Home News Bengaluru: ಬೆಂಗಳೂರು: ಜೂ.1ರಿಂದ ವಿಧಾನಸೌಧ ಜನರ ವೀಕ್ಷಣೆಗೆ ಮುಕ್ತ!

Bengaluru: ಬೆಂಗಳೂರು: ಜೂ.1ರಿಂದ ವಿಧಾನಸೌಧ ಜನರ ವೀಕ್ಷಣೆಗೆ ಮುಕ್ತ!

Shakti scheme
Image source: TV9 KANNADA

Hindu neighbor gifts plot of land

Hindu neighbour gifts land to Muslim journalist

Bengaluru: ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು (Bengaluru) ವಿಧಾನಸೌಧದ ಸಭಾಂಗಣದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಜೂ.1ರಿಂದ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರ್‌ಗೆ ಚಾಲನೆ ನೀಡಲಿದೆ. ಪ್ರತಿ ಭಾನುವಾರ, 2 ಮತ್ತು 4ನೇ ಶನಿವಾರ ವಿಧಾನಸೌಧದ ಗೈಡೆಡ್ ಟೂರ್ ವ್ಯವಸ್ಥೆ ಏರ್ಪಡಿಸಲಾಗುತ್ತಿದ್ದು, ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಇದಕ್ಕೆ ಸಮಯ ಹಾಗೂ ಶುಲ್ಕ ನಿಗದಿ ಮಾಡಲಾಗಿದೆ.

ಈ ನಿಮಿತ್ತ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌, ಗೈಡೆಡ್ ಟೂ‌ರ್ ಅನ್ನು ಬಹಳ ಚಿಂತನೆ ಮಾಡಿ ಆರಂಭಿಸಲಾಗುತ್ತಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಕಟ್ಟಡ ವಿಧಾನಸೌಧವಾಗಿದ್ದು, ಪ್ರಜಾಪ್ರಭುತ್ವದ ದೇಗುಲ. ಆಸಕ್ತರಿಗೆ, ವಿದ್ಯಾರ್ಥಿಗಳಿಗೆ, ಜನರಿಗೆ ಇದರ ದರ್ಶನ ಮಾಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.