Home News ಸಿವಿಲ್ ರೈಟ್ಸ್ ಫೋರಂನ ನೂತನ ರಾಜ್ಯಾಧ್ಯಕ್ಷರಾಗಿ ಆದರ್ಶ್ ಕ್ರಾಸ್ತಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪವಿತ್ರ...

ಸಿವಿಲ್ ರೈಟ್ಸ್ ಫೋರಂನ ನೂತನ ರಾಜ್ಯಾಧ್ಯಕ್ಷರಾಗಿ ಆದರ್ಶ್ ಕ್ರಾಸ್ತಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪವಿತ್ರ ಕುಮಾರ್ ರೈ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

ನಾಗರೀಕ ಹಕ್ಕುಗಳ ವೇದಿಕೆ ( Civil Rights Forum ) ಇದರ ನೂತನ ಪದಾಧಿಕಾರಿಗಳ ಅಯ್ಕೆ ಮತ್ತು ಸಮಿತಿಯ ಪುನಾರಚನಾ ಸಭೆಯು ಜು.5ರಂದು ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ನಡೆಯಿತು. CRF ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ನಾಗರೀಕ ಹಕ್ಕುಗಳ ರಕ್ಷಣೆ , ಬ್ರಷ್ಟಾಚಾರ, ಅಸಮಾನತೆ ಮತ್ತು ಇನ್ನಿತರ ಹತ್ತು ಹಲವಾರು ಜನಪರ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸುತ್ತಾ ಬಂದಿದೆ. ವೇದಿಕೆಯ ವಕ್ತಾರರು ತಿಳಿಸಿದಂತೆ, ಮುಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಭೂ ಮಾಫಿಯಾ ಮತ್ತು ಪರಿಸರ ರಕ್ಷಣೆಯ ವಿಷಯದಲ್ಲಿ ರಾಜಿರಹಿತ ಹೋರಾಟಗಳನ್ನು ರೂಪಿಸಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಸಮಾನ ಮನಸ್ಕ ಇತರೆ ಸಂಘಟನೆಗಳು ಮತ್ತು ವ್ಯಕ್ತಿಗಳ ಜೊತೆಗೆ ಕೈ ಜೋಡಿಸಿ ಹೋರಾಟ ರೂಪುರೇಷೆಗಳನ್ನು ರಚಿಸಲು ನಿರ್ಧರಿಸಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಜನಸಾಮಾನ್ಯರ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾಗ್ರತ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾವಂತ ಮತ್ತು ಶಿಕ್ಷಿತ ಯುವಜನರನ್ನು ಒಟ್ಟುಗೂಡಿಸಿ, ಈ ನಿಟ್ಟಿನಲ್ಲಿ ಸಮಾಜವನ್ನು ಜಾಗ್ರತ ಮಾಡಿಸುವ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದೆ.

ಪವಿತ್ರ ಕುಮಾರ್ ರೈ

ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಈ ಕೆಳಕಂಡಂತೆ ನಡೆಯಿತು. ರಾಜ್ಯಾಧ್ಯಕ್ಷರಾಗಿ ಆದರ್ಶ್ ಕ್ರಾಸ್ತಾ ಆಯ್ಕೆಯಾದರೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪವಿತ್ರ ಕುಮಾರ್ ರೈ ಆಯ್ಕೆಗೊಂಡರು. ರಾಜ್ಯ ವಕ್ತಾರ ಮತ್ತು ಕಾನೂನು ಸಲಹೆಗಾರರಾಗಿ ಹೈಕೋರ್ಟ್ ವಕೀಲರಾದ ತನುದೀಪ್ ಪೆಲ್ತಡ್ಕ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ನವೀನ್ ಬೋಳೂರ್ ಖಜಾಂಜಿಯಾಗಿ ಶ್ರೀಹರ್ಷ ಭಟ್ ಆಯ್ಕೆಯಾಗಿದ್ದಾರೆ. ಉಳಿದಂತೆ ಹತ್ತು ಜನರ ರಾಜ್ಯ ಸಮಿತಿಯು ರಚಿಸಲ್ಪಟ್ಟಿದೆ. ಮುಂದಿನ ದಿನಗಳಲ್ಲಿ ಜಿಲ್ಲಾವರು ಸಮಿತಿಗಳ ಆಯ್ಕೆಯು ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.