Home News BJP: ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ – ವಿಜಯೇಂದ್ರ ವಿರುದ್ಧ ಸ್ಪರ್ಧಿಸುವ ಕ್ಯಾಂಡಿಡೇಟ್ ಇವರೇ !!

BJP: ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆ – ವಿಜಯೇಂದ್ರ ವಿರುದ್ಧ ಸ್ಪರ್ಧಿಸುವ ಕ್ಯಾಂಡಿಡೇಟ್ ಇವರೇ !!

Hindu neighbor gifts plot of land

Hindu neighbour gifts land to Muslim journalist

BJP: ರಾಜ್ಯ ಬಿಜೆಪಿಯ ಒಳ ಜಗಳ ತಾರಕಕ್ಕಿರುತ್ತಿರುವ ನಡುವೆಯೇ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಒಂದೆಡೆ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇನ್ನು ವಿಜಯೇಂದ್ರ ಅವರ ವಿರುದ್ಧದ ಬಣದಿಂದ ಯಾರು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲವಾಗಿತ್ತು? ಆದರೆ ಈಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ ಎನ್ನಲಾಗಿದೆ.

ಸದಾಶಿವನಗರದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣದವರು ಸಭೆ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ತಮ್ಮ ಬಣದಿಂದ ಯಾರು ಸ್ಪರ್ಧಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ವಿರೋಧಿ ಬಣದ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮ ಬಣದಿಂದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವುದು ಖಚಿತ. ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಮುಖ್ಯವಲ್ಲ. ನಮಗೆ ಎಷ್ಟು ಮತ ಬರುತ್ತವೆ ಎಂಬುದು ಕೂಡ ನಗಣ್ಯ. ಆದರೆ ಚುನಾವಣೆ ನಡೆಯುವುದು ಖಚಿತ ಎಂದು ವಿಶ್ವಾಸದಿಂದ ಹೇಳಿದರು.

ಪಕ್ಷದಲ್ಲಿ ಕೆಲವರು ಏಕಪಕ್ಷೀಯ ಧೋರಣೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕಾತಿ, ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳಲ್ಲಿ ವಿಜಯೇಂದ್ರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದು ಮೊದಲು ಹೋಗಬೇಕು ಎಂದು ಕೆಂಡ ಕಾರಿದ್ದಾರೆ.

ಅಲ್ಲದೆ ನಮಲ್ಲಿ ವಿಜಯೇಂದ್ರ ವಿರುದ್ದ ಸ್ಪರ್ಧೆ ಮಾಡಲು ಹಲವರು ಸಜ್ಜಾಗಿದ್ದಾರೆ. ನನ್ನನ್ನು ಸೇರಿದಂತೆ ಯಾರು ಬೇಕಾದರೂ ಆಗಬಹುದು. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪಕ್ಷ ಉಳಿಯಬೇಕಾದರೆ ಕೆಲವು ಸಂದರ್ಭದಲ್ಲಿ ನಾವು ತ್ಯಾಗ ಮಾಡಬೇಕಾಗುತ್ತದೆ. ಕುಟುಂಬ ರಾಜಕಾರಣದಲ್ಲಿ ನಮ ಪಕ್ಷದಲ್ಲಿ ಇರಬಾರದು ಎಂದು ಹೇಳಿದರು.