Home News Chamarajanagara: 5 ಹುಲಿಗಳ ಸಾವು ಪ್ರಕರಣ: ಹುಲಿ ಸಾವಿಗೆ ಬಳಕೆಯಾಗಿರುವ ಕೀಟನಾಶಕ ಯಾವುದು? ಲ್ಯಾಬ್‌ಗೆ ಕಳುಹಿಸಿದ್ದ...

Chamarajanagara: 5 ಹುಲಿಗಳ ಸಾವು ಪ್ರಕರಣ: ಹುಲಿ ಸಾವಿಗೆ ಬಳಕೆಯಾಗಿರುವ ಕೀಟನಾಶಕ ಯಾವುದು? ಲ್ಯಾಬ್‌ಗೆ ಕಳುಹಿಸಿದ್ದ ರಿಪೋರ್ಟ್‌ನಲ್ಲೇನಿದೆ?

Hindu neighbor gifts plot of land

Hindu neighbour gifts land to Muslim journalist

Chamarajanagara: ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಐದು ಹುಲಿಗಳ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ಹುಲಿ ಮತ್ತು ಹಸುವಿನ ಅಂಗಾಗವನ್ನು ಲ್ಯಾಬ್‌ಗೆ ಕಳುಹಿಸಿದ್ದು ರಿಪೋರ್ಟ್‌ ಬಂದಿದ್ದು, ಈ ವರದಿಯಲ್ಲಿ ಹುಲಿಗಳ ಸಾವಿಗೆ ಕಾರ್ಬೋಫುರಾನ್‌ ಕೀಟನಾಶಕ ಬಳಕೆಯಾಗಿರುವುದು ದೃಢಪಟ್ಟಿದೆ ಎಂದು ಸಿಸಿಎಫ್‌ ಹೀರಾಲಾಲ್‌ ತಿಳಿಸಿದ್ದಾರೆ.

ಇದೀಗ ಲ್ಯಾಬ್‌ ವರದಿಯಲ್ಲಿ ಹುಲಿಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿದೆ. ದನಗಾಹಿಗಳು ಹಸುವಿಗೆ ಕಾರ್ಬೋಫುರಾನ್‌ ಎಂಬ ಕೀಟನಾಶಕ ಸಿಂಪಡಿಸಿದ್ದು, ಇದನ್ನು ತಿಂದ ಐದು ಹುಲಿಗಳು ಅಕ್ಕಪಕ್ಕದ ಸ್ಥಳದಲ್ಲೇ ಸಾವಿಗೀಡಾಗಿತ್ತು. ಹುಲಿ ಸಾವಿನ ಪ್ರಕರಣವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಹೈ ಪವರ್‌ ಕಮಿಟಿ ರಚಿಸಿದ್ದರು.

ಈ ಕೀಟನಾಶಕವು ವನ್ಯಪ್ರಾಣಿಗಳು, ಪಕ್ಷಿಗಳ ನರಮಂಡಲದ ಮೇಲೆ ತುಂಬಾನೇ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಅಮೆರಿಕ ಹಾಗೂ ಯುರೋಪ್‌ ರಾಷ್ಟ್ರಗಳಲ್ಲಿ ಇದನ್ನು ನಿಷೇಧ ಮಾಡಲಾಗಿದೆ. ಕಾರ್ಬೋಫುರಾನ್‌ ಕೀಟನಾಶಕ ತೀವ್ರ ವಾಸನೆಯಿಲ್ಲದ ಕಾರಣ ವನ್ಯಪ್ರಾಣಿಗಳು ವಾಸನೆ ಗುರುತಿಸುವುದು ಕಷ್ಟ. ಈ ಹಿನ್ನಲೆಯಲ್ಲಿ ಕಾಬೋಫುರಾನ್‌ ಬಳಕೆಯಾಗಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.