Home News Devanahalli ಭೂ ವಿವಾದ – ಬೆಂಕಿಯಂತ 4 ಷರತ್ತು ಹಾಕಿ ಸರ್ಕಾರಕ್ಕೆ ಜಮೀನು ನೀಡಲು ಒಪ್ಪಿದ...

Devanahalli ಭೂ ವಿವಾದ – ಬೆಂಕಿಯಂತ 4 ಷರತ್ತು ಹಾಕಿ ಸರ್ಕಾರಕ್ಕೆ ಜಮೀನು ನೀಡಲು ಒಪ್ಪಿದ ರೈತರು !!

Hindu neighbor gifts plot of land

Hindu neighbour gifts land to Muslim journalist

Devanahalli: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ದೇವನಹಳ್ಳಿ ಭೂ ವಿವಾದ ಪ್ರಕರಣ ಇದೀಗ ಇತ್ಯರ್ಥದ ಹಂತ ತಲುಪಿದೆ. ರೈತರಲ್ಲಿ ಇದೀಗ ಸರ್ಕಾರಕ್ಕೆ ಭೂಮಿ ನೀಡಲು ಮುಂದಾಗಿದ್ದಾರೆ.

 

ಹೌದು, ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿನ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರ‌ (Farmers) ನಿಯೋಗ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿತು. ರೈತರ ನಿಯೋಗ ನಾಲ್ಕು ಷರತ್ತುಗಳನ್ನು ಹಾಕಿ ಸರ್ಕಾರಕ್ಕೆ ಜಮೀನು ನೀಡಲು ಒಪ್ಪಿಗೆ ನೀಡಿತು.

 

ರೈತರು ಸಲ್ಲಿಸಿದ ನಾಲ್ಕು ಬೇಡಿಕೆಗಳು

* ಪ್ರತಿ ಎಕರೆಗೆ 3.50 ಕೋಟಿ ರೂ. ದರ ನಿಗದಿ ಮಾಡಬೇಕು.

* ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ನೀಡಬೇಕು.

ಅವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ನೌಕರಿ ನೀಡಬೇಕು.

* ಯಾವ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು.

* ಅಕ್ಕಪಕ್ಕ ಉಳಿದ ಜಮೀನು ಹಳದಿ ವಲಯವಾಗಿ ಪರಿವರ್ತಿಸಬೇಕು ಎಂದು ರೈತರ ನಿಯೋಗ ಷರತ್ತು ವಿಧಿಸಿದೆ.

 

ಪ್ರತಿ ಎಕರೆಗೆ 3.50 ಕೋಟಿ ರೂ. ಹಾಗೂ ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ಕೊಟ್ಟರೆ 449 ಎಕರೆ ಭೂಮಿಯನ್ನು ನೀಡಲು ಸಿದ್ಧವಿರುವುದಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಿಂದ ಆಗಮಿಸಿದ್ದ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.