Home News ಇಬ್ಬರು ಯುವತಿಯರೊಂದಿಗೆ ಪ್ರೇಮ ನಾಟಕ, ಮಧ್ಯೆ ಬಂದ ಜಾಲತಾಣ ಗೆಳೆಯ ಆಟವೇ ನಿಲ್ಲಿಸಿದ!!ಹೊಲದಲ್ಲಿ ಸಿಕ್ಕಿದ್ದ ರಕ್ತ-ಸಿಕ್ತ...

ಇಬ್ಬರು ಯುವತಿಯರೊಂದಿಗೆ ಪ್ರೇಮ ನಾಟಕ, ಮಧ್ಯೆ ಬಂದ ಜಾಲತಾಣ ಗೆಳೆಯ ಆಟವೇ ನಿಲ್ಲಿಸಿದ!!
ಹೊಲದಲ್ಲಿ ಸಿಕ್ಕಿದ್ದ ರಕ್ತ-ಸಿಕ್ತ ಹಲ್ಲು ಕೂದಲು !! ಅದಾಗಲೇ ಮಣ್ಣಡಿ ಹೂತು ಹೋಗಿತ್ತು ವಿದ್ಯಾರ್ಥಿಯೊಬ್ಬನ ಹೆಣ!!

Hindu neighbor gifts plot of land

Hindu neighbour gifts land to Muslim journalist

ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ಮೊನ್ನೆಯ ದಿನ ಹಳ್ಳಿಯ ಹೊಲದಲ್ಲಿ ರಕ್ತ ಸಿಕ್ತ ಹಲ್ಲು ಹಾಗೂ ಕೂದಲು ಪತ್ತೆಯಾದ ಬೆನ್ನಲ್ಲೇ, ಮಣ್ಣಡಿ ಹೂತಿದ್ದ ಯುವಕನೊಬ್ಬನ ಹೆಣವೂ ಪತ್ತೆಯಾಗಿತ್ತು. ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಲಭಿಸಿದೆ.ವಿದ್ಯಾರ್ಥಿಯೋರ್ವನ ಭೀಕರ ಕೊಲೆ ನಡೆಸಿ ಯಾರಿಗೂ ಗೊತ್ತಾಗದಂತೆ ಹೊಲದಲ್ಲಿ ಹೆಣವನ್ನು ಹೂತು ಹಾಕಿ ಕೈತೊಳೆದುಕೊಂಡಿದ್ದ ಆರೋಪಿಗಳಾದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಬಂಧನವಾಗಿದ್ದು,ಉಳಿದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ.ಮೃತ ವ್ಯಕ್ತಿಯನ್ನು ವಿದ್ಯಾರ್ಥಿ ಪ್ರೇಮ್ ಕುಮಾರ್(21) ಎಂದು ಗುರುತಿಸಲಾಗಿದೆ.

ಘಟನೆ ವಿವರ:ಮೃತ ಪ್ರೇಮ್ ಕುಮಾರ್ ಗೆ ಇಬ್ಬರು ಯುವತಿಯರೊಂದಿಗೆ ಸ್ನೇಹ ಬೆಳೆದಿತ್ತು.ಇಬ್ಬರೊಂದಿಗೂ ಬಹಳ ಸಲುಗೆಯಿಂದ ಇದ್ದ ಆತ ಅವರ ಖಾಸಗಿ ಕ್ಷಣಗಳನ್ನು ಕೂಡಾ ಚಿತ್ರಿಸಿ ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದ.ಇದಾದ ಬಳಿಕ ಇಬ್ಬರೂ ವಿದ್ಯಾರ್ಥಿನಿಯರನ್ನು ಬ್ಲಾಕ್ ಮೇಲ್ ಮಾಡಲು ಮುಂದಾದ ಪ್ರೇಮ್ ಒಬ್ಬರು ತಲಾ 50 ಸಾವಿರ ಹಣ ಕೊಡುವಂತೆ ಹಾಗೂ ತಪ್ಪಿದಲ್ಲಿ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸುತ್ತಿದ್ದ.

ಇದರಿಂದ ಭಯಗೊಂಡಿದ್ದ ಇಬ್ಬರು ಯುವತಿಯರು,ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅಶೋಕ್ ಎಂಬ ಹೆಸರಿನ ಗೆಳೆಯನೊಬ್ಬನಲ್ಲಿ ವಿಚಾರ ತಿಳಿಸಿದ್ದರು.ಆತ ತಿಳಿಸಿದಂತೆಯೇ ಪ್ರೇಮ್ ನನ್ನು ಕರೆಮಾಡಿ ಟೋಲ್ ಪ್ಲಾಜಾ ದ ಬಳಿ ಬರಹೇಳಿ ಅಲ್ಲಿಂದ ಕಿಡ್ನಾಪ್ ಮಾಡಿದ್ದರು.

ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೊಬೈಲ್ ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಅಶೋಕ್ ಹಾಗೂ ಆತನ ಗೆಳೆಯರು ಸೇರಿ ಕೊಲೆ ನಡೆಸಿದಲ್ಲದೇ, ಯಾರಿಗೂ ಗೊತ್ತಾಗದಂತೆ ಮಣ್ಣಿನಲ್ಲಿ ಹೂತು ಜಾಗ ಖಾಲಿ ಮಾಡಿದ್ದರು.