Home News Bigg boss kannada: ಬಿಗ್‌ಬಾಸ್‌ಗೆ ಮತ್ತೆ ಬಂದ ಯಮುನಾ ಶ್ರೀನಿಧಿ!

Bigg boss kannada: ಬಿಗ್‌ಬಾಸ್‌ಗೆ ಮತ್ತೆ ಬಂದ ಯಮುನಾ ಶ್ರೀನಿಧಿ!

Hindu neighbor gifts plot of land

Hindu neighbour gifts land to Muslim journalist

Bigg boss kannada 11: ಬಿಗ್‌ಬಾಸ್‌ ಕನ್ನಡ 11ರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮನೆಯವರ ಸಂದೇಶ ಪಡೆಯುವ ಟಾಸ್ಕ್‌ ಜೊತೆಗೆ ಯುಮುನಾ ಶ್ರೀನಿಧಿ ಮತ್ತೆ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಹೌದು, ಬಿಗ್‌ಬಾಸ್‌ ಕನ್ನಡ 11ರಲ್ಲಿ(Bigg boss kannada 11) ಈ ವಾರ ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮನೆ ಸದಸ್ಯರ ಸಂದೇಶ ಪಡೆಯುವ ಟಾಸ್ಕ್‌ ನೀಡಲಾಗಿತ್ತು. ಇದರಲ್ಲಿ ಮನೆಯವರು ಮಾಡಿದ ತಪ್ಪಿನಿಂದ ಮಾನಸ ಮತ್ತು ಚೈತ್ರಾ ಕುಂದಾಪುರ ಸಂದೇಶ ಪಡೆಯುವ ಅವಕಾಶ ವಂಚಿತರಾದರು. ಇನ್ನು ಧನ್‌ರಾಜ್ ಕೂಡ ತಾವೇ ಮಾಡಿದ ಮಿಸ್ಟೇಕ್‌ ನಿಂದ ಮನೆಯವರ ಲೆಟರ್‌ ಮಿಸ್‌ ಮಾಡಿಕೊಂಡರು. ಇದಕ್ಕೆ ಕಾರಣ ಏನೆಂದರೆ ಬಝರ್ ಆದಾಗ ಬಿಗ್ ಬಾಸ್ ಮನೆಗೆ ಹೊರಗಿನವರು ಬಂದು ಡಿಸ್ಟರ್ಬ್​ ಮಾಡುತ್ತಾರೆ. ಬಿಗ್‌ಬಾಸ್ ಮಾಡುವ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ನೀಡದಿದ್ದರೆ ಪತ್ರ ಸಿಗುತ್ತದೆ ಎಂಬುದು ಟಾಸ್ಕ್‌ ನ ನಿಯಮವಾಗಿತ್ತು.

ಲೈಟ್​ ಆಫ್​ ಆದಾಗ ಸ್ಪರ್ಧಿಗಳು ಗುಡ್‌ ನೈಟ್‌ ಬಿಗ್‌ಬಾಸ್‌ ಎಂದು ಪ್ರತಿಕ್ರಿಯಿಸಿದರು. ಶುಕ್ರವಾರದ ಎಪಿಸೋಡ್​ನಲ್ಲಿ ತುಸು ಮುಂಚೆಯೇ ಲೈಟ್ ಆಫ್​ ಆದಾಗ ಬಹುತೇಕರಿಗೆ ಶಾಕ್ ಆಯಿತು. ಈಗಲೇ ಮಲಗೇಕಾ ಎಂದು ಕೂಡ ಪ್ರತಿಕ್ರಿಯೆ ನೀಡಿದರು. ಹೀಗಾಗಿ ಮಾಸನಾ ಮತ್ತು ಚೈತ್ರಾ ಅವರಿಗೆ ಸಿಗಬೇಕಿದ್ದ ಮನೆಯವರ ಸಂದೇಶ ಇಬ್ಬರಿಗೆ ಕೈತಪ್ಪಿತು.

ಇನ್ನು ಯುಮುನಾ ಶ್ರೀನಿಧಿ ಮತ್ತೆ ಬಿಗ್‌ಬಾಸ್‌ ಮೆನೆಗೆ ಎಂಟ್ರಿ ಕೊಟ್ಟರು. ಮನೆಯವ ಪತ್ರ ಪಡೆಯಲು ಗೋಲ್ಡ್‌ ಸುರೇಶ್ ಮತ್ತು ಮೋಕ್ಷಿತಾ ಪೈ ಅವರಿಗೆ ಟಾಸ್ಕ್‌ ನೀಡಿದ ಸಂದರ್ಭದಲ್ಲಿ ಯುಮುನಾ ಶ್ರೀನಿಧಿ ಅವರು ಸರ್ಧಿಗಳನ್ನು ಡಿಸ್ಟ್ರಾಕ್ಟ್ ಮಾಡಲು ಕಳುಹಿಸಿದ್ದರು. ಆದರೆ ಯಾರು ಕೂಡಾ ಯಮುನಾ ಬಂದಾಗ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಟಾಸ್ಕ್‌ ಮುಕ್ತಾಯವಾದಾಗ ಸುರೇಶ ಅವರ ಲೆಟರ್‌ ತೆಗೆದುೊಂಡು ಬಂದರು. ಮೋಕ್ಷಿತಾ ಅವರಿಗೆ ಮನೆಯವರಿಂದ ವಿಡಿಯೋ ಸಂದೇಶ ಸಿಕ್ಕಿತು.