Home News ಪ್ರಿಯಕರನೊಂದಿಗೆ ಕಾಡು ಸುತ್ತಲು ತೆರಳಿದ್ದ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ! ಯುವತಿ ಅಸ್ವಸ್ಥ -ಯುವಕನ ಮೇಲೆ...

ಪ್ರಿಯಕರನೊಂದಿಗೆ ಕಾಡು ಸುತ್ತಲು ತೆರಳಿದ್ದ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ! ಯುವತಿ ಅಸ್ವಸ್ಥ -ಯುವಕನ ಮೇಲೆ ಪೋಕ್ಸೋ ಕೇಸ್ ದಾಖಲು

Hindu neighbor gifts plot of land

Hindu neighbour gifts land to Muslim journalist

ಆಕೆಗೆ ಇನ್ನೂ ಹದಿಹರೆಯದ ಹದಿನೇಳನೆಯ ವಯಸ್ಸು. ಅದಾಗಲೇ ಪ್ರೀತಿ, ಪ್ರೇಮವೆಂದು ಓರ್ವ ಯುವಕ ಆಕೆಯ ಹಿಂದೆ ಬಿದ್ದಿದ್ದು, ಯುವಕನ ಬಣ್ಣ ಬಣ್ಣದ ನಯವಾದ ಮಾತನ್ನು ನಂಬಿ ಆತನೊಂದಿಗೆ ಲವ್ ನಲ್ಲಿ ಬಿದ್ದ ಆಕೆ ಸಿಕ್ಕಸಿಕ್ಕಲ್ಲಿ ಸುತ್ತಾಡುತ್ತಿದ್ದಳು. ಹೀಗೆ ಒಂದು ದಿನ ಆತನೊಂದಿಗೆ ಕಾಡು ನೋಡಲು ತೆರಳಿದ ಆಕೆಗೆ ಅಲ್ಲಿ ಕರಾಳ ಅನುಭವವೊಂದು ಆಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿದೆ.

ಹೌದು, ಇಂತಹದೊಂದು ಘಟನೆ ನಡೆದಿದ್ದು ಹುಬ್ಬಳ್ಳಿಯಲ್ಲಿ.ಹುಬ್ಬಳ್ಳಿಯ ಗಿರಿಯಾಲ ಗ್ರಾಮದ 17ನೇ ವಯಸ್ಸಿನ ಅಪ್ರಾಪ್ತ ಯುವತಿಗೆ ಅದೇ ಗ್ರಾಮದ ಶ್ರೀನಾಥ್ ಜೊತೆಗೆ ಪ್ರೇಮಾಂಕುರವಾಗಿದ್ದು, ಆತನನ್ನು ನಂಬಿ ಕಾಡು ನೋಡಲು ತೆರಳಿದ್ದಳು.

ಕಾಡಿನ ಮಧ್ಯೆ ತೆರಳುತ್ತಿರುವಾಗ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆರಗಿದ ಶ್ರೀನಾಥ್ ಆಕೆಯನ್ನು ನಿರಂತರ ಅತ್ಯಾಚಾರ ಎಸಗಿದ್ದು, ಯುವತಿ ಮನೆಗೆ ಬಂದಾಗ ತೀರಾ ಅಸ್ವಸ್ಥಗೊಂಡಿರುವುದನ್ನು ಕಂಡ ಮನೆಯವರು ವಿಚಾರಿಸಿದಾಗ ಸತ್ಯ ಬಯಲಾಗಿದ್ದು,ಆರೋಪಿ ವಿರುದ್ಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಲಾಗಿದೆ.