Home News Kadaba: ಬಿಳಿನೆಲೆ ಸಂದೀಪ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡ – BJP ನಾಯಕರ ಆರೋಪ,...

Kadaba: ಬಿಳಿನೆಲೆ ಸಂದೀಪ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡ – BJP ನಾಯಕರ ಆರೋಪ, ಕಾಂಗ್ರೆಸ್ ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

Kadaba: ಕಡಬದಲ್ಲಿ ಕಳೆದ ಐದು ದಿನಗಳಿಂದ ಸುದ್ದಿಯಲ್ಲಿದ್ದ ಯುವಕ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಯುವಕನನ್ನು ಆತನ ಸ್ನೇಹಿತನೇ ಕೊಲೆಗೈದು ಸುಟ್ಟು ಹಾಕಲು ಯತ್ನಿಸಿದ ಅಮಾನವೀಯ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಬಿಳಿನೆಲೆಯ ಸಂದೀಪ್ ಕೊಲೆ ಪ್ರಕರಣದಲ್ಲಿ ಕಾಂಗ್ರೇಸ್ ಮುಖಂಡರು ಶಾಮೀಲಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಈ ಆರೋಪವನ್ನು ಬಿಜೆಪಿಯವರು ಸಾಬೀತುಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಹೌದು, ಕಡಬದಲ್ಲಿ(Kadaba) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ‘ಬಿಳಿನೆಲೆಯ ಸಂದೀಪ್ ಕೊಲೆ ಪ್ರಕರಣದಲ್ಲಿ ಕಾಂಗ್ರೇಸ್ ಮುಖಂಡರು ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯವರು ಆರೋಪವನ್ನು ಸಾಬೀತು ಮಾಡಬೇಕು, ಇಲ್ಲವೇ ಕಾರಣಿಕ ಕ್ಷೇತ್ರ ಮಜ್ಜಾರು ಕ್ಷೇತ್ರಕ್ಕೆ ಬಂದು ಹೇಳಬೇಕು’ ಎಂದು ಸವಾಲು ಹಾಕಿದ್ದಾರೆ.

ಅಲ್ಲದೆ ಕಾಂಗ್ರೇಸ್ ಮೇಲೆ ಆರೋಪ ಮಾಡುವವರು ಮಜ್ಜಾರು ಕ್ಷೇತ್ರಕ್ಕೆ ಬಂದು ದೈವ ಸನ್ನಿಧಿಯಲ್ಲಿ ಹೇಳಬೇಕು, ವಿನಾರಕಾರಣ ನನ್ನನ್ನು ಗುರಿಯಾಗಿಟ್ಟುಕೊಡು ಹೇಳಿಕೆ ನೀಡಿದವರ ವಿರುದ್ಧ ನಾನು ಅಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಪ್ರಾರ್ಥನೆ ಸಲ್ಲಿಸುತ್ತೇನೆ, ಮತ್ತೊಂದೆಡೆ ಕಾನೂನು ಹೋರಾಟವನ್ನೂ ಮಾಡುತ್ತೇನೆ.
ಕೊಲೆ ಪ್ರಕರಣದಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಇರಬಹುದು ನಾವು ಆ ವಿಚಾರದಲ್ಲಿ ಸಹಮತ ನೀಡಿ ಸಮಗ್ರ ತನಿಖೆಗೆ ಅಗ್ರಹಿಸುತ್ತಿದ್ದೇವೆ. ಆರೋಪಿಗೆ ಕಾಂಗ್ರೇಸ್ ಮುಖಂಡರೊಬ್ಬರು ಬೆಂಬಲ ನೀಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರನ್ನು ಬಂಧಿಸಬೇಕು ಎಂದು ಅಗ್ರಹಿಸಿದ ಸುಧೀರ್ ಶೆಟ್ಟಿ ಹತ್ಯೆಗೆ ಪೂರಕವಾದ ಕೆಲಸ ಮಾಡಿದವರನ್ನು ಕೂಡಾ ಬಂಧಿಸಬೇಕು ಎಂದರು.

ಏನಿದು ಘಟನೆ?
ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದ ಸಂದೀಪ್ ನ. 27 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸಾಗಿರಲಿಲ್ಲ. ಈ ಬಗ್ಗೆ ವಿನಯ ಅವರಲ್ಲಿ ಸಂದೀಪ್‌ನ ತಾಯಿ ಸರೋಜ ಅವರು ವಿಚಾರಿಸಿದಾಗ ಸಂದೀಪ್ ಸಂಜೆ ಕೆಲಸ ಮುಗಿಸಿ ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನೊಂದಿಗೆ ಆತನ ಕಾರಿನಲ್ಲಿ ಹೋಗಿರುವುದಾಗಿ ಮಾಹಿತಿ ನೀಡಿದ್ದರು. ಹುಡುಕಾಡಿ ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸರೋಜ ಅವರು ಕಡಬ ಠಾಣೆಗೆ ದೂರು ನೀಡಿದ್ದರು.

ಸಂದೀಪ್ ನಾಪತ್ತೆ ಆದ ಮರುದಿನವೇ ಕಾರ್ತಿಕ್‌ ಎಂಬಾತನ ವಿರುದ್ಧ ಅನುಮಾನ ವ್ಯಕ್ತಪಡಿಸಿ ಸಂದೀಪ್ ನ ತಾಯಿ ಕಡಬ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ದೂರು ಸ್ವೀಕರಿಸಿಲ್ಲ ಎಂಬ ಆರೋಪ ವ್ಯಕ್ತಪಡಿಸಿ ಸೋಮವಾರ ಮಧ್ಯಾಹ್ನದ ವೇಳೆಗೆ ಬಿಳಿನೆಲೆ ಗ್ರಾಮಸ್ಥರು ಕಡಬ ಠಾಣೆಯ ಬಳಿ ಜಮಾಯಿಸಿದ್ದರಲ್ಲದೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್ ಹಾಗೂ ಹೆಡ್ ಕಾನ್ಸ್‌ಟೇಬಲ್ ರೋಹಿತಾಕ್ಷ ಎಂಬವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದರು. ಬಳಿಕ ಎಚ್ಚೆತ್ತ ಪೊಲೀಸರು ಮಾಹಿತಿ ಪ್ರಕಾರ ಸಂದೀಪ್‌ನನ್ನು ಕಾರಿನಲ್ಲಿ ಕರೆದೊಯ್ದಿದ್ದ ಪ್ರತೀಕ್ ಹಾಗೂ ಇನ್ನೋರ್ವನನ್ನು ಪೊಲೀಸರು ರವಿವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.