Home News Bengaluru : ಭೀಮನ ಅಮಾವಾಸ್ಯೆ – ಗಂಡನ ಪಾದ ಪೂಜೆ ಮಾಡಿ ಕೆಲವೇ ಹೊತ್ತಲ್ಲಿ ಶಿವನ...

Bengaluru : ಭೀಮನ ಅಮಾವಾಸ್ಯೆ – ಗಂಡನ ಪಾದ ಪೂಜೆ ಮಾಡಿ ಕೆಲವೇ ಹೊತ್ತಲ್ಲಿ ಶಿವನ ಪಾದ ಸೇರಿದ ಹೆಂಡತಿ !!

Hindu neighbor gifts plot of land

Hindu neighbour gifts land to Muslim journalist

Bengaluru: ಭೀಮನ ಗಂಡನಿಗೆ ಪಾದಪೂಜಿ ಸಲ್ಲಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು ಗಂಡನಿಗೆ ಪೂಜೆ ಸಲ್ಲಿಸಿದ ತಕ್ಷಣವೇ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಹೌದು, ಬೆಂಗಳೂರು ಹೊರವಲಯದ ದಾಸನಪುರದ ಅಂಚೆಪಾಳ್ಯದಲ್ಲಿಈ ಧಾರುಣ ಘಟನೆ ನಡೆದಿದೆ. ಮರಣಹೊಂದಿದ ಯುವತಿಯು ಸ್ಪಂದನಾ (24) ಎಂದು ಗುರುತಿಸಲಾಗಿದೆ.

ಅಂದಹಾಗೆ 2024ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಸ್ಪಂದನಾ ಹಾಗೂ ಅಭಿಷೇಕ್ ದಂಪತಿ ಕಳೆದ ಕೆಲ ತಿಂಗಳಿಂದ ಅಂಚೆಪಾಳ್ಯದಲ್ಲಿ ವಾಸವಿದ್ದರು. ಬೆಂಗಳೂರಿನ ಕಾಲೇಜಿನಲ್ಲಿ ಪಿಜಿ ಓದುವಾಗ ಈ ಜೋಡಿಗೆ ಪರಿಚಯವಾಗಿದ್ದು, ನಂತರ ಪ್ರೀತಿಯಾಗಿ ಕನಕಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆಯಾಗಿದ್ದರು.

ಭೀಮನ ಅಮಾವಾಸ್ಯೆ ಪ್ರಯುಕ್ತ ನಿನ್ನೆ (ಜು.24) ಗಂಡನಿಗೆ ಪಾದಪೂಜೆ ಮಾಡಿದ ಸ್ಪಂದನಾ, ಅದಾದ ಕೆಲ ಹೊತ್ತಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮದುವೆಯ ನಂತರ ವರದಕ್ಷಿಣೆಗಾಗಿ ಗಂಡ ಅಭಿಷೇಕ್ ಹಾಗೂ ಅವನ ತಾಯಿ ಲಕ್ಷ್ಮಮ್ಮ ಇವರಿಂದ ಸ್ಪಂದನಾ ನಿರಂತರ ಕಿರುಕುಳಕ್ಕೊಳಗಾಗುತ್ತಿದ್ದಾಳೆ ಎಂಬ ಆರೋಪ ಮಾಡಿದ್ದಾರೆ. ಮಹಿಳೆಯ ಪೋಷಕರಿಗೆ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಗಂಡ ಅಭಿಷೇಕ್ ಹಾಗೂ ಆತನ ತಾಯಿ ಲಕ್ಷ್ಮಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಸಂಬಂಧಿತ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ

ಇದನ್ನೂ ಓದಿ: War: ಆ ಒಂದು ಹಿಂದೂ ದೇಗುಲಕ್ಕಾಗಿ ಥೈಲ್ಯಾಂಡ್- ಕಾಂಬೋಡಿಯಾ ನಡುವೆ ಯುದ್ಧ!! ಅಷ್ಟಕ್ಕೂ ಆಗಿದ್ದೇನು?