Home News Actor Darshan:ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಯಿಂದ ಶತ ಪ್ರಯತ್ನ! ಕೊಲ್ಲೂರಿನಲ್ಲಿ ಚಂಡಿಕಾ ಯಾಗ!

Actor Darshan:ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಯಿಂದ ಶತ ಪ್ರಯತ್ನ! ಕೊಲ್ಲೂರಿನಲ್ಲಿ ಚಂಡಿಕಾ ಯಾಗ!

Hindu neighbor gifts plot of land

Hindu neighbour gifts land to Muslim journalist

Actor Darshan: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ  ದರ್ಶನ್‌ (Actor Darshan) ಅವರನ್ನು ಅವರ ಪತ್ನಿ ವಿಜಯಲಕ್ಷ್ಮೀ ಅವರು ಜೈಲಿನಿಂದ ಹೊರಕ್ಕೆ ಕರೆತರಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಕಾನೂನು ರೀತಿಯಲ್ಲಿ ನಾನಾ ಪ್ರಯತ್ನ ಮಾಡಿ ಇದೀಗ ಹಲವು ದೇವರ ಮೊರೆ ಹೋಗುತ್ತಿದ್ದಾರೆ.

ಅಂತೆಯೇ ಇದೀಗ ಜೂನ್ 26ರಂದು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಪ್ರಖ್ಯಾತ ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ನವ ಚಂಡಿಕಾ ಹೋಮ ಮಾಡಿಸಿದ್ದಾರೆ.ಈಗ ಆಷಾಢ ಮಾಸ, ದೇವಿಯ ಆರಾಧನೆ, ಹೀಗಾಗಿ ವಿಜಯಲಕ್ಷ್ಮಿಯವರು ತಮ್ಮ ಆಪ್ತರೊಂದಿಗೆ ನಿನ್ನೆ ಅಪರಾಹ್ನ ಕೊಲ್ಲೂರಿಗೆ ಆಗಮಿಸಿ ನರಸಿಂಹ ಅಡಿಗ ಎಂಬುವವರ ಬಳಿ ನವಚಂಡಿಕಾ ಯಾಗವನ್ನು ಮಾಡಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಹೋಮ-ಹವನ ನಡೆಯುತ್ತಿದ್ದು, ಇಂದು ಬೆಳಗ್ಗೆ ಪೂರ್ಣಾಹುತಿಯಲ್ಲಿ ವಿಜಯಲಕ್ಷ್ಮೀ ಭಾಗಿ ಆಗಿದ್ದಾರೆ. ದರ್ಶನ್ ಬಂಧನ ಮುಕ್ತಿಗಾಗಿ ವಿಜಯಲಕ್ಷ್ಮೀ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅನೇಕ ರಾಜಕಾರಣಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು ತಮಗೆ ಕಷ್ಟ, ಆರೋಪಗಳು ಬಂದಾಗ ಕೊಲ್ಲೂರು ಮೂಕಾಂಬಿಕೆ ಅಮ್ಮನ ಮೊರೆ ಹೋಗುವುದು ಸಾಮಾನ್ಯ, ದೇಶದ 51 ಶಕ್ತಿಪೀಠಗಳಲ್ಲಿ ಕೊಲ್ಲೂರು ಮೂಕಾಂಬಿಕೆ ಕೂಡ ಒಂದು ನಂಬಲಾಗಿದ್ದು, ಇಲ್ಲಿಗೆ ವಿಶೇಷ ಶಕ್ತಿ ಇದೆ. ಇದೀಗ ವಿಜಯಲಕ್ಷ್ಮೀ ಕೂಡಾ ಕೊಲ್ಲೂರು ಅಮ್ಮನ ಮೊರೆ ಹೋಗಿದ್ದಾರೆ.