Home News DA Hike: ರಾಜ್ಯ ಸರ್ಕಾರಿ ನೌಕರರಿಗೂ ಭರ್ಜರಿ ಗುಡ್ ನ್ಯೂಸ್ – ದೀಪಾವಳಿ ಮುನ್ನ ‘ಡಿಎ’...

DA Hike: ರಾಜ್ಯ ಸರ್ಕಾರಿ ನೌಕರರಿಗೂ ಭರ್ಜರಿ ಗುಡ್ ನ್ಯೂಸ್ – ದೀಪಾವಳಿ ಮುನ್ನ ‘ಡಿಎ’ ಯಲ್ಲಿ ಭಾರೀ ಏರಿಕೆ !!

DA Hike

Hindu neighbor gifts plot of land

Hindu neighbour gifts land to Muslim journalist

DA Hike: ಒಡಿಶಾ, ಕರ್ನಾಟಕದಿಂದ ತಮಿಳುನಾಡುವರೆಗೆ ವಿವಿಧ ರಾಜ್ಯಗಳು ತಮ್ಮ ಸರ್ಕಾರಿ ನೌಕರರಿಗೆ ದೀಪಾವಳಿಗೆ ಮುಂಚಿತವಾಗಿ ತುಟ್ಟಿಭತ್ಯೆಯನ್ನು ಹೆಚ್ಚಿಸಿವೆ(DA Hike). ಕೆಲವು ರಾಜ್ಯಗಳು ಶೇಕಡ 3 ರಷ್ಟು ಡಿಎ ಹೆಚ್ಚಳವನ್ನು ಘೋಷಿಸಿದರೆ, ಇತರ ರಾಜ್ಯಗಳು ತಮ್ಮ ಉದ್ಯೋಗಿಗಳಿಗೆ ಶೇಕಡ 4 ರಷ್ಟು ತುಟ್ಟಿಭತ್ಯೆಯನ್ನು ಘೋಷಣೆ ಮಾಡಿದ್ದಾರೆ. ಕಳೆದ ವಾರ ಕೇಂದ್ರವು ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ಡಿಎ ಹೆಚ್ಚಿಸಿದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಶೇಕಡ 3 ರಷ್ಟು ಡಿಎ ಹೆಚ್ಚಿಸಿದ ಕರ್ನಾಟಕ: ಕಳೆದ ಶನಿವಾರ, ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇಕಡ 3.75 ರಷ್ಟು ಹೆಚ್ಚಿಸಿದೆ. ತುಟ್ಟಿ ಭತ್ಯೆಯನ್ನು ಈಗಿರುವ ಶೇಕಡ 35ರಿಂದ ಶೇಕಡ 38.75ಕ್ಕೆ ಪರಿಷ್ಕರಿಸುತ್ತಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಹೆಚ್ಚಳದಿಂದ ರಾಜ್ಯ ಸರ್ಕಾರವು 1,109 ಕೋಟಿ ರೂಪಾಯಿ ವೆಚ್ಚವನ್ನು ವ್ಯಯಿಸಬೇಕಾಗಿದೆ.

ನೌಕರರ ಸಂಘಗಳ ನಿರಂತರ ಬೇಡಿಕೆ ಬಳಿಕ ರಾಜ್ಯ ಸರ್ಕಾರವು ಈ ವರ್ಷದ ಮಾರ್ಚ್‌ನಲ್ಲಿ ಮೂಲ ವೇತನವನ್ನು ಶೇಕಡ 17 ರಷ್ಟು ಹೆಚ್ಚಿಸಿದೆ. ನಂತರ ರಾಜ್ಯವು ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್) ಹಿಂತಿರುಗಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸುವುದಾಗಿ ಘೋಷಿಸಿತು.

ಇನ್ನು ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡ 3 ರಷ್ಟು ಹೆಚ್ಚಿಸುವ ನಿರೀಕ್ಷೆಯಿತ್ತು. ಆದರೆ ತುಟ್ಟಿಭತ್ಯೆಯನ್ನು ಶೇಕಡ 4 ರಷ್ಟು ಏರಿಕೆ ಮಾಡಲಾಗುತ್ತಿದೆ. ಈ ನೂತನ ಡಿಎ ಏರಿಕೆಯು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಅಂದರೆ ಉದ್ಯೋಗಿಗಳು ಅಕ್ಟೋಬರ್ ತಿಂಗಳಿನಿಂದ ಅಧಿಕ ವೇತನವನ್ನು ಪಡೆಬಹುದು. ಜೊತೆಗೆ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಬಾಕಿಯನ್ನು ಪಡೆಯಬಹುದು.

ಶೇಕಡ 4ರಷ್ಟು ಡಿಎ ಏರಿಸಿದ ತಮಿಳುನಾಡು: ಬುಧವಾರ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜುಲೈ 1, 2023 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ಡಿಎ ಹೆಚ್ಚಳವನ್ನು ಘೋಷಿಸಿದರು. ಈ ಕ್ರಮವು ಸುಮಾರು 16 ಲಕ್ಷ ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ತಮಿಳುನಾಡು ಸರ್ಕಾರವು ಈ ವರ್ಷದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡ 4 ರಷ್ಟು ಡಿಎ ಅನ್ನು ಹೆಚ್ಚಿಸಿದೆ. ಡಿಎಯನ್ನು ಶೇಕಡ 42 ರಿಂದ ಶೇಕಡ 46 ಕ್ಕೆ ಹೆಚ್ಚಿಸಲಾಗಿದೆ.

ಡಿಎ ಶೇಕಡ 4 ರಷ್ಟು ಹೆಚ್ಚಿಸಿದ ಒಡಿಶಾ: ಕಳೆದ ವಾರ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರಾಜ್ಯದ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡ 4 ರಷ್ಟು ಹೆಚ್ಚಿಸಿದೆ. ಈ ಹೆಚ್ಚಳದೊಂದಿಗೆ, ಡಿಎ ಮತ್ತು ಡಿಆರ್ ಈಗ ಶೇಕಡ 42 ರಿಂದ ಶೇಕಡ 46 ಕ್ಕೆ ಏರಿದೆ. ಈ ನೂತನ ಡಿಎ ಏರಿಕೆ ಜುಲೈ 1, 2023 ರಿಂದ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಡಿಎ ಹೆಚ್ಚಳವು 4.5 ಲಕ್ಷ ರಾಜ್ಯ ಸರ್ಕಾರಿ ನೌಕರರು ಮತ್ತು ಒಡಿಶಾದ 3.5 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ.

 

ಇದನ್ನು ಓದಿ: Tourism: ಇನ್ಮುಂದೆ ಈ ದೇಶಕ್ಕೆ ತೆರಳಲು ವೀಸಾ ಅಗತ್ಯವಿಲ್ಲ – ಭಾರತಕ್ಕೂ ಉಂಟಾ ಈ ರಿಯಾಯಿತಿ?!