Home Latest Health Updates Kannada ಮದುವೆ ದಿನ ಕೈಕೊಟ್ಟ ವರ ! ಎದೆಗುಂದದ ವಧು ತೆಗೆದುಕೊಂಡಳು ಈ ದಿಟ್ಟ ನಿರ್ಧಾರ!

ಮದುವೆ ದಿನ ಕೈಕೊಟ್ಟ ವರ ! ಎದೆಗುಂದದ ವಧು ತೆಗೆದುಕೊಂಡಳು ಈ ದಿಟ್ಟ ನಿರ್ಧಾರ!

Hindu neighbor gifts plot of land

Hindu neighbour gifts land to Muslim journalist

ಮದುವೆ ಸುಸೂತ್ರವಾಗಿ ನಡೆಯಲು ಸಾವಿರ ವಿಘ್ನಗಳಂತೆ ಹೌದು ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಸಂಗತಿ ನಡೆದಿದೆ

ಈ ಕುರಿತಂತೆ ಕೇರಳದಲ್ಲಿ ಒಂದು ಘಟನೆ ನಡೆದಿದ್ದು
ನಾಳೆ ಮದುವೆ ನಡೆಯಬೇಕು ಅನ್ನುವಷ್ಟರಲ್ಲಿ ಮದುವೆಯ ಹಿಂದಿನ ದಿನದಂದು ವರ ನಾಪತ್ತೆಯಾದ ಸಂಗತಿ ಬೆಳಕಿಗೆ ಬಂದಿದೆ. ಆದರೆ, ನಂತರ ನಡೆದಿದ್ದು ಮದುವೆಗೆ ಬಂದಿದ್ದ ಎಲ್ಲರನ್ನೂ ಆಶ್ಚರ್ಯ ಗೊಳಿಸಿದೆ.

ಈ ಘಟನೆ ಕೇರಳದ ಕೊಟ್ಟಾಯಂ ಥಲಯೋಲಪರಂಬುವಿನಲ್ಲಿ ನಡೆದಿದ್ದು ವರ ನಾಪತ್ತೆಯಾಗಿದ್ದ ಮರು ದಿನವೇ ಅದೇ ಮುಹೂರ್ತದಲ್ಲಿ ಮದುವೆಗೆ ಬಂದಿದ್ದ ಯುವ ಅತಿಥಿ ಹಾಗೂ ಕಾಂಗ್ರೆಸ್ ಕಾರ್ಯಕರ್ತನನ್ನು ಮದುವೆಯಾಗುವ ಮೂಲಕ ವರನ ಕುಟುಂಬಕ್ಕೆ ವಧುವಿನ ಕುಟುಂಬ ಶಾಕ್ ನೀಡಿದೆ.

ಮದುವೆಯ ಎಲ್ಲ ಸಿದ್ಧತೆಗಳು ಮುಗಿದಾಗ ಥಲಯೋಲಪರಂಬುವಿನ ವರ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿತು. ಅದರ ಬೆನ್ನಲ್ಲೇ ಮದುವೆಗೆ ಬಂದಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತ ಸುಮೀರ್ ಅವರು ಕೊಟ್ಟೂರಿನ ಫಾತಿಮಾ ಶಹನಾಝ್ ಅಂದರೆ ವಧುವನ್ನು ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಾನೆ. ಬಳಿಕ ಎರಡು ಮನೆಯವರು ಒಪ್ಪಿ ನದ್ವತ್ ನಗರದ ಕೆಕೆಪಿಜೆ ಸಭಾಂಗಣದಲ್ಲಿ ಮೌಲ್ವಿ ನೇತೃತ್ವದಲ್ಲಿ ವಿವಾಹ ನೆರವೇರಿಸಿದರು.

ಒಟ್ಟಿನಲ್ಲಿ ವರನೇ ಇಲ್ಲದ ಕೊರತೆಯನ್ನು ಒಂದೇ ದಿನದಲ್ಲಿ ಬಗೆ ಹರಿಸಿ ಸುಸೂತ್ರವಾಗಿ ಮದುವೆ ನೆರವೇರಿಸಲಾಯಿತು.