Home News Big Boss season 11: ಬಾಬ್‌ ಕಟ್‌ ಸತ್ಯ ಈಗ ನೀಲವೇಣಿ ಗೌತಮಿ: ಸತ್ಯ ಅಲಿಯಾಸ್‌...

Big Boss season 11: ಬಾಬ್‌ ಕಟ್‌ ಸತ್ಯ ಈಗ ನೀಲವೇಣಿ ಗೌತಮಿ: ಸತ್ಯ ಅಲಿಯಾಸ್‌ ಗೌತಮಿಯ ಹೊಸ ಅಧ್ಯಾಯ ಶುರು

Hindu neighbor gifts plot of land

Hindu neighbour gifts land to Muslim journalist

Big Boss season 11: ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಕನ್ನಡ ಬಿಗ್ಬಾಸ್ ಸೀಸನ್ 11 (Bigg Boss Kannada)ಕ್ಕೆ ಭರ್ಜರಿ ಓಪನಿಂಗ್‌ ಸಿಕ್ಕಿದೆ. ಈ ಬಾರಿಯ ಕಂಟೆಸ್ಟ್‌ಟ್‌ ವಿಶೇಷ ಹಾಗೂ ಬೇರೆ ಬೇರೆ ಝೋನರ್‌ನಿಂದ ಬಂದಿದ್ದಾರೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿ ಪಡೆದ 17 ಸ್ಪರ್ಧಿಗಳಲ್ಲಿ ಕಿರುತೆರೆ ನಟಿ ಎಲ್ಲ ಹೆಂಗಳೆಯರ ಮನಗೆದ್ದಿದ್ದ ಸತ್ಯ ಧಾರವಾಹಿಯ ಸತ್ಯ ಕೂಡ ಒಬ್ಬರು. ಕಳೆದ ಬಾರಿಯ ಬಿಗ್‌ ಬಾಸ್‌ ಶೂನಂತೆ ಈ ಸಲವೂ ಕ್ಲಿಕ್‌ ಆಗುತ್ತಾ ಎನ್ನುವ ಬಗ್ಗೆ ಕುತೂಹಲ ಎಲ್ಲರಲ್ಲೂ ಇದೆ. 17 ಮಂದಿ ಕಂಟೆಸ್ಟೆಂಟ್ಸ್ ಬಿಗ್ಬಾಸ್ ಮನೆ ಹೊಕ್ಕಿದ್ದಾರೆ.

ಗೌತಮಿಯ ಹೇರ್ಸ್ಟೈಲ್ ರಿವೀಲ್
ನಟಿ ಗೌತಮಿ ಜಾಧವ್ ಅನ್ನೋದಕ್ಕಿಂತ ಅವರನ್ನು ಸತ್ಯ ಎಂದರೆ ಜನರಿಗೆ ಹೆಚ್ಚು ಪರಿಚಿತರಾಗುತ್ತಾರೆ. ಖ್ಯಾತ ನಟಿ ಗೌತಮಿ ಅಲಿಯಾಸ್‌ ಸತ್ಯ ಅವರು ಕೂಡ ಈಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರೀಗ ಹೆಚ್ಚು ರಿವೀಲ್‌ ಆಗಿದ್ದು ಅವರ ಹೇರ್‌ ಸ್ಟೈಲ್‌ ಮೂಲಕ. ಸತ್ಯ ಧಾರವಾಹಿಯಲ್ಲಿ ಅವರ ಬಾಬ್‌ ಕಟ್‌ ಹೇರ್‌ ಸ್ಟೈಲ್‌ ಮೂಲಕ ಹೆಂಗಳೆಯರ ಮನ ಕದ್ದಿದ್ದರು. ಅವರು ಎಂದೂ ಆ ಧಾರವಾಹಿಯಲ್ಲಿ ಬೇರೆ ಹೇರ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ ಇದೀಗ ನಟಿ ಬಿಗ್ಬಾಸ್ ಮನೆಯಲ್ಲಿ ತಮ್ಮ ರಿಯಲ್ ಲುಕ್ ರಿವೀಲ್ ಮಾಡಿದ್ದಾರೆ.

ಗೌತಮಿ ಏನಂದ್ರು?
ಜನರ ಪ್ರೀತಿ ನನ್ನನ್ನು ಇಲ್ಲಿಯವರೆಗೆ ಬರೋಕೆ ಸಹಾಯ ಆಯ್ತು. ನಾನು ಏನೋ ಅದು ನಾನು ಅಲ್ಲ. ಇಲ್ಲಿಂದ ನಾನು ಬದಲಾಗ್ತೀನಿ ಅನಿಸುತ್ತೆ. ಗೌತಮಿಯ ಹೊಸ ಅಧ್ಯಾಯ ಇಲ್ಲಿ ಶುರುವಾಗುತ್ತೆ ಎಂದು ಹೇಳುತ್ತಾ ಸತ್ಯ, ಗೌತಮಿ ಜಾಧವ್ ಆಗಿ ತಮ್ಮ ರಿಯಲ್ ಹೇರ್ಸ್ಟೈಲ್ ನ್ನು ಬಿಗ್‌ ಬಾಸ್‌ ಮನೆಯಲ್ಲಿ ರಿವೀಲ್ ಮಾಡಿದ್ದಾರೆ.

ಲಾಯರ್‌ ಜಗದೀಶ್‌, ಹಿಂದೂ ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ ಸೇರಿದಂತೆ ಇನ್ನೂ ಹಲವಾರು ಕನ್ನಡದ ಬಿಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಕಂಟೆಸ್ಟ್‌ಗಳಾಗಿದ್ದಾರೆ. ಕಿಚ್ಚನ ಖಡಕ್‌ ಮಾತು, ಕಠೋರ ತಂಬಿದ ಧ್ವನಿ, ಪ್ರೀತಿ ತುಂಬಿದ ಮಾತಿನ ನಿರೂಪಣೆ ಎಂದಿನಂತೆ ಎಲ್ಲರ ಗಮನ ಸೆಳೆಯುತ್ತಿದೆ. ಹಲವು ದಿನಗಳ ಕುತೂಹಲಕ್ಕೆ ನಿನ್ನೆ ತೆರೆಬಿದ್ದಿದೆ. ಇನ್ನೇನಿದ್ದರು ಬಿಬಗಗ ಬಾಸ್‌ ಸ್ಪರ್ಧಿಗಳ ಆಟ ನೋಡೋದೊಂದೇ ಬಾಕಿ.