Home News Bengaluru Stampede : ಬೆಂಗಳೂರು ಕಾಲ್ತುಳಿತ ಪ್ರಕರಣ – ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಮೌನ!!...

Bengaluru Stampede : ಬೆಂಗಳೂರು ಕಾಲ್ತುಳಿತ ಪ್ರಕರಣ – ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಮೌನ!! ಅಮಿತ್ ಶಾ ಭಯವೇ ಕಾರಣ?

Hindu neighbor gifts plot of land

Hindu neighbour gifts land to Muslim journalist

Bengaluru Stampede : ರಾಜ್ಯದಲ್ಲೇ ಯಾವುದೇ ಅಹಿತಕರ ಘಟನೆ ನಡೆದರೂ ಕೂಡ ಕೇಂದ್ರ ತನಿಖಾ ಸಂಸ್ಥೆ ಗಳಿಂದಲೇ ತನಿಖೆಯಾಗಬೇಕೆಂದು ಆಗ್ರಹಿಸುತ್ತಿದ್ದ ಬಿಜೆಪಿ- ಜೆಡಿಎಸ್ ನಾಯಕರು, ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಾತ್ರ ಮೃದು ಧೋರಣೆ ತಾಳಿದ್ದಾರೆ ಎಂಬ ಅಭಿಪ್ರಾಯ ಸಾರ್ವ ಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಹೌದು, ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನಸ್ತೋಮ ಸೇರಿದಾಗ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಇದಕ್ಕೆ ಪೊಲೀಸರನ್ನು ಹೊಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇಷ್ಟಾದರೂ ಕೂಡ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರದ ವಿರುದ್ಧ ಯಾವುದೇ ರೀತಿಯ ಕಠಿಣವಾದಂತಹ ಪ್ರತಿಭಟನೆಯನ್ನು ಕೈಗೊಂಡಿಲ್ಲ. ಮಾಧ್ಯಮಗಳ ಮುಂದೆ ಒಂದೆರಡು ಆರೋಪದ ಮಾತುಗಳನ್ನಾಡುತ್ತಿವಿಯೇ ಹೊರತು ಬೇರಾವುದೇ ರೀತಿಯ ಎಚ್ಚರಿಕೆಯ ಹೇಳಿಕೆಗಳನ್ನು, ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಈ ನಿಲುವಿಗೆ ಕಾರಣವೇನೆಂದು ನೋಡಿದಾಗ ಅದರ ಹಿಂದೆ ಕಂಡುಬರುವುದು ಅಮಿತ್ ಶಾ ಅವರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರೇ ಐಸಿಸಿ ಮುಖ್ಯಸ್ಥರಾಗಿರುವು ದರಿಂದ ಈ ಘಟನೆಯನ್ನು ಉನ್ನತಮಟ್ಟದ ತನಿಖೆ ವಹಿಸುವಂತೆ ಯಾರೊಬ್ಬರೂ ಆಗ್ರಹಿಸುತ್ತಿಲ್ಲ. ಒಂದು ವೇಳೆ ಉನ್ನತಮಟ್ಟದ ತನಿಖೆಗೆ ವಹಿಸಿದರೆ, ಐಪಿಎಲ್‌ನಲ್ಲಿ ನಡೆದ ಕೆಲ ಘಟನೆಗಳು ಹಾಗೂ ಆರ್ ಸಿಬಿ ಗೆಲುವಿನ ಮುಂಚಿತವಾಗಿ ನಡೆದ ಕೆಲ ಘಟನೆಗಳು, ಪತ್ರಗಳು, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು, ನಂತರ ಅದನ್ನು ಕಿತ್ತು ಹಾಕಿರುವ ವಿಚಾರ ಕೂಡ ತನಿಖೆಗೆ ಒಳಪಡಲಿವೆ. ಆಗ ಕ್ರಿಕೆಟ್ ಕರಾಳತೆಯೂ ಹೊರಬರಲಿದೆ.

ಹೀಗಾಗಿಯೇ ಕಾಲ್ತುಳಿತ ಪ್ರಕರಣದ ಕುರಿತು ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡು ತ್ತಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಉನ್ನತ ತನಿಖೆಯ ಬಗ್ಗೆ ಕಮಕ್ ಕಿಮಕ್ ಎನ್ನುತ್ತಿಲ್ಲ. ಇನ್ನು ರಾಜ್ಯ ಬಿಜೆಪಿ ನಾಯಕರಿಗಂತೂ ಈ ಬಗ್ಗೆ ಮಾತನಾ ಡುವುದು ಭಾರೀ ಕಷ್ಟಕರವಾಗಿದೆ. ಈ ಮೌನಕ್ಕೆ ಕೇಂದ್ರ ನಾಯಕರ ಹೆದರಿಕೆಯೋ ಅಥವಾ ಮತ್ಯಾವುದೋ ಕಾರಣ ವಿದೆಯೋ ಎಂಬ ಬಿಸಿಬಿಸಿ ಚರ್ಚೆ ವ್ಯಾಪಕವಾಗುತ್ತಿದೆ.