Home News CM Mamata Banerjee: ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ-ಸಿಎಂ ದೀದಿ ವಿವಾದ!

CM Mamata Banerjee: ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ-ಸಿಎಂ ದೀದಿ ವಿವಾದ!

Hindu neighbor gifts plot of land

Hindu neighbour gifts land to Muslim journalist

CM Mamata Banerjee: ‘ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ. ಅವರು ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ’ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.

ರಂಜಾನ್ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಮಮತಾ, ನಾನು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಧರ್ಮವನ್ನು ಅನುಸರಿಸುತ್ತಿದ್ದೇನೆ. ಆದರೆ ಅವರು (ಬಿಜೆಪಿ) ಕೊಳಕು ಧರ್ಮವನ್ನು ಅನುಸರಿಸುತ್ತಿದ್ದಾರೆ. ರಾಮ್ ಮತ್ತು ಬಾಮ್ (ಬಿಜೆಪಿ ಮತ್ತು ಎಡಪಕ್ಷಗಳು) ಕೋಮುಗಲಭೆ ಸೃಷ್ಟಿಸುತ್ತಿವೆ. ನಾನು ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ’ ಎಂದು ಹೇಳಿದರು.

ಮಮತಾ ಹೇಳಿಕೆಗೆ ಪ್ರತಿಕ್ರಿಯಸಿದ ಬಂಗಾಳ ಬಿಜೆಪಿ ಅಧ್ಯಕ್ಷ ಸುವೇಂದು ಅಧಿಕಾರಿ, ‘ಕೊಳಕು ಧರ್ಮ ಯಾವುದಿದೆ? ಈ ಹಿಂದೆ ಹಿಂದೂಗಳ ಮೇಲೆ ಮಮತಾ ನಡೆಸಿದ ದಾಳಿಗಳ ಬಗ್ಗೆ ನೆನಪಿಲ್ಲವೇ ಎಂದಿದ್ದಾರೆ.