Home News Education: ಸಿಬಿಎಸ್‌ಇ ಮಕ್ಕಳಿಗೆ ಮೊದಲ 5 ವರ್ಷದ ಶಿಕ್ಷಣ ಮಾತೃಭಾಷೆಯಲ್ಲೇ ಬೋಧನೆ : ಕೇಂದ್ರೀಯ ಪ್ರೌಢಶಿಕ್ಷಣ...

Education: ಸಿಬಿಎಸ್‌ಇ ಮಕ್ಕಳಿಗೆ ಮೊದಲ 5 ವರ್ಷದ ಶಿಕ್ಷಣ ಮಾತೃಭಾಷೆಯಲ್ಲೇ ಬೋಧನೆ : ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಸೂಚನೆ

Hindu neighbor gifts plot of land

Hindu neighbour gifts land to Muslim journalist

Education: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು ಸಿಬಿಎಸ್‌ಇ ಮಕ್ಕಳಿಗೆ ಮೊದಲ 5 ವರ್ಷದ ಶಿಕ್ಷಣವನ್ನು (Education) ಮಾತೃಭಾಷೆಯಲ್ಲೇ ಬೋಧಿಸುವಂತೆ ತನ್ನ ವ್ಯಾಪ್ತಿಯ ಶಾಲೆಗಳಿಗೆ ಸೂಚಿಸಿದೆ.

ಈ ಕುರಿತು ಅದು ದೇಶವ್ಯಾಪಿ ಇರುವ 30000 ಶಾಲೆಗಳಿಗೆ ಮಾಹಿತಿ ರವಾನಿಸಿದ್ದು, ಅದಕ್ಕೆ ಅಗತ್ಯ ಸಿದ್ಧತೆಗಳನ್ನೂ ನಡೆಸಿದೆ. ಇದರ ಪ್ರಕಾರ, ಪೂರ್ವ ಪ್ರಾಥಮಿಕದಿಂದ (ಪ್ರೀಕೆಜೆ, ಎಲ್‌ಕೆಜಿ, ಯುಕೆಜಿ) 2ನೇ ತರಗತಿಯವರೆಗೆ ಮಾತೃ ಭಾಷೆ ಯಲ್ಲಿ ಮಕ್ಕಳಿಗೆ ಬೋಧಿಸಲಾಗುವುದು. ಈ ನಿರ್ಧಾರದಿಂದ ಮಾತೃಭಾಷೆ ಬಳಕೆಗೆ ಉತ್ತೇಜನ ಸಿಗುವುದಲ್ಲದೆ, ಮಕ್ಕಳಿಗೆ ವಿಷಯಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಲೂ ಸಹಕಾರಿಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಪ್ರಕಾರ, ನರ್ಸರಿಯಿಂದ 2ನೇ ತರಗತಿಯ ತನಕ ಮಾತೃಭಾಷೆ ಅಥವಾ ಆ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಭಾಷೆಯಲ್ಲಿ ಬೋಧಿಸಬೇಕು.

ಇಲ್ಲವೇ, ರಾಜ್ಯದ ಅಧಿಕೃತ ಭಾಷೆಯಲ್ಲಿ ಪಾಠ ಮಾಡಬೇಕು. 2ನೇ ತರಗತಿ ಬಳಿಕ ಮಕ್ಕಳು ಮಾತೃಭಾಷೆಯಲ್ಲಿ ಅಥವಾ ಇತರೆ ಭಾಷೆಗಳಲ್ಲಿ ಬೋಧನೆಗೆ ಒಳಪಡಬಹುದು. 5ನೇ ತರಗತಿ ಬಳಿಕ ಒಂದು ಭಾಷೆಯನ್ನು ಹೆಚ್ಚುವರಿಯಾಗಿ ಕಲಿಯುವ ಆಯ್ಕೆಯೂ ಇರಲಿದೆ. ಇದನ್ನು ಎಂದಿನಿಂದ ಜಾರಿ ಮಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಶಾಲೆಗಳಿಗೆ ನೀಡಲಾಗಿದೆ. ನಿರ್ಧಾರ ತಿಳಿಸಲು ಮೇ ತಿಂಗಳ ಕೊನೆಯ ತನಕ ಸಮಯಾವಕಾಶ ನೀಡಲಾಗಿದೆ.