Home News Chitradurga: ಕಾಲೇಜ್ ಬಿಲ್ಡಿಂಗ್ ನಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ- ಕಾರಣ ಗೊತ್ತಾದ್ರೆ ಕಣ್ಣೀರು ಬರುತ್ತೆ .....

Chitradurga: ಕಾಲೇಜ್ ಬಿಲ್ಡಿಂಗ್ ನಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ- ಕಾರಣ ಗೊತ್ತಾದ್ರೆ ಕಣ್ಣೀರು ಬರುತ್ತೆ .. !!

Hindu neighbor gifts plot of land

Hindu neighbour gifts land to Muslim journalist

Chitradurga ನಗರದ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಕಾಲೇಜು ಕಟ್ಟಡದ (College Building) ಮೇಲಿಂದ ಜಿಗಿದು ವಿದ್ಯಾರ್ಥಿನಿ (Student) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ. ಇದರ ಹಿಂದಿನ ಕಾರಣ ನಿಜಕ್ಕೂ ಮನಮಿಡಿಯುವಂತಿದೆ.

ಮೃತ ವಿದ್ಯಾರ್ಥಿನಿಯನ್ನು ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಪ್ರೇಮಾ ಎಂದು ಗುರುತಿಸಲಾಗಿದ್ದು, ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ಪದವಿ (B.Sc Degree) ವ್ಯಾಸಂಗ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ ಮಗಳು ಕಾಲೇಜಿಗೆ ಹೋಗಿದ್ದಳು, ಆಗ ಫೋನ್ ಮಾಡಿ ಕಾಲೇಜು ತಲುಪಿದೆ ಎಂದು ಕರೆ ಮಾಡಿ ಹೇಳಿದ್ದಳು. ಇದಾದ ಕೆಲ ಕ್ಷಣಗಳಲ್ಲೇ ನಿಮ್ಮ ಮಗಳು ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಅಂತಾ ಕಾಲೇಜಿಂದ ಫೋನ್ ಬಂದಿದ್ದು, ಪೋಷಕರಿಗೆ ದಿಕ್ಕೇ ತೋಚದಂತಾಗಿದೆ.

ಆತ್ಮಹತ್ಯೆಗೆ ಕಾರಣ?
ನಗರದ ಮಹೇಶ್ ಪಿಯು ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ವಿದ್ಯಾರ್ಥಿನಿ ಪ್ರೇಮ( 18) ಹಾಗು ತರುಣ್ ಮದ್ಯೆ ಸ್ನೇಹ ಬೆಳೆದಿತ್ತು.ಈ ವೇಳೆ ತರುಣ್ ಪಿಯುಸಿ ಫೇಲ್ ಆಗಿದ್ದು, ಪ್ರೇಮ ಮಾತ್ರ ಚಿತ್ರ ಡಾನ್ ಬಾಸ್ಕೊ ಕಾಲೇಜಿನಲ್ಲಿ ಪ್ರಥಮ ಬಿಎಸ್‌ಸಿ ಓದುತ್ತಿದ್ದರು. ಆದ್ರೆ ಪ್ರೇಮ ಅವರ ಸಂಪರ್ಕ ಬಿಡದ ತರುಣ್, ನಿತ್ಯ ಈಕೆಗೆ ಚಾಟಿಂಗ್ ಮಾಡ್ತಾ, ಪ್ರೀತಿಸುವಂತೆ ಪೀಡಿಸುತಿದ್ದನು. ಇದರಿಂದ ಮನನೊಂದ ವಿದ್ಯಾರ್ಥಿನಿ ತನ್ನ ಮನೆಯವರಿಗೆ ನಿನ್ನೆ ಈ ವಿಷಯ ತಿಳಿಸಿದ್ದಳು. ಆಗ ಅದನ್ನೆಲ್ಲ ನಾವು ನೋಡಿಕೊಳ್ತೇವೆ ನೀನು ಕಾಲೇಜಿಗೆ ಹೋಗು ಅಂತ ಪ್ರೇಮ ಅವರ ತಂದೆ ಸಮಾಧಾನ ಹೇಳಿದ್ದರು. ಆದರೆ ಇದನ್ನು ಲೆಕ್ಕಿಸದೆ ಯುವತಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.

ಸದ್ಯ ಕಿರುಕುಳ ನೀಡುತ್ತಿದ್ದ ಯವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಬಲಿಯಾಗಿರುವುದು ದುರಂತವೇ ಹೌದು.