Home News K.G Bopayya: ನೆನ್ನೆ ಕಾಂಗ್ರೆಸ್ ನಡೆಸಿದ್ದು ಸಂಭ್ರಮಾಚರಣೆ – ಕೆ. ಜಿ. ಬೋಪಯ್ಯ ಲೇವಡಿ

K.G Bopayya: ನೆನ್ನೆ ಕಾಂಗ್ರೆಸ್ ನಡೆಸಿದ್ದು ಸಂಭ್ರಮಾಚರಣೆ – ಕೆ. ಜಿ. ಬೋಪಯ್ಯ ಲೇವಡಿ

Hindu neighbor gifts plot of land

Hindu neighbour gifts land to Muslim journalist

K.G Bopayya: ನಿನ್ನೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್(Congress) ನಾಯಕರಿಗೆ ಟಾಂಗ್ ನೀಡಿದ ಮಾಜಿ ಸ್ಪೀಕರ್ ಕೆ.ಜಿ ಬೊಪಯ್ಯ ಮಡಿಕೇರಿಯಲ್ಲಿ(Madikeri) ನಿನ್ನೆ ನಡೆದಿದ್ದು ಪ್ರತಿಭಟನೆ ಅಲ್ಲ ಎಲ್ಲ ಕಾಂಗ್ರೆಸ್ಸಿಗರ ಸಂಭ್ರಮಾಚರಣೆ ಎಂದು ಮಡಿಕೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಲೇವಾಡಿ ಮಾಡಿದ್ದಾರೆ. ಕಾಂಗ್ರೆಸ್ ನವರು ಯಾರಿಗೋಸ್ಕರ ಪ್ರತಿಭಟನೆ ಮಾಡಿದ್ದಾರೆ ಹೇಳಿ ನೋಡೋಣ ಎಂದರು.

ನಾನು ಪೊಲೀಸರಿಗೆ ಕರೆ ಮಾಡಿ ಒತ್ತಡ ಹೇರಿದ್ದೇನೆ ಎಂದು ಶಾಸಕರು ಹೇಳಿದ್ದಾರೆ. ಪೊಲೀಸ್ ಗೆ ಕರೆ ಮಾಡಿ ಕೇಳುವ ಹಕ್ಕು ಎಲ್ಲಾ ನಾಗರಿಕರಿಗೆ ಇದೆ. ಕಾಂಗ್ರೆಸ್ ಶಾಸಕರು, ಸಚಿವರು ಎಲ್ಲಾ ಕಡೆಯಿಂದ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ನಾನು ಡಿಜಿಪಿಗೆ ಕರೆ ಮಾಡಿದ್ದು ನಿಜ,
ನನ್ನ ಪ್ರಶ್ನೆಗೆ ಡಿಸಿಪಿ ಬಳಿ ಉತ್ತರ ಇಲ್ಲ. ಪ್ರಕರಣ ದಾಖಲು ಮಾಡುವಂತೆ ಹೇಳಿದ್ದು ನಿಜ
ಯುಡಿಆರ್ ಹಾಕಿ ಬಿಸಾಕಿ ಎಂದು ಸಚಿವರು ,ಶಾಸಕರು ಹೇಳಿದ್ದಾರಂತೆ. ಇದನ್ನು ನೋಡಿ ಸುಮ್ಮನೆ ಕೈಕಟ್ಟಿ ಕೂರಬೇಕಾ‌ ತಾನು? ಒಬ್ಬ ವಕೀಲರಾಗಿ ಬಾಯಿಗೆ ಬಂದಂತೆ ನನ್ನ ಬಗ್ಗೆ ಮಾತಾಡಿದ್ದಾರೆ
ಶಾಸಕ ಪೊನ್ನಣ್ಣ, ಅವರ ವಿರುದ್ದ ಬೋಪಯ್ಯ ಕೆಂಡ ಕಾರಿದರು.

ವೀರಾಜಪೇಟೆಯಲ್ಲಿ ಶಾಸಕರ ಪ್ರತಿಕೃತಿ ದಹನ ಮಾಡಿದಾಗ ಪೊಲೀಸರು ಸೂಮೋಟೊ ಕೇಸ್ ಹಾಕಿದ್ದರು. ಪ್ರತಿಕೃತಿ ದಹನದಿಂದ ರಸ್ತೆ ಹಾಳಾಯಿತು ಎಂದು ಬೊಬ್ಬೆ ಹೊಡೆದರು. ವಿರಾಜಪೇಟೆ ಪಟ್ಟಣದ ರಸ್ತೆ ಪರಿಸ್ಥಿತಿ ಹೇಗಿದೆ ಅಂತ ಒಮ್ಮೆ ನೋಡಿ ಎಂದ ಬೋಪಯ್ಯ, ಪ್ರತಾಪ್ ಸಿಂಹ ಪ್ರತಿಕೃತಿ ದಹನ ಮಾಡಿದಾಗ ಯಾವುದೇ ಕೇಸ್ ಇಲ್ಲ. ಇದು ಯಾವ ಪಾರದರ್ಶಕ ಆಡಳಿತ ಹೇಳಿ ಎಂದು ಪ್ರಶ್ನೆ ಮಾಡಿದರು.

ಪ್ರತಿಕೃತಿ ದಹನಕ್ಕೆ ಇಟ್ಟಿದ್ದ ಹುಲ್ಲನ್ನೆ ಕಳ್ಳತನ ಮಾಡಿದ್ದಾರೆ. ಹುಲ್ಲು ಕದಿಯಲು ಬೆಂಕಿಗೆ ನೀರು ಹಾಕಲು ಪೊಲೀಸರನ್ನ ಬಳಸಿದ್ದಾರೆ. ಅಧಿಕಾರದ ಮದದಿಂದ ವರ್ತನೆ ಮಾಡುತ್ತಿದ್ದಾರೆ. ವಿನಯ್ ಕುಟುಂಬಕ್ಕೆ ಪರಿಹಾರ ಕೊಟ್ಟಿದ್ದೇವೆ, ಮುಂದೆ ಇನ್ನಷ್ಟು ಸಹಾಯ ಮಾಡುತ್ತೇವೆ. ಕಾಂಗ್ರೆಸ್ ‌ನವರನ್ನು ಕೇಳಿ ‌ನಾವು ಸಹಾಯ ಮಾಡಬೇಕಾಗಿಲ್ಲ. ನಾವು ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಕಾವೇರಿ ಮಾತೆ ಭೂಮಿಯಲ್ಲಿ ಇದೆಲ್ಲಾ ನಡೆಯಲ್ಲ.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತೆ ತಾಕತ್ತಿದ್ದರೆ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಕೆ.ಜಿ ಬೊಪಯ್ಯ ನಿನ್ನೆ ಸಮಾವೇಶದಲ್ಲಿ ಪೊನ್ನಣ್ಣನವರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.