Home News Mukesh Ambani: ಕೇಂದ್ರದಿಂದ ರಿಲಯನ್ಸ್‌ಗೆ ರೂ.24,500 ಕೋಟಿ ನೋಟಿಸ್‌

Mukesh Ambani: ಕೇಂದ್ರದಿಂದ ರಿಲಯನ್ಸ್‌ಗೆ ರೂ.24,500 ಕೋಟಿ ನೋಟಿಸ್‌

Hindu neighbor gifts plot of land

Hindu neighbour gifts land to Muslim journalist

Mukesh Ambani: ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಗೆ ಕೇಂದ್ರ ಸರಕಾರ ದೊಡ್ಡ ಶಾಕ್ ನೀಡಿದೆ. ನೈಸರ್ಗಿಕ ಅನಿಲ ನಿಕ್ಷೇಪ ಬಳಕೆಗೆ ಸಂಬಂಧಿಸಿದಂತೆ ಸರಕಾರದ ಪಾಲು 24,500 ಕೋಟಿ ರು.ಗಳನ್ನು ಪಾವತಿಸು ವಂತೆ ಮಂಗಳವಾರ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ.

ಕೇಂದ್ರ ಸರಕಾರದ ಒಡೆತನದ ‘ಆಯಿಲ್ ಅಂಡ್ ನ್ಯಾಚರಲ್ ಗ್ಯಾಸ್'(ಒಎನ್‌ಜಿಸಿ)ಗೆ ಸೇರಿದ ನೈಸರ್ಗಿಕ ಅನಿಲ ನಿಕ್ಷೇಪದ ಭಾಗದಿಂದ ಹರಿದುಹೋಗಿರಬಹುದಾದ ನೈಸರ್ಗಿಕ ಅನಿಲವನ್ನು ರಿಲಯನ್ಸ್ ಸಂಗ್ರಹಿಸಿ ಮಾರಾಟ ಮಾಡಿದೆ. ಅದರಿಂದ ಬಂದ ಲಾಭದಲ್ಲಿ ಸರಕಾರಿ ಸಂಸ್ಥೆಯಾದ ‘ಒಎನ್‌ಜಿಸಿ’ಗೂ ಪಾಲಿದೆ. ಅದಕ್ಕಾಗಿ ರಿಲ ಯನ್ಸ್ ಇಂಡಸ್ಟ್ರೀಸ್ ಲಿ. ಮತ್ತು ಪಾಲುದಾರ ಸಂಸ್ಥೆಗಳು ಸರಕಾರಕ್ಕೆ 281 ಕೋಟಿ ಅಮೆರಿಕನ್ ಡಾಲರ್(24,500 ಕೋಟಿ ರು.) ಪಾವತಿಸತಕ್ಕದ್ದು ಎಂದು ರಿಲ ಯನ್ಸ್‌ ಗೆ ಒಎನ್‌ಜಿಸಿ ಸಂಸ್ಥೆಯ ಪರವಾಗಿ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ. ಅಕ್ಕಪಕ್ಕದಲ್ಲೇ ಇರುವ ಅನಿಲ ನಿಕ್ಷೇಪಗಳಿಂದ ಸ್ಥಳಾಂತರಗೊಂಡಿರಬಹುದಾದ ಅನಿಲವನ್ನು ಸಂಗ್ರಹಿಸಿ ಮಾರಾಟ ಮಾಡಿ ಲಾಭಗಳಿಸಿದ್ದಕ್ಕಾಗಿ ಪಕ್ಕದ ನಿಕ್ಷೇಪದ ಕಂಪನಿಗೆ ಯಾವುದೇ ಪರಿಹಾರ ಪಾವತಿಸಬೇಕಿಲ್ಲ. ಈ ವಿಚಾರದಲ್ಲಿ ಎರಡೂ ಕಡೆಯವರೂ ಜವಾಬ್ದಾರರಲ್ಲ ಎಂಬ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯ ದೆಹಲಿ ಹೈಕೋರ್ಟ್ ಫೆ.14ರಂದು ರದ್ದುಗೊಳಿಸಿದೆ. ಆ ಬಳಿಕವಷ್ಟೇ ಕೇಂದ್ರದ ಅನಿಲ ಮತ್ತು ಶೈಲೋತ್ಪನ್ನಗಳ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ.