Home News Ballary : ಪರಿಸ್ಥಿತಿ ನಿಯಂತ್ರಿಸಲು ಬರದ ಕಾರಣ ಸಸ್ಪೆಂಡ್ ಎಂದ ಸಿಎಂ – ಘರ್ಷಣೆ ಸ್ಥಳದಲ್ಲಿದ್ದ...

Ballary : ಪರಿಸ್ಥಿತಿ ನಿಯಂತ್ರಿಸಲು ಬರದ ಕಾರಣ ಸಸ್ಪೆಂಡ್ ಎಂದ ಸಿಎಂ – ಘರ್ಷಣೆ ಸ್ಥಳದಲ್ಲಿದ್ದ SP ಪವನ್ ನೆಜ್ಜುರೂ ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Ballary : ಗಣಿ ನಾಡು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿ, ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದರು. ಈ ಬೆನ್ನಲ್ಲೇ ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರು ಅವರನ್ನು ರಾಜ್ಯ ಸರ್ಕಾರವು ಅಮಾನತು ಮಾಡಿತ್ತು. 

 ಪವನ ನೆಜ್ಜೂರು ಅವರು ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಅವರನ್ನು ಸರ್ಕಾರವು ಅಮಾನತು ಮಾಡಿತ್ತು. ಈ ಕುರಿತಾಗಿ ಸ್ಪಷ್ಟೀಕರಣ ಕೊಟ್ಟಿದ್ದ ಸಿದ್ದರಾಮಯ್ಯ ಅವರು ಘರ್ಷಣೆಯ ವೇಳೆ ಪವನ್ ಸ್ಥಳದಲ್ಲಿ ಇರಲಿಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ. ಕರ್ತವ್ಯ ಲೋಪದಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ರು. ಆದರೆ ಇದೀಗ ಘರ್ಷಣೆಯ ಸಂದರ್ಭದಲ್ಲಿ ಪವನ್ ಸ್ಥಳದಲ್ಲೇ ಇದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು, ಘರ್ಷಣೆ ಸ್ಥಳದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಅಮಾನತುಗೊಂಡಿರುವ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಪವನ್‌ ನೆಜ್ಜೂರ್‌ ಅವರು ಘಟನಾ ಸ್ಥಳದಲ್ಲಿದ್ದು, ಪರಿಶೀಲಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ. 

‘ಫೋನ್‌ನಲ್ಲಿ ಮಾತನಾಡುತ್ತಾ ಅಧಿಕಾರಿಗಳಿಗೆ ಸೂಚಿಸುತ್ತಿರುವುದು, ಹತ್ಯ ನಡೆದ ಸ್ಥಳದಲ್ಲಿ ರಕ್ತದ ಕಲೆಗಳನ್ನು ಪರಿಶೀಲಿಸುತ್ತ ನಿಂತಿರುವ ಚಿತ್ರಗಳು ಅವರು ಸ್ಥಳದಲ್ಲೇ ಇದ್ದರು ಎಂಬುದನ್ನು ಹೇಳುತ್ತಿವೆ. ಮೊದಲ ಘರ್ಷಣೆ ನಡೆದ ಬಳಿಕ ನಗರ ಡಿಎಸ್‌ಪಿ ಅವರಿಂದ ವಿವರಣೆ ಪಡೆಯುತ್ತಿರುವ ವಿಡಿಯೊಗಳೂ ಸದ್ಯ ಸಿಕ್ಕಿವೆ.