Home News Bihar Election : ಬಿಹಾರ ಚುನಾವಣೋತ್ತರ ಸಮೀಕ್ಷೆ ಪ್ರಕಟ – ಜನ ಬಹುಪರಾಕ್ ಎಂದಿದ್ದು ಯಾರಿಗೆ?

Bihar Election : ಬಿಹಾರ ಚುನಾವಣೋತ್ತರ ಸಮೀಕ್ಷೆ ಪ್ರಕಟ – ಜನ ಬಹುಪರಾಕ್ ಎಂದಿದ್ದು ಯಾರಿಗೆ?

Hindu neighbor gifts plot of land

Hindu neighbour gifts land to Muslim journalist

Bihar Election : ಬಿಹಾರದಲ್ಲಿ ಎರಡು ಹಂತದ ಮತದಾನ ಮುಗಿದಿದ್ದು ಈಗ ಎಕ್ಸಿಟ್ ಪೋಲ್ ಗಳ ಹವಾ ಶುರುವಾಗಿದೆ. ಮತದಾನದ ಬಳಿಕ ಎಲ್ಲ ಎಕ್ಸಿಟ್ ಪೋಲ್ಗಳು ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ಚುನಾವಣೋತ್ತರ ಸಮೀಕ್ಷೆ ನಡೆಸಿ ತಮ್ಮ ವರದಿಗಳನ್ನು ಬಿಡುಗಡೆಗೊಳಿಸಿವೆ. ಎಲ್ಲಾ ಎಕ್ಸಿಟ್ ಪೋನ್ಗಳು ಎನ್ ಡಿಎಗೆ ಬಹುಪರಾಕ್ ಎಂದಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ನಿರಾಸೆ ಉಂಟುಮಾಡಿವೆ.

ಹೌದು, ಬಿಹಾರ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯನ್ನು ವಿವಿಧ ಸಮೀಕ್ಷಾ ಸಂಸ್ಥೆಗಳಿಂದ ಪ್ರಕಟಿಸಲಾಗಿದೆ. ಈ ಸಮೀಕ್ಷೆಯಲ್ಲಿ ಎನ್ ಡಿ ಎ ಬಹುಮತ ಪಡೆಯಲಿದೆ ಎಂಬುದಾಗಿ ಹೇಳಲಾಗುತ್ತಿದೆ.

ದೈನಿಕ್ ಭಾಸ್ಕರ್ ಸಮೀಕ್ಷೆಯಂತೆ ಎನ್ ಡಿ ಎ ಒಕ್ಕೂಟಕ್ಕೆ 145-160 ಸ್ಥಾನಗಳು ಬರಲಿದೆ. ಮಹಾಘಟಬಂಧನ್ ಗೆ 73-91 ಸ್ಥಾನಗಳು ಸಿಗಲಿದೆ. ಜೆವಿಸಿ ಪೋಲ್ಸ್ ಎನ್ಡಿಎ ಗೆ 135-150 ಸ್ಥಾನಗಳು ಎಂದು ಹೇಳಿದೆ. ಮಹಾಘಟಬಂಧನ್ 88-103 ಸ್ಥಾನಗಳು ಪಡೆಯಬಹುದು ಎಂದು ಅಂದಾಜಿಸಿದೆ. ಮ್ಯಾಟ್ರಿಝ್ ಸಮೀಕ್ಷೆಯು ಎನ್ ಡಿ ಎ ಗೆ 147-167 ಸ್ಥಾನಗಳನ್ನು ನೀಡಿದ್ದರೆ, ಮಹಾಘಟಬಂಧನ್ ಗೆ 70 ರಿಂದ 90 ಸ್ಥಾನಗಳು ಸಿಗಬಹುದು ಎಂದು ಹೇಳಿದೆ.

ಪೀಪಲ್ಸ್ ಇನ್ಸೈಟ್ ಎನ್ ಡಿ ಎ ಗೆ 133-159, ಮಹಾಘಟಬಂಧನ್ ಗೆ 75-101 ಎಂದು ಸಮೀಕ್ಷೆ ಮಾಡಿದೆ. ಪೀಪಲ್ಸ್ ಪಲ್ಸ್ ಎನ್ ಡಿ ಎ ಗೆ 145-160, ಮಹಾಘಟಬಂಧನ್ ಗೆ 73-91 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಿದೆ. ಚಾಣಕ್ಯ ಸಮೀಕ್ಷೆಯು ಎನ್‌ ಡಿ ಎ ಗೆ 130-138 ಸ್ಥಾನಗಳನ್ನು ಅಂದಾಜಿಸಿದೆ. ಮಹಾಘಟಬಂಧನ್‌ 100-108 ಸ್ಥಾನ ಪಡೆಯಬಹುದು ಎಂದು ಹೇಳಿದೆ.