Home News Actor Mohanlal: ʼಎಂಪುರಾನ್’ ಸಿನಿಮಾಗೆ ಬಿಜೆಪಿ, ಆರ್‌ಎಸ್‌ಎಸ್‌ ಆಕ್ಷೇಪ ಹಿನ್ನೆಲೆ; ವಿವಾದಿತ ಭಾಗಕ್ಕೆ ಕತ್ತರಿ!

Actor Mohanlal: ʼಎಂಪುರಾನ್’ ಸಿನಿಮಾಗೆ ಬಿಜೆಪಿ, ಆರ್‌ಎಸ್‌ಎಸ್‌ ಆಕ್ಷೇಪ ಹಿನ್ನೆಲೆ; ವಿವಾದಿತ ಭಾಗಕ್ಕೆ ಕತ್ತರಿ!

Hindu neighbor gifts plot of land

Hindu neighbour gifts land to Muslim journalist

Actor Mohanlal: ʼಎಂಪುರಾನ್’ ಚಿತ್ರಕ್ಕೆ ಬಿಜೆಪಿ, ಆರ್‌ಎಸ್ಎಸ್‌ನಿಂದ ವಿರೋಧ ವ್ಯಕ್ತವಾದ ನಡುವೆ ನಟ ಮೋಹನ್ ಲಾಲ್ ವಿಷಾದ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕಲಾಗುವುದು ಎಂದು ಭರವಸೆ ನೀಡಿದ್ದಾರೆ. ʼನಟನಾಗಿ, ನನ್ನ ಯಾವುದೇ ಚಿತ್ರಗಳು ರಾಜಕೀಯ, ಸಿದ್ಧಾಂತ ಅಥವಾ ಧಾರ್ಮಿಕ ಸಮುದಾಯದ ವಿರುದ್ಧ ದ್ವೇಷ ಉತ್ತೇಜಿಸುವುದಿಲ್ಲ ಎಂದು ಖಾತ್ರಿಪಡಿಸುವದು ನನ್ನ ಕರ್ತವ್ಯ. ಚಿತ್ರದಿಂದ ನನ್ನನ್ನು ಪ್ರೀತಿಸುವವರಿಗಾದ ನೋವಿಗೆ ನಾನು ಮತ್ತು ತಂಡ ವಿಷಾದಿಸುತ್ತೇವೆ. ಚಿತ್ರದಲ್ಲಿನ ಅಂತಹ ಅಂಶ ತೆಗೆಯಲು ನಿರ್ಧರಿಸಿದ್ದೇವೆ’ ಎಂದು ಫೇಸ್ಟುಕ್ ನಲ್ಲಿ ತಿಳಿಸಿದ್ದಾರೆ.

ಚಿತ್ರದ ಕೆಲವು ಸನ್ನಿವೇಶಗಳು ಗೋದ್ರಾ ಹತ್ಯಾಕಾಂಡಕ್ಕೆ ಆರ್‌ಎಸ್‌ಎಸ್ ಕಾರಣ ಎಂದು ಆರೋಪಿಸುವಂತಿವೆ. ಹಿಂದುತ್ವವನ್ನು ವಿರೋಧಿಸುವ ದೃಶ್ಯಗಳಿವೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಆಕ್ಷೇಪಿಸಿದ್ದವು. ಕೇಂದ್ರ ಮಧ್ಯ ಪ್ರವೇಶದ ನಂತರ, ಕೇಂದ್ರ ಸೆನ್ಸಾರ್ ಮಂಡಳಿ ಚಿತ್ರಕ್ಕೆ 17 ದೃಶ್ಯಗಳಿಗೆ ಕತ್ತರಿ ಹಾಕಿತ್ತು.

ಕೇರಳ ಸಿಎಂ ಬೆಂಬಲ: ಕೇರಳ ಸಿಎಂ ಪಿಣರಾಯಿ ವಿಜಯನ್ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಕೋಮು ವಾದದ ವಿರುದ್ದ ಸಿನಿಮಾ ನಿರ್ಮಾಪಕರು ನಿಲುವಿನ ಬಗ್ಗೆ ಆರ್‌ಎಸ್ ಭಯದ ವಾತಾವರಣ ಸೃಷ್ಟಿಸುತ್ತಿದೆ’ ಎಂದಿದ್ದಾರೆ.