Home News Vinod Sehwag Arrested: ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಸಹೋದರನ ಬಂಧನ

Vinod Sehwag Arrested: ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಸಹೋದರನ ಬಂಧನ

Hindu neighbor gifts plot of land

Hindu neighbour gifts land to Muslim journalist

Virender Sehwag: ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಅವರ ಕಿರಿಯ ಸಹೋದರ ವಿನೋದ್‌ ಸೆಹ್ವಾಗ್‌ ರನ್ನು ಚಂಡೀಗಢ ಪೊಲೀಸರು ಬಂಧನ ಮಾಡಿದ್ದಾರೆ. ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನೋದ್‌ ಸೆಹ್ವಾಗ್‌ ಅವರನ್ನು ಬಂಧನ ಮಾಡಲಾಗಿದೆ. ಅವರ ವಿರುದ್ಧ 7 ಕೋಟಿ ರೂ.ಗಳ ಚೆಕ್‌ ಬೌನ್ಸ್‌ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ ವಿನೋದ್‌ ಸೆಹ್ವಾಗ್‌ ಹಾಜರಾಗದ ಕಾರಣ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ನ್ಯಾಯಾಲಯವು ಘೋಷಣೆ ಮಾಡಿತ್ತು.
ಹಾಗಾಗಿ ಸೆಹ್ವಾಗ್‌ ಅವರ ಸಹೋದರನನ್ನು ಚಂಡೀಗಢದ ಮಣಿಮಾಜ್ರಾ ಪೊಲೀಸ್‌ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ. ವಿನೋದ್‌ ಸೆಹ್ವಾಗ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಶೀಘ್ರ ವಿಚಾರಣೆ ನಡೆಯಲಿದೆ.

ಪ್ರಕರಣ ವಿವರ:
ವಿನೋದ್‌ ಸೆಹ್ವಾಗ್‌ ಹರಿಯಾಣದ ರೋಹ್ಟಕ್‌ನಲ್ಲಿರುವ ಬಹದ್ದೂರ್‌ಗಢ ಬಳಿ ತಂಪು ಪಾನೀಯಗಳ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ಸುಧೀರ್‌ ಮಲ್ಹೋತ್ರಾ, ವಿಷ್ಣು ಮಿತ್ತಲ್‌ ಇವರಿಬ್ಬರು ಇದರ ವ್ಯಾಪಾರ ಪಾಲುದಾರರು. ದೆಹಲಿ ನಿವಾಸಿಗಳಾದ ಈ ಮೂವರು, ಹಿಮಾಚಲ ಪ್ರದೇಶದ ಬಡ್ಡಿಯಲ್ಲಿರುವ ನೈನಾ ಪ್ಲಾಸ್ಟಿಕ್‌ ಕಾರ್ಖಾನೆಯಿಂದ ತಂಪು ಪಾನೀಯಗಳನ್ನು ತುಂಬುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಖರೀದಿ ಮಾಡಿತ್ತು.

ಇದರ ಬೆಲೆ ಸುಮಾರು 7 ಕೋಟಿಗಳಷ್ಟಿತ್ತು. 2018 ಜೂನ್‌ನಲ್ಲಿ ದೂರುದಾರ ಕಂಪನಿಗೆ ತಲಾ 1 ಕೋಟಿ ರೂ.ಗಳ 7 ಬ್ಯಾಂಕ್‌ ಚೆಕ್‌ಗಳನ್ನು ನೀಡಿತ್ತು. ಆದರೆ ಈ ಚೆಕ್‌ ಕಂಪನಿ ಜಮಾ ಮಾಡಿದಾಗ ಬೌನ್ಸ್‌ ಆಗಿತ್ತು. ಈ ಕುರಿತು ಮಾಹಿತಿ ನೀಡಿದ ಬಳಿಕವೂ ಚೆಕ್‌ ಕ್ಲಿಯರ್‌ ಆಗಿರಲಿಲ್ಲ. ನಂತರ 15 ದಿನದಲ್ಲಿ ಪಾವತಿ ಮಾಡಲು ಹೇಳಲಾಯಿತು. ಕಾನೂನು ನೋಟಿಸ್‌ ನೀಡಿದ ನಂತರವೂ ಪಾವತಿ ಆಗದೇ ಇದ್ದಾಗ, ಚೆಕ್‌ ಬೌನ್ಸ್‌ ಪ್ರಕರಣ ದಾಖಲು ಮಾಡಲಾಗಿತ್ತು.