Home News Mangaluru: ಮಂಗಳೂರಿನಲ್ಲಿ ಡಿ.21 ರಿಂದ ಜನವರಿ 19 ರವರೆಗೆ ಕರಾವಳಿ ಉತ್ಸವ

Mangaluru: ಮಂಗಳೂರಿನಲ್ಲಿ ಡಿ.21 ರಿಂದ ಜನವರಿ 19 ರವರೆಗೆ ಕರಾವಳಿ ಉತ್ಸವ

Hindu neighbor gifts plot of land

Hindu neighbour gifts land to Muslim journalist

Mangaluru: ಡಿ.21 ರಿಂದ ಜನವರಿ 19 ರವರೆಗೆ ಕರಾವಳಿ ಉತ್ಸವ ನಡೆಯಲಿದೆ. ಕರ್ನಾಟಕ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿದೆ ಕರಾವಳಿ ಉತ್ಸವ. ಹಲವು ವೈವಿಧ್ಯತೆಗಳು ಇಲ್ಲಿ ಜನರನ್ನು ರಂಜಿಸಲಿದೆ.

ಉದ್ಘಾಟನಾ ಕಾರ್ಯಕ್ರಮ ಡಿ.21 ರಂದು ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಕೊಡಿಯಾಲ್‌ ಬೈಲ್‌ನ ಕೆನರಾ ಕಾಲೇಜಿನಿಂದ ಕರಾವಳಿ ಉತ್ಸವ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಕಲಾವಿದರ ತಂಡಗಳು ಇದರಲ್ಲಿ ಭಾಗವಹಿಸಲಿದೆ. ಸಂಜೆ 5.30ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ಈ ಬಾರಿಯ ಕರಾವಳಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.

ಡಿ.21 ರಿಂದ 22 ರಂದು ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಗ್ಲೋಬಲ್ ವಿಲೇಜ್‌ ಎಂಬ ಧ್ಯೇಯದೊಂದಿಗೆ ಕರಾವಳಿಯ ಸಂಪ್ರದಾರಯ, ಸಂಸ್ಕೃತಿ, ಉಡುಗೆ ತೊಡುಗೆ, ಸಾಹಿತ್ಯ, ಖಾದ್ಯಗಳ ಪರಿಚಯ ಇಲ್ಲಿ ಸಿಗಲಿದೆ. ಕೈ ಮಗ್ಗ, ನೇಕಾರ, ಕುಂಬಾರ, ಕರಕುಶಲ ವಸ್ತುಗಳ ತಯಾರಿಕೆ ಜೊತೆಗೆ ಹಲವು ಕೌಶಲ್ಯಗಳ ಅನಾವರಣವಾಗಲಿದೆ. ಗುಡ್ಡಗಾಡು, ಆದಿವಾಸಿ ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳು ಇರಲಿದೆ.

ತುಳುನಾಡಿನ ತಿಂಡಿ ತಿನಿಸುಗಳು, ವೈವಿಧ್ಯಮಯ ಖಾದ್ಯಗಳ ತಯಾರಿಕೆ, ಪ್ರದರ್ಶನ, ಮಾರಾಟ ಇರಲಿದೆ.

ಉಡುಗೆ ತೊಡುಗೆಗಳು, ವಿವಿಧ ವಾಣಿಜ್ಯ ಮಳಿಗೆಗಳು ಇರಲಿದೆ. ಅಮ್ಯೂಸ್‌ಮೆಂಟ್‌ ಪಾರ್ಕ್‌, ವಿವಿಧ ಮನರಂಜೆನಗಳು ಎಲ್ಲಾ ವಯಸ್ಸಿನವರಿಗೂ ಲಭ್ಯವಿದೆ.

ಡಿ.28-29 ತಣ್ಣೀರುಬಾವಿ ಬೀಚ್‌ನಲ್ಲಿ ಬೀಚ್‌ ಉತ್ಸವ ನಡೆಯಲಿದೆ. ಶನಿವಾರ ಸಂಜೆ 6ಗಂಟೆಗೆ ಬೀಚ್‌ ಉತ್ಸವ ಉದ್ಘಾಟನೆಗೊಳ್ಳಲಿದೆ. ಸಂಜೆ 6.30ರಿಂದ ವಿವಿಧ ತಂಡಗಳ ನೃತ್ಯ ಪ್ರದರ್ಶನವಿರಲಿದೆ. ಗಾಯ ರಘುದೀಕ್ಷಿತ್‌ ಅವರ ತಂಡದ ಕಾರ್ಯಕ್ರಮ ರಾತ್ರಿ 8 ಗಂಟೆ ಆರಂಭವಾಗಲಿದೆ.

ಡಿ.29 ಭಾನುವಾರ ಬೆಳಗ್ಗೆ 5.30 ಕ್ಕೆ ಯೋಗ, 6.30 ಕ್ಕೆ ಜುಂಬ( ಏರೋನಾಟಿಕ್ಸ್‌) 9 ಗಂಟೆ ಬಳಿಕ ಬೀಚ್‌ ಸ್ಪೋರ್ಟ್ಸ್‌ ಜೊತೆಗೆ ವಿಶಿಷ್ಟ ಕಾರ್ಯಕ್ರಮ ಇರಲಿದೆ. ಸಂಜೆ 5.30 ಕ್ಕೆ ಆನ್ಸೆನ್‌ ಸ್ಪರ್ಧೆ ನೃತ್ಯ ಪ್ರದರ್ಶನವಿರಲಿದೆ. ರಾತ್ರಿ 8 ಗಂಟೆಗೆ ಶೋರ್‌ ಬ್ಯಾಂಡ್‌ ಪ್ರದರ್ಶನವಿರಲಿದೆ.

ಮುಂಬರುವ ಕಾರ್ಯಕ್ರಮಗಳು: ಜನವರಿ 4 ಮತ್ತು 5 ಕದ್ರಿ ಪಾರ್ಕ್‌ನಲ್ಲಿ ಆಟೋಮೊಬೈಲ್‌ ಮತ್ತು ಶ್ವಾನ ಪ್ರದರ್ಶನ
ಜ.11 ಮತ್ತು 12 ರಂದು ಕದ್ರಿ ಪಾರ್ಕ್‌ನಲ್ಲಿ ಯುವ ಉತ್ಸವ
ಜನವರಿ 18, 19 ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.