿಕೊಳ್ಳುತ್ತಿದ್ದಾರೆ. ಹೆತ್ತವರು ಎಷ್ಟೇ ಪ್ರಯತ್ನಿಸಿದರೂ ಹೆಚ್ಚಿನ ಮಕ್ಕಳು ಏನನ್ನೂ ಅರ್ಥೈಸಿಕೊಳ್ಳದೆ ಬೇಕಾಬಿಟ್ಟಿ ಮನಬಂದಂತೆ ಬದುಕುತ್ತಿರುವುದು ದುರಂತವೇ ಸರಿ.

ಇಂತಹ ಹಲವಾರು ಆರೋಪಗಳನ್ನು, ಉದಾಹರಣೆಗಳನ್ನು ಕಂಡು ರೋಸಿ ಹೋದ ಅಪ್ಪನೊಬ್ಬ ತನ್ನ ಮಗಳನ್ನು ಕಾಯಲು ಅಚ್ಚರಿಯ ಐಡಿಯಾವನ್ನು ಕಂಡುಕೊಂಡು, ಅದನ್ನು ಕಾರ್ಯಗತಗೊಳಿಸಿದ್ದಾನೆ. ಅದೇನೆಂದರೆ ಆತ ತನ್ನ ಮಗಳ ಮೇಲೆ ಕಿರೀಟದಂತೆ ಸಿಸಿ ಕ್ಯಾಮೆರಾ ಅಳವಡಿಸಿ ಎಲ್ಲರೂ ದಂಗಾಗುವಂತೆ ಮಾಡಿದ್ದಾನೆ.

ಹೌದು, ಸಾರ್ವಜನಿಕ ಸ್ಥಳ, ಕಂಪೆನಿ ಹಾಗೂ ಮನೆಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗಳ ತಲೆ ಮೇಲೆ ಕಿರೀಟದಂತೆ ಸಿಸಿಟಿವಿಯನ್ನು ಅಳವಡಿಸಿದ್ದು, ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಮಗಳು ಎಲ್ಲೆಲ್ಲಿ ಹೋಗ್ತಾಳೆ? ಏನು ಮಾಡುತ್ತಾಳೆ ಎಂದು ತಿಳಿಯಲು ಈತ ತನ್ನ ಮಗಳ ತಲೆ ಮೇಲೆ ಸಿಸಿಟಿವಿ ಅಳವಡಿಸಿರುವುದಾಗಿ ವರದಿಯಾಗಿದೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

@gharkekalesh ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ತನ್ನ ತಂದೆ 24/7 ತನ್ನ ಮೇಲೆ ನಿಗಾ ವಹಿಸಲು ಸಿಸಿಟಿವಿ ಫಿಕ್ಸ್​​ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಇದಲ್ಲದೇ ತಂದೆಯ ಈ ನಿರ್ಧಾರದಿಂದ ನಾನು ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.