Home News Price of coconut oil: ಕರಾವಳಿಯಲ್ಲಿ ತೆಂಗಿನೆಣ್ಣೆ ಧಾರಣೆ 300-320 ರೂ.ಗೆ ಏರಿಕೆ!

Price of coconut oil: ಕರಾವಳಿಯಲ್ಲಿ ತೆಂಗಿನೆಣ್ಣೆ ಧಾರಣೆ 300-320 ರೂ.ಗೆ ಏರಿಕೆ!

Hindu neighbor gifts plot of land

Hindu neighbour gifts land to Muslim journalist

Price of coconut oil: ಕರಾವಳಿ ಭಾಗದಲ್ಲಿ ತೆಂಗಿನಕಾಯಿ ಇಳುವರಿಯ ಗಣನೀಯ ಕುಸಿತದಿಂದಾಗಿ ತೆಂಗಿನೆಣ್ಣೆಯ ಧಾರಣೆ ಒಂದು ಲೀಟರ್ಗೆ 300- 320 ಕೊಬ್ಬರಿ ಮತ್ತು ತೆಂಗಿನಕಾಯಿ ಬೆಲೆಯೂ (Price of coconut oil) ಗಗನಕ್ಕೇರಿದೆ.

ಇದರ ಜೊತೆಗೆ, ತೆಂಗಿನಕಾಯಿ ಕೊರತೆಯಿಂದ ಎಣ್ಣೆ ಉತ್ಪಾದನೆ ಕುಂಠಿತವಾಗಿದ್ದು, ಮುಂದಿನ ದಿನಗಳಲ್ಲಿ ಧಾರಣೆ ಇನ್ನಷ್ಟು ಏರಿಕೆಯಾಗುವ ಆತಂಕ ಉಂಟಾಗಿದೆ.

ಧಾರಣೆ ಏರಿಕೆಯ ವಿವರ
ಕಳೆದ ವರ್ಷ ತೆಂಗಿನೆಣ್ಣೆಯ ಧಾರಣೆ ಲೀಟರ್ಗೆ 200-220 ರೂ. ಆಗಿದ್ದು, ಒಂದೇ ವರ್ಷದಲ್ಲಿ 100 ರೂ. ಏರಿಕೆಯಾಗಿದೆ. ಕೊಬ್ಬರಿಯ ಬೆಲೆ ಕಳೆದ ವರ್ಷ ಕೆ.ಜಿ.ಗೆ 95-100 ರೂ. ಇದ್ದದ್ದು ಈಗ 180-190 ಆಗಿದೆ.

ತೆಂಗಿನಕಾಯಿಯ ಧಾರಣೆಯೂ ಕೆ.ಜಿ.ಗೆ 60-70 ರೂ.ಗೆ ಏರಿಕೆಯಾಗಿದ್ದು. ಕೆಲವೆಡೆ ಒಂದು ತೆಂಗಿನಕಾಯಿಯ ಬೆಲೆ 50 ರೂ. ತಲುಪಿದೆ. ಸೀಯಾಳ (ಎಳನೀರು) ಬೆಲೆಯೂ ಕಳೆದ ವರ್ಷದ 30-40 ರೂ.ನಿಂದ 50-60 ರೂ.ಗೆ ಏರಿದೆ.