Home News Bigg Boss Kannada 11: ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ವಿಭಿನ್ನ ಪ್ರೋಮೋ ರಿಲೀಸ್‌!...

Bigg Boss Kannada 11: ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ವಿಭಿನ್ನ ಪ್ರೋಮೋ ರಿಲೀಸ್‌! ಈ ಸೀಸನ್ ಸ್ಪೆಷಲ್ ಟಾಪಿಕ್ ಇಲ್ಲಿದೆ!

Hindu neighbor gifts plot of land

Hindu neighbour gifts land to Muslim journalist

Bigg Boss Kannada 11: ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ (Bigg Boss Kannada 11) ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ಬೆಂಕಿ ಮತ್ತು ನೀರಿನ ಸಮ್ಮಿಲನದಂತೆ ಕಾಣುವ ಕಣ್ಣಿನ ಲೋಗೋ ಹೊಸದೊಂದು ಹವಾ ಸೃಷ್ಟಿ ಮಾಡಲಿದೆ.

ಹೌದು, ಬೆಂಕಿ ಮತ್ತು ನೀರಿನ ಸಮ್ಮಿಲನವಾಗಿ ಬಿಗ್‌ಬಾಸ್‌ ಕಣ್ಣು ಕಾಣುತ್ತಿದ್ದು, ಬೆಂಕಿ-ನೀರು ಸಮ್ಮಿಲನವಾದಾಗ ಗುಡುಗು ಮಿಂಚಿನ ಸದ್ದಿನ ಜೊತೆಗೆ ಬೆಂಕಿನ ಕಿಡಿಗಳು ಹಾರುವುದು ಕಾಣಿಸುತ್ತಿದೆ. ಹೀಗಾಗಿ ಹಿಂದಿನ ಎಲ್ಲಾ ಸೀಸನ್‌ ಗಳಿಂದ ಈ ಬಾರಿ ವಿಭಿನ್ನವಾಗಿ ಶೋ ನಡೆಯಲಿದೆ ಎಂಬುದು ಕಾಣುತ್ತಿದೆ.

ಇನ್ನು ಕಿಚ್ಚ ಸುದೀಪ್‌ ಅವರೇ ಈ ಬಾರಿ ಕೂಡ ನಿರೂಪಣೆ ಮಾಡಲಿದ್ದಾರ ಎಂಬುದು ಕನ್ಫ್ಯೂಸ್ ಬೇಡ. ಯಾಕೆಂದರೆ ಪ್ರೋಮೋ ರಿಲೀಸ್‌ ಮಾಡುವಾಗ ಕಿಚ್ಚ ಸುದೀಪ ಎಂಬ ಹ್ಯಾಶ್ ಟ್ಯಾಗ್‌ ಬಳಸಲಾಗಿದೆ. ಈ ಮೂಲಕ ಶೋ ನಡೆಸುವವರು ಕಿಚ್ಚನೇ ಈ ಬಾರಿ ಕಾರ್ಯಕ್ರಮ ನಡೆಸಬಲ್ಲ ನಿರೂಪಕ ಎಂಬ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಇನ್ನು ಈ ಬಾರಿ ಶೋ ನಲ್ಲಿ ಯಾರೆಲ್ಲ ಇರಬಹುದು ಎಂಬ ಊಹೆ ಮಾಡೋದಾದ್ರೆ , ಗಿಚ್ಚಿಗಿಲಿ ಗಿಲಿ ಖ್ಯಾತಿಯ ರಾಘವೇಂದ್ರ ಅಲಿಯಾಸ್ ರಾಗಿಣಿ,ತುಕಾಲಿ ಸಂತು ಪತ್ನಿ ಮಾನಸ , ಮಜಾಭಾರತ ಹಾಗೂ ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ, ಗೀತಾ ಸೀರಿಯಲ್​​ ನಟಿ ಭವ್ಯಾ ಗೌಡ, ಚಿತ್ರಾಲ್ ರಂಗಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ನಟಿ ಅಶ್ವಿನಿ, ನಟ ಪಂಕಜ್ ನಾರಾಯಣ್, ಗೀತಾ ಸೀರಿಯಲ್ ನಟಿ ಶರ್ಮಿತಾ ಗೌಡ, ನಟಿ ಮೋಕ್ಷಿತಾ ಪೈ, ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿರುವ ವರ್ಷಾ ಕಾವೇರಿ, ನಟ ಗೌತಮಿ ಜಾದವ್ , ಸುಕೃತಾ ನಾಗ್, ನಟ ಚೇತನ್ ಚಂದ್ರ, ನಟ ತ್ರಿವಿಕ್ರಮ್ , ನಟ ವರುಣ್ ಆರಾಧ್ಯ, ನಟ ತರುಣ್ ಚಂದ್ರ, ಕೆಂಡಸಂಪಿಗೆ ನಟ ಆಕಾಶ್, ನಟಿ ಅಮಿತಾ ಸದಾಶಿವ, ನಟಿ ತನ್ವಿ ಬಾಲರಾಜ್, ಗಾಯಕಿ ಆಶಾ ಭಟ್, ಶನಿ ಸೀರಿಯಲ್ ನಲ್ಲಿ ಫೇಮಸ್ ಆಗಿದ್ದ ನಟ ಸುನೀಲ್ ಸೇರಿ ಹಲವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೋ ಇಲ್ಲಿದೆ

https://www.facebook.com/watch/?v=483871504571589

ಇನ್ನು ಇವೆಲ್ಲದರ ನಡುವೆ ಬಿಗ್‌ಬಾಸ್‌ ಆರಂಭವಾಗುವುದಕ್ಕೂ ಮುನ್ನ ವಾರಾಂತ್ಯದ ಶೋಗಳಾದ , ಗಿಚ್ಚಿಗಿಲಿ, ರಾಜಾರಾಣಿ ಸದ್ಯದಲ್ಲೇ ಮುಗಿಯಲಿದೆ. ಅದರ ನಂತರ ಅನುಬಂಧ ಅವಾರ್ಡ್ ಕಾರ್ಯಕ್ರಮ ಕೂಡ ನಡೆಯಲಿದ್ದು, ಸೆಪ್ಟೆಂಬರ್‌ ಕೊನೆಗೆ ಅನುಬಂಧ ಅವಾರ್ಡ್ ಕಾರ್ಯಕ್ರಮ ಇದೆ. ಹಾಗಾಗಿ ಅಕ್ಟೋಬರ್ ಮೊದಲವಾರ ಬಿಗ್‌ಬಾಸ್‌ ಆರಂಭವಾಗುವುದು ಬಹುತೇಕ ಪಕ್ಕಾ ಎನ್ನಲಾಗಿದೆ.