Home News Viral Video : 2 ಗಂಟೆಯಿಂದ ರೈಲಿನ ಶೌಚಾಲಯದೊಳಗಿದ್ದ ಜೋಡಿ – ಹುಡುಗಿಯ ಮಾತು ಕೇಳಿ...

Viral Video : 2 ಗಂಟೆಯಿಂದ ರೈಲಿನ ಶೌಚಾಲಯದೊಳಗಿದ್ದ ಜೋಡಿ – ಹುಡುಗಿಯ ಮಾತು ಕೇಳಿ ಪ್ರಯಾಣಿಕರೆಲ್ಲ ಶಾಕ್

Hindu neighbor gifts plot of land

Hindu neighbour gifts land to Muslim journalist

Viral Video : ಭಾರತೀಯ ರೈಲಿನಲ್ಲಿ ಯುವ ಜೋಡಿ ಒಂದು ಸುಮಾರು ಎರಡು ಗಂಟೆಗಳ ಕಾಲ ರೈಲು ಶೌಚಾಲಯದೊಳಗೆ ಲಾಕ್ ಮಾಡಿಕೊಂಡಿದ್ದು, ನಂತರ ಶೌಚಾಲಯದಿಂದ ಹೊರಬಂದ ಯುವತಿ ನನ್ನ ಇಷ್ಟ ಎಂದು ಹೇಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೀ ಕುರಿತಾದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೈಲಿನ ಶೌಚಾಲಯವನ್ನು ಈ ಜೋಡಿ ಲಾಕ್ ಮಾಡಿಕೊಂಡಿದ್ದರಿಂದ ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟುಮಾಡಿದೆ. ಆಗ ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಅಂತಿಮವಾಗಿ ರೈಲ್ವೆ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಕೊನೆಗೆ ಬಾಗಿಲು ತೆರೆದಾಗ, ಆ ಯುವಕ ಹೊರಗೆ ಬಂದು ಮಹಿಳೆ ಮುಟ್ಟಾಗಿದ್ದಳು. ಅದಕ್ಕೆ ನೋವಿನಿಂದ ಬಳಲುತ್ತಿದ್ದಳು ಎಂದು ಹೇಳುತ್ತಾನೆ. ಆದರೆ ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿದ್ದು ಮಹಿಳೆಯ ಹೇಳಿಕೆ. ಯಾಕೆಂದರೆ ಯುವತಿ, ‘ನನಗೆ ಸಮಸ್ಯೆ ಇದ್ದು, ನಾನು ಯಾರನ್ನು ಒಳಗೆ ಕರೆದುಕೊಂಡು ಹೋಗಬೇಕೋ ಅದು ನನ್ನ ಆಯ್ಕೆ ಎಂದು ಹೇಳಿದ್ದಾಳೆ.

ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕ ನಡವಳಿಕೆ, ನಾಗರಿಕ ಪ್ರಜ್ಞೆ ಮತ್ತು ಪ್ರಯಾಣಿಕರ ಹಕ್ಕುಗಳ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಸಾರ್ವಜನಿಕ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡ ಮತ್ತು ಇತರರಿಗೆ ಉಂಟಾಗುವ ಅಸ್ವಸ್ಥತೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಅನೇಕ ಬಳಕೆದಾರರು ಜೋಡಿಯನ್ನು ಟೀಕಿಸಿದ್ದಾರೆ. ಅಲ್ಲದೆ ರೈಲಿನ ಶೌಚಾಲಯವು OYO ಅಲ್ಲ! ‘ನನ್ನ ಆಯ್ಕೆ’ ಇಲ್ಲಿ ಅನ್ವಯಿಸುವುದಿಲ್ಲ, ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ ಎಂದು ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.