Home News Coffee : ಕಾಫಿ ಬೆಲೆಯಲ್ಲಿ ದಿಡೀರ್ ಕುಸಿತ – ಒಮ್ಮೆಲೆ 5,000 ಇಳಿಕೆ

Coffee : ಕಾಫಿ ಬೆಲೆಯಲ್ಲಿ ದಿಡೀರ್ ಕುಸಿತ – ಒಮ್ಮೆಲೆ 5,000 ಇಳಿಕೆ

Hindu neighbor gifts plot of land

Hindu neighbour gifts land to Muslim journalist

 

Coffe: ನಿರಂತರವಾದ ಬೆಲೆ ಏರಿಕೆಯಿಂದ ಸಂತಸದಲ್ಲಿದ್ದ ಕಾಫಿ ಬೆಳೆಗಾರರಿಗೆ ಇದೀಗ ದಿಡೀರ್ ಎಂದು ಶಾಕ್ ಎದುರಾಗಿದೆ. ಕಾರಣ ಕಾಫಿ ಬೆಲೆ ಇದೀಗ ಒಮ್ಮೆಲೆ 5000 ಇಳಿಕೆ ಕಂಡಿದೆ.

 

ಹೌದು, ಮಾರುಕಟ್ಟೆಯಲ್ಲಿ ಕಾಫಿ ಬೆಲೆ ನಿತ್ಯ ಇಳಿಕೆಯಾಗುತ್ತಿದ್ದು, ಮಾರ್ಚ್‌ನಲ್ಲಿ 14 ಸಾವಿರ ರೂ.ಕ್ಕೂ ಹೆಚ್ಚು ಧಾರಣೆ ಹೊಂದಿದ್ದ 28 ಒಟಿ (ಔಟ್ ಟನ್) 50 ಕೆ.ಜಿ. ರೋಬಸ್ಟಾ ಕಾಫಿಗೆ ಈಗ 8,500 ರೂ.ನಿಂದ 9,000 ರೂ. ಗೆ ಕುಸಿದಿದೆ. ಇದ್ರಿಂದ ಇನ್ನೂ ಬೆಲೆ ಹೆಚ್ಚಾಗುತ್ತದೆ ಎಂದು ಕಾಫಿಯನ್ನು ಶೇಕರಿಸಿ ಇಟ್ಟ ಬೆಳೆಗಾರರು ಇದೀಗ ಅನಿವಾರ್ಯವಾಗಿ ಕಾಫಿಯನ್ನು ಮಾರಬೇಕಾದ ಸ್ಥಿತಿ ಎದುರಾಗಿದೆ.

 

ಸಾಮಾನ್ಯವಾಗಿ ಡಿಸೆಂಬರ್‌ನಿಂದ ಎಪ್ರಿಲ್ ತಿಂಗಳ ಅವಧಿಯಲ್ಲಿ ಶೇ.90 ಕಾಫಿ ಮಾರುಕಟ್ಟೆ ಸೇರುತ್ತಿತ್ತು. ಆದರೆ ಕಳೆದ 2 ವರ್ಷಗಳ ಮಾರುಕಟ್ಟೆ ಏರಿಳಿತವನ್ನು ಗಮನಿಸಿದ್ದ ಬೆಳೆಗಾರ ಈ ಬಾರಿ ದಾಸ್ತಾನು ಮಾಡಿ ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಮಾರುಕಟ್ಟೆ ನಡೆಯುವ ಈ 3 ತಿಂಗಳ ಅವಧಿಯಲ್ಲಿ ಶೇ.40 ಮಾತ್ರ ಕಾಫಿ ಮಾರುಕಟ್ಟೆ ಪ್ರವೇಶಿಸಿದೆ. ಉಳಿಕೆ ಫಸಲನ್ನು ಸಂಗ್ರಹಿಸಿಡಲಾಗಿತ್ತು. ಆದರೆ ತಿಂಗಳುಗಳು ಉರುಳಿದರೂ ಬೆಲೆ ಏರಿಕೆಯಾಗದ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಕಾಫಿಯನ್ನು ಮಾರುಕಟ್ಟೆಗೆ ಬೆಳೆಗಾರರು ತರಲು ಆರಂಭಿಸಿರುವುದರಿಂದ ಬೆಲೆ ಕುಸಿತ ಕಂಡಿದೆ. ಬೆಲೆ ಇಳಿಕೆಯಿಂದ ಆತಂಕಗೊಂಡಿರುವ ಸ್ಥಳೀಯ ವ್ಯಾಪಾರಿಗಳು ನಷ್ಟದ ಭಯದಿಂದ ಕಾಫಿ ಖರೀದಿಸುವುದನ್ನೇ ನಿಲ್ಲಿಸಿದ್ದಾರೆ.

 

ಕಾಫಿ ಬೆಲೆ:

• ಅರೇಬಿಕಾ ಚೆರಿಗೆ ಮೊದಲು 15,000 ಇದ್ದು ಇದೀಗ 12,000- 12,500 ರೂಗೆ ಕುಸಿತ ಕಂಡಿದೆ

• ಅರೀಬಿಕಾ ಪಾರ್ಚ್ಮೆಂಟಿಗೆ ಮೊದಲು 29 ಸಾವಿರ ರೂಪಾಯಿ ಇದ್ದು ಇದೀಗ 22 ರಿಂದ 23 ಸಾವಿರಕ್ಕೆ ಕುಸಿತ ಕಂಡಿದೆ

• ರೋಬಸ್ಟಾ ಚೆರಿಗೆ ಮೊದಲು 14,000 ಇದ್ದು ಇದೀಗ ರೂ.8,500 – 9,500 ರೂಗ ಕುಸಿತ ಕಂಡಿದೆ

• ರೋಬಷ್ಟಾ ಪಾರ್ಚ್ಮೆಂಟ್ ಮೊದಲು 24,000 ಇದ್ದು ಇದೀಗ 16 ರಿಂದ 17 ಸಾವಿರಕ್ಕೆ ಕುಸಿತ ಕಂಡಿದೆ