Home News Guidelines for New Year Celebration: ಹೊಸ ವರ್ಷಕ್ಕೆ ದಿನಗಣನೆ ಪ್ರಾರಂಭ, ಮಾರ್ಗಸೂಚಿ ಬಿಡುಗಡೆ

Guidelines for New Year Celebration: ಹೊಸ ವರ್ಷಕ್ಕೆ ದಿನಗಣನೆ ಪ್ರಾರಂಭ, ಮಾರ್ಗಸೂಚಿ ಬಿಡುಗಡೆ

Hindu neighbor gifts plot of land

Hindu neighbour gifts land to Muslim journalist

ಇಡೀ ವಿಶ್ವ ಹೊಸ ವರ್ಷದ ಆಚರಣೆ ಮಾಡಲು ತುದಿಗಾಲಲ್ಲಿ ನಿಂತಿದೆ. ಬೆಂಗಳೂರಲ್ಲೂ ಹೊಸ ವರ್ಷದ ಆಚರಣೆ ಸಂಭ್ರಮ ಇರಲಿದ್ದು, ಹಾಗಾಗಿ ಈ ಬಾರಿ ಯಾವುದೇ ಅನುಚಿತ ವರ್ತನೆ, ಗದ್ದಲ, ಗಲಾಟೆಗಳು ನಡೆಯದಿರುವಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ. ಪಬ್‌, ಕ್ಲಬ್‌, ಪಿಜಿ ಮಾಲೀಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳುವ ಕ್ರಮದಲ್ಲಿದ್ದಾರೆ.

ಠಾಣಾ ಮಟ್ಟದಲ್ಲಿ ಸಭೆ ನಡೆಸಲಿರುವ ಆಯಾ ಠಾಣೆ ಇನ್ಸ್‌ಪೆಕ್ಟರ್‌, ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಇದಕ್ಕೆ ತಪ್ಪಿದ್ದಲ್ಲಿ ಕರ್ನಾಟಕ ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ಕೂಡಾ ಇದೆ.

ಪಿಜಿಗಳಿಗೆ ಮಾರ್ಗಸೂಚಿ ವಿವರ;
ಪಿಜಿಯಲ್ಲಿ ಇರುವವರು ಆಗಮನ, ನಿರ್ಗಮನದ ಕುರಿತು ಸರಿಯಾದ ಸಮಯವನ್ನು ಲೆಡ್ಜರ್‌ನಲ್ಲಿ ನಮೂದು ಮಾಡಬೇಕು.
ಪಿಜಿ ಟೆರೆಸ್‌ಗಳ ಮೇಲೆ ಪಾರ್ಟಿ ಮಾಡಿ ಕುಡಿಯುವವರ ಕುರಿತು ಮಾಹಿತಿ ಬರೆದಿಡಬೇಕು.
ಹೊಸಬರನ್ನು, ಅಪರಿಚಿತರನ್ನು ಪಿಜಿಯೊಳಗೆ ಬರಲು ಬಿಡಬಾರದು
ಪಿಜಿ ಮುಂಭಾಗದ ರಸ್ತೆಯಲ್ಲಿ ಕೇಕ್‌ ಕಟ್‌ ಮಾಡಬಾರದು.
ಮಹಿಳಾ ಪಿಜಿಗಳಿಗೆ ಶುಭ ಕೋರಲೆಂದು ಬರುವ ಪುರುಷರಿಗೆ ಅವಕಾಶ ನೀಡಬಾರದು.
ಏನಾದರೂ ಅಹಿತಕರ ಘಟನೆ ನಡೆದಲ್ಲಿ ಇದಕ್ಕೆ ಪಿಜಿ ಮಾಲೀಕರೇ ಹೊಣೆ ಎಂದು ನೋಟಿಸ್‌ ನೀಡಲು ಪೊಲೀಸರು ಸಜ್ಜಾಗಿದ್ದಾರೆ.

ಪಬ್‌ ರೆಸ್ಟೋರೆಂಟ್‌ನ ಮಾಲೀಕರಿಗೆ
ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು
ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಜೊತೆಗೆ ಅವುಗಳು ಕಾರ್ಯನಿರ್ವಹಿಸಬೇಕು
ಸಿಸಿಟಿವಿ ಫೂಟೇಜ್‌ ಬ್ಯಾಕಪ್‌ ಇಟ್ಟುಕೊಳ್ಳಬೇಕು
ಗ್ರಾಹಕರ ಬ್ಯಾಗ್‌ ಲಗೇಜ್‌ಗಳನ್ನು ತಪ್ಪದೇ ಚೆಕ್‌ ಮಾಡಬೇಕು.
ಕಾರ್ಯಕ್ರಮಕ್ಕೆ ಬರುವವರಲ್ಲಿ ಆಯುಧ, ಸ್ಫೋಟಕ, ಗಾಂಜಾ ಸೇರಿ ಯಾವುದೇ ಮಾದಕ ವಸ್ತುಗಳು ಇಲ್ಲದಿರುವುದರ ಕುರಿತು ಖಚಿತಪಡಿಸಬೇಕು.
ಕಾರ್ಯಕ್ರಮಕ್ಕೆ ಬರುವ ಗ್ರಾಹಕರಿಗೆ ಆಗಮನ ನಿರ್ಗಮನ ಸ್ಥಳ ಪ್ರತ್ಯೇಕವಿರಬೇಕು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ ಒಳಗಡೆ ಪ್ರವೇಶ ನೀಡಬಾರದು.
ಹೆಚ್ಚಾಗಿ ಮದ್ಯಪಾನ ಮಾಡಿದವರು ಸುಧಾರಿಸಿಕೊಳ್ಳಲು ಐಸ್‌ಲ್ಯಾಂಡ್‌ ಸ್ಥಳ ಆಯೋಜನೆ ಮಾಡಬೇಕು.

ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಯ ಸಲುವಾಗಿ ಮಹಿಳಾ ಬೌನ್ಸರ್‌ಗಳನ್ನು ನೇಮಿಸಬೇಕು.
ಮದ್ಯ ಸೇವಿಸಿ ಅನುಚಿತ ವರ್ತನೆ ಮಾಡುವ ಮಹಿಳೆಯರನ್ನು ಮಹಿಳಾ ಬೌನ್ಸರ್‌ ಸಹಾಯದಿಂದ ಮನೆಗೆ ಕಳುಹಿಸಬೇಕು.
ಮಹಿಳೆಯರನ್ನು ಕಳುಹಿಸುವ ವಾಹನಗಳ ನಂಬರ್‌, ಚಾಲಕರ ಫೋಟೋ ತೆಗೆದುಕೊಂಡಿರಬೇಕು.
ಧ್ವನಿವರ್ಧಕ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು.
ಮದ್ಯದಂಗಡಿ ಒಳಗೆ ಹೊರಗೆ ಯಾವುದೇ ಅಹಿತಕರ ಘಟನೆ ಜರುಗದಂತೆ ಎಚ್ಚರವಹಿಸಬೇಕು.