Home News PM Modi: BSNL ಸ್ವದೇಶಿ 4ಜಿ ನೆಟ್‌ವರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ – ಏನಿದರ ವಿಶೇಷತೆ?

PM Modi: BSNL ಸ್ವದೇಶಿ 4ಜಿ ನೆಟ್‌ವರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ – ಏನಿದರ ವಿಶೇಷತೆ?

Hindu neighbor gifts plot of land

Hindu neighbour gifts land to Muslim journalist

PM Modi : ಡಿಜಿಟಲ್ ಇಂಡಿಯಾದತ್ತ ದೊಡ್ಡ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ BSNL ನ ‘ಸ್ವದೇಶಿ’ 4ಜಿ ನೆಟ್‌ವರ್ಕ್‌ನ್ನು ಉದ್ಘಾಟಿಸಿದ್ದಾರೆ. ಇನ್ನುಮುಂದೆ ಬರೋಬ್ಬರಿ 97 ಸಾವಿರ ಟವರ್ ಮೂಲಕ ಜನರಿಗೆ ಮೂಲೆ ಮೂಲೆಗೆ 4ಜಿ ನೆಟ್‌ವರ್ಕ್ ಸರ್ವೀಸ್ ನೀಡಲಿದೆ.

ಹೌದು, ಟೆಲಿಕಮ್ಯೂನಿಕೇಷನ್​ ಮೂಲಸೌಕರ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಇಂದು ಬಿಎಸ್​ಎಲ್​ಎನ್​ ಸ್ವದೇಶಿ 4ಜಿ ನೆಟ್​​ವರ್ಕ್​ ​​ಸೇವೆ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ 60,000 ಕೋಟಿಗೂ ಹೆಚ್ಚು ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಈ ಮೂಲಕ ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ ಮತ್ತು ಚೀನಾದಂತೆ ಸ್ವಂತ ಟೆಲಿಕಾಂ ಸಾಧನಗಳನ್ನು ತಯಾರಿಸುವ ವಿರಳ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಲಿದೆ.

4G ‘ನೆಟ್‌ವರ್ಕ್ ಸ್ಟಾಕ್’ ವೈಶಿಷ್ಟ್ಯಗಳು

ರೇಡಿಯೋ ಆಕ್ಸೆಸ್ ನೆಟ್ವರ್ಕ್ (RAN): ಟೆಜಾಸ್ ನೆಟ್ವರ್ಕ್ ಅಭಿವೃದ್ಧಿಪಡಿಸಿದೆ

ಕೋರ್ ನೆಟ್ವರ್ಕ್: ಸಿ-ಡಾಟ್ ಅಭಿವೃದ್ಧಿಪಡಿಸಿದೆ

ಇಂಟಿಗ್ರೇಷನ್​: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಿರ್ವಹಿಸಿದೆ

ಸುಮಾರು 26,700 ಸಂಪರ್ಕ ರಹಿತ ಹಳ್ಳಿಗಳು, ಗಡಿ ಭಾಗದ ಪ್ರದೇಶಗಳನ್ನ ತಲುಪುವ ಉದ್ದೇಶದಿಂದ ಡಿಜಿಟಲ್ ಭಾರತ ನಿಧಿ ಸ್ಯಾಚುರೇಶನ್ ಯೋಜನೆಯಡಿ 14,180 ಟವರ್‌ಗಳನ್ನು ನಿರ್ಮಿಸಲಾಗಿವೆ. ಬಿಎಸ್‌ಎನ್‌ಎಲ್ ಜೊತೆಗೆ, ರಿಲಾಯನ್ಸ್ ಜಿಯೋ ಇನ್ಫೋಕಾಮ್ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳು ಕೂಡ 4,700 ಕ್ಕೂ ಹೆಚ್ಚು 4G ಟವರ್‌ಗಳನ್ನು ಸ್ಥಾಪಿಸಿವೆ. ಈ ಟವರ್​ ಗಳು 20 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರಿಗೆ ಸೇವೆ ನೀಡಲಿವೆ ಎಂದು ಅಂದಾಜಿಸಲಾಗಿದೆ. ಆನ್​ ಲೈನ್​ ಶಿಕ್ಷಣ, ಇ-ಆಡಳಿತ, ಡಿಜಿಟಲ್​ ಪಾವತಿ ಸೇರಿ ಹತ್ತು ಹಲವು ವಿಚಾರಗಳಿಗೆ ಹೊಸ ಟವರ್​ ಗಳು ನೆರವಾಗಲಿವೆ.

ಇನ್ನು ಸ್ವದೆಶಿ 4ಜಿ ನೆಟ್ ವರ್ಕ್‌ನ್ನು ಅನಾವರಣಗೊಳಿಸಿದ ಮೋದಿ, ಮುಂಬರುವ ದಶಕವು ಒಡಿಶಾವನ್ನು ಸಮೃದ್ಧಿಯತ್ತ ಕೊಂಡೊಯ್ಯಲಿದೆ ಎಂದರು. ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಈ ರಾಜ್ಯವು ಇನ್ನು ಮುಂದೆ ಹಿಂದುಳಿಯುವುದಿಲ್ಲ ಎಂದು ಘೋಷಿಸಿದ ಅವರು ಸೆಮಿಕಂಡಕ್ಟರ್ ಪಾರ್ಕ್‌ಗಾಗಿ ಯೋಜನೆಯನ್ನು ಪ್ರಕಟಿಸಿದರು.