Home News Gilli Nata: ಗಿಲ್ಲಿ ಶ್ರೀಮಂತನಾ ಇಲ್ಲ ಬಡವನಾ? ಅಸಲಿ ಸತ್ಯ ಬಿಚ್ಚಿಟ್ಟ ಸಂಬಂಧಿಕ

Gilli Nata: ಗಿಲ್ಲಿ ಶ್ರೀಮಂತನಾ ಇಲ್ಲ ಬಡವನಾ? ಅಸಲಿ ಸತ್ಯ ಬಿಚ್ಚಿಟ್ಟ ಸಂಬಂಧಿಕ

Hindu neighbor gifts plot of land

Hindu neighbour gifts land to Muslim journalist

Gilli Nata: ಬಿಗ್ ಬಾಸ್ ಸ್ಪರ್ಧಿ ಆಗಿರುವ ಗಿಲ್ಲಿ ನಟ ಹೊರಗಡೆ ತನ್ನದೇ ಆದ ಹೊಸ ಕ್ರೇಜ್ ಸೃಷ್ಟಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದಂತೆ ಹೊರ ಪ್ರಪಂಚದಲ್ಲಿ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಬಿಗ್ ಬಾಸ್ ವಿನ್ನರ್ ಅವರೇ ಆಗಬೇಕೆಂದು ಅನೇಕರು ಆಸೆಪಟ್ಟು ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಷನ್ ಕೂಡ ಮಾಡುತ್ತಿದ್ದಾರೆ. ಇದರ ನಡುವೆ ಗಿಲ್ಲಿಯ ಸಂಬಂಧಿಕರು ಒಬ್ಬರು ಮಾಧ್ಯಮ ಒಂದರಲ್ಲಿ ಮಾತನಾಡಿದ್ದು, ಅವರು ಶ್ರೀಮಂತರೋ, ಬಡವರೋ ಎಂಬುದರ ಕುರಿತು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಗಿಲ್ಲಿ ನಟ (Gilli Nata) ಅವರು ಶ್ರಿಮಂತನಾ ಅಥವಾ ಬಡವನಾ ಎಂಬ ಅನುಮಾನ ಹಲವರಿಗೆ ಇದೆ. ಆ ಬಗ್ಗೆ ಅವರ ಕುಟುಂಬದ ಸದಸ್ಯರಾದ ಬಸವರಾಜು ಅವರು ಮಾಧ್ಯಮ ಒಂದರಲ್ಲಿ  ಮಾತನಾಡಿದ್ದು, ಗಿಲ್ಲಿಯದ್ದು ಮಿಡಲ್ ಕ್ಲಾಸ್ ಕುಟುಂಬ. ಇಂದಿಗೂ ಅವರ ತಂದೆ-ತಾಯಿ ವ್ಯವಸಾಯ ಮಾಡಿಕೊಂಡಿದ್ದಾರೆ. ಮಧ್ಯಮವರ್ಗದ ಕುಟುಂಬ ಆದ್ದರಿಂದ ಹೊಟ್ಟೆಗೆ ಬಟ್ಟೆಗೆ ಶಿಕ್ಷಣಕ್ಕೆ ಕೊರತೆ ಇಲ್ಲ. ಪಿಆರ್ ನೇಮಿಸಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಾನೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ತಂದೆ-ತಾಯಿಗೆ ಪಿಆರ್ ಎಂದರೆ ಏನು ಎಂಬುದೇ ಗೊತ್ತಿಲ್ಲ ನಿನ್ನೆ ಭತ್ತ ಕೊಯ್ದಿದ್ದಾರೆ. ಮಳೆ ಬಂದು ಎಲ್ಲವೂ ನೆನೆದು ಹೋಗಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ಗಿಲ್ಲಿ ಏನೇ ಸಂಪಾದನೆ ಮಾಡಿದರೂ ಅವರ ತಂದೆ-ತಾಯಿ ತಮ್ಮ ಕಾಯಕ ಮುಂದುವರಿಸುತ್ತಿದ್ದಾರೆ. ಅವರು ಹಳ್ಳಿ ಜನ. ಪಿಆರ್, ಫೇಸ್ ಬುಕ್ ಇತ್ಯಾದಿ ಅವರಿಗೆ ಗೊತ್ತಿಲ್ಲ. ಗಿಲ್ಲಿಗೆ ಹಣಕಾಸಿನ ಸಮಸ್ಯೆ ಯಾವುದು ಇಲ್ಲ. ಆದರೆ ಆತ ಬೆಂಗಳೂರಿಗೆ ಬಂದಂತಹ ಸಂದರ್ಭದಲ್ಲಿ ತುಂಬಾ ಕಷ್ಟಪಟ್ಟಿದ್ದಾನೆ ಎಂದು ಬಸವರಾಜು ಅವರು ಹೇಳಿದ್ದಾರೆ.