Home News Darshan: ಸರಿಯಾಗಿ ಸಾಕ್ಷಿ ಹೇಳದ ತಾಯಿ ರತ್ನಪ್ರಭಾ- ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ...

Darshan: ಸರಿಯಾಗಿ ಸಾಕ್ಷಿ ಹೇಳದ ತಾಯಿ ರತ್ನಪ್ರಭಾ- ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಬಿಗ್ ರಿಲೀಫ್‌!!

Hindu neighbor gifts plot of land

Hindu neighbour gifts land to Muslim journalist

Darshan : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರು ನಗರದ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಈ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ನಟ ದರ್ಶನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಸಂಬಂಧ ನಟ ದರ್ಶನ್ (Darshan), ಪವಿತ್ರಗೌಡ (Pavithra Gowda) ಸೇರಿ ಎಲ್ಲಾ ಆರೋಪಿಗಳ ವಿರುದ್ದ ಟ್ರಯಲ್ ಆರಂಭವಾಗಿದೆ. ಟ್ರಯಲ್ ವೇಳೆ ಸಾಕ್ಷಿಧಾರರಾಗಿದ್ದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನ ವಿಚಾರಣೆ ಮಾಡಲಾಗಿತ್ತು. ಈ ವೇಳೆ ರತ್ನಪ್ರಭಾ ಅವರ ಹೇಳಿಕೆಯಲ್ಲಿ ಗೊಂದಲವಿದ್ದ ಕಾರಣ ಅವರ ಪಾಟಿ ಸವಾಲಿಗೆ ಅವಕಾಶ ನೀಡಬೇಕು ಎಂದು ಕೋರಿತ್ತು. ಆದರೆ ಕೋರ್ಟ್ ಶನಿವಾರ ಈ ಮನವಿಯನ್ನು ತಿರಸ್ಕಾರ ಮಾಡಿದೆ. ಆದ್ದರಿಂದ ನಟ ದರ್ಶನ್, ಪವಿತ್ರಾ ಗೌಡಗೆ ಈ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. 57ನೇ ಸೆಷನ್ಸ್ ನ್ಯಾಯಾಲಯ ಪ್ರಾಸಿಕ್ಯೂಷನ್ ಮನವಿ ತಿರಸ್ಕಾರ ಮಾಡಿದೆ.

ಕೋರ್ಟ್ ತಿರಸ್ಕರಿಸಿದ ಕಾರಣದಿಂದಾಗಿ ಪ್ರಾಸಿಕ್ಯೂಷನ್ ಹಾಗೂ ಪೊಲೀಸರಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಕೋರ್ಟ್ ಈಗ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ, ಸಾಕ್ಷಿಯನ್ನು ಪರಿಗಣಿಸಲಿದೆ. ಆದರೇ, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರೇ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸರಿಯಾಗಿ ಸಾಕ್ಷಿ ಹೇಳಿಲ್ಲ. ರತ್ನಪ್ರಭಾ ಪೊಲೀಸರ ಮುಂದೆ, ಕೋರ್ಟ್ ಮುಂದೆ ನೀಡಿರುವ ಎರಡು ಹೇಳಿಕೆಗಳು ಭಿನ್ನವಾಗಿದೆ. ಮಗನ ಮೊಬೈಲ್ ನಂಬರ್ ಗುರುತಿಸಲು ಸಹ ಅವರು ವಿಫಲರಾಗಿದ್ದಾರೆ. 

ದರ್ಶನ್‌ಗೆ ಪ್ಲಸ್ ಪಾಯಿಂಟ್ ?

ಪ್ರಾಸಿಕ್ಯೂಷನ್ ಪರವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ , ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಅರ್ಜಿ ಇದೀಗ ವಜಾಗೊಳಿಸಿದೆ. ರತ್ನಪ್ರಭಾರನ್ನು ಸಾಕ್ಷಿಯಾಗಿ ಪರಿಗಣನೆ ಮಾಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ರತ್ನಪ್ರಭಾ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಸಾಕ್ಷಿ ಹೇಳಿಲ್ಲ. ಉಳಿದ ಸಾಕ್ಷಿಗಳು ಸಹ ಈ ಮಾದರಿಯಲ್ಲಿಯೇ ಹೇಳಿದರೆ ದರ್ಶನ್ ಸೇರಿ ಇತರ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಲಿದ್ದು, ಖುಲಾಸೆಯಾಗುವ ಸಾಧ್ಯತೆಯೂ ಇದೆ.