Home News ದಂಪತಿ ಸರಸದಲ್ಲಿದ್ದಾಗ ಮಾಸ್ಟರ್‌ ಕೀ ಬಳಸಿ ಸಿಬ್ಬಂದಿ ಕೊಠಡಿ ಪ್ರವೇಶಿಸಿದ ಪ್ರಕರಣ: ಲೀಲಾ ಪ್ಯಾಲೇಸ್‌ಗೆ 10...

ದಂಪತಿ ಸರಸದಲ್ಲಿದ್ದಾಗ ಮಾಸ್ಟರ್‌ ಕೀ ಬಳಸಿ ಸಿಬ್ಬಂದಿ ಕೊಠಡಿ ಪ್ರವೇಶಿಸಿದ ಪ್ರಕರಣ: ಲೀಲಾ ಪ್ಯಾಲೇಸ್‌ಗೆ 10 ಲಕ್ಷ ರೂ ದಂಡ

Hindu neighbor gifts plot of land

Hindu neighbour gifts land to Muslim journalist

ಚೆನ್ನೈ: ಉದಯಪುರದ ಐಷಾರಾಮ ಹೋಟೆಲ್‌ ಲೀಲಾ ಪ್ಯಾಲೇಸ್‌ನಲ್ಲಿ ದಂಪತಿಗಳು ಏಕಾಂತದಲ್ಲಿ ಇರಲು ರೂಂ ಬುಕ್‌ ಮಾಡಿದ್ದು, ಇಬ್ಬರೂ ಒಟ್ಟಾಗಿ ಸ್ನಾನ ಮಾಡುತ್ತಾ, ಸರಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಹೋಟೆಲ್‌ ಸಿಬ್ಬಂದಿ ತಮ್ಮ ಬಳಿ ಇರುವ ಮಾಸ್ಟರ್‌ ಕೀ ಬಳಸಿ ರೂಂನೊಳಗೆ ಬಂದಿದ್ದರು. ದಂಪತಿ ಇದರಿಂದ ತೀವ್ರ ಮುಜುಗರಕ್ಕೀಡಾಗಿದ್ದು, ನಂತರ ಹೋಟೆಲ್‌ ಸಿಬ್ಬಂದಿ ಕ್ಷಮೆ ಕೇಳಿದರೂ, ಈ ವಿಷಯ ಕೋರ್ಟ್‌ಗೆ ಹೋಗಿದೆ. ಇದೀಗ ಕೋರ್ಟ್‌ ತೀರ್ಪು ಬಂದಿದ್ದು, ದಂಪತಿ ಪರವಾಗಿ ಬಂದಿದೆ.

ಚೆನ್ನೈನ ಗ್ರಾಹಕ ನ್ಯಾಯಲಯವು ದಿ.ಲೀಲಾ ಪ್ಯಾಲೇಸ್‌ ಉದಯಪುರದ ಗೌಪ್ಯತೆಯ ಉಲ್ಲಂಘನೆಗಾಗಿ ತರಾಟೆಗೆ ತೆಗೆದುಕೊಂಡಿದ್ದು, ಹೋಟೆಲ್‌ನಲ್ಲಿ ಅತಿಥಿಗಳಾಗಿ ಬಂದಿದ್ದ ದಂಪತಿಗಳಿಗೆ ರೂ.10 ಲಕ್ಷ ಪಾವತಿಸಲು ಆದೇಶ ನೀಡಿದೆ.

ಆದರೆ ಲೀಲಾ ಪ್ಯಾಲೇಸ್‌ ಹೋಟೆಲ್‌ ತಾವು ಯಾವುದೇ ತಪ್ಪನ್ನು ಮಾಡಿಲ್ಲ, ದಂಪತಿ ತಮ್ಮ ಬಾಗಿಲಿನ ಮುಂದೆ do no disturb ಫಲಕ ಹಾಕಿರಲಿಲ್ಲ ಎಂದು ಹೇಳಿದೆ.