Home News Belthangady: ಬೆಳ್ತಂಗಡಿ: ಎಕ್ಸೆಲ್ ಕಾಲೇಜಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪರೀಕ್ಷಾ ನಿಮಿತ್ತ ವಿಶೇಷ...

Belthangady: ಬೆಳ್ತಂಗಡಿ: ಎಕ್ಸೆಲ್ ಕಾಲೇಜಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪರೀಕ್ಷಾ ನಿಮಿತ್ತ ವಿಶೇಷ ಕಾರ್ಯಾಗಾರ

Hindu neighbor gifts plot of land

Hindu neighbour gifts land to Muslim journalist

Belthangady: ಗುರುವಾಯನಕೆರೆಯ ಎಕ್ಸೆಲ್ ವಿದ್ಯಾ ಸಮೂಹ ಸಂಸ್ಥೆಯಿಂದ ಜ. 11ರಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಪರೀಕ್ಷಾ ನಿಮಿತ್ತ 1 ದಿನದ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30ರ ತನಕ ಈ ಕಾರ್ಯಕ್ರಮ ನಡೆಯಲಿದೆ.

10ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಲು ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, 10ನೇ ತರಗತಿ ನಂತರದ ಶೈಕ್ಷಣಿಕ ಅವಕಾಶಗಳ ಬಗ್ಗೆ ವಿಸ್ತ್ರತ ಮಾಹಿತಿ, ಪರೀಕ್ಷಾ ಸಮಯದಲ್ಲಿ ಮಕ್ಕಳ ದಿನಚರಿ ಮತ್ತು ಪಾಲಕರ ಕರ್ತವ್ಯಗಳ ಬಗ್ಗೆ ಮಾಹಿತಿ, ಮಾದರಿ ಪ್ರಶ್ನೆ ಪತ್ರಿಕೆಗಳ ಕಿರುಹೊತ್ತಗೆಯ ವಿತರಣೆ ಮತ್ತು ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಯಲಿದೆ. ಎಕ್ಸೆಲ್ ಬೆಳಕು ಫೌಂಡೇಶನ್ ಅಡಿಯಲ್ಲಿ ಉಚಿತ ಶಿಕ್ಷಣ ಯೋಜನೆ ಬಗ್ಗೆಯೂ ವಿಸ್ತ್ರತ ಮಾಹಿತಿ ನೀಡಲಾಗುವುದು.

ಪ್ರಸಿದ್ಧ ಚಿತ್ರ ನಿರ್ದೇಶಕ ಮತ್ತು ಕೌನ್ಸಿಲರ್ ಆಗಿರುವ ಸ್ಮಿತೇಶ್‌ ಬಾರ್ಯ, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಚೇರ್ಮನ್ ಸುಮಂತ್‌ ಕುಮಾ‌ರ್ ಜೈನ್, ವಿದ್ಯಾ ಸಾಗರ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ. ನವೀನ್ ಮರೀಕೆ, ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲ ಡಾ. ಪ್ರಜ್ವಲ್ ಕಜೆ, ಎಕ್ಸೆಲ್ ಟೆಕ್ನ ಸ್ಕೂಲ್ ನ ಎ.ಓ. ಆಗಿರುವ ಶಾಂತಿನಾಥ ಜೈನ್‌ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳ್ತಂಗಡಿ, ಮುಂಡಾಜೆ, ಉಜಿರೆ, ಕನ್ಯಾಡಿ, ಬೆಳ್ತಂಗಡಿ, ಪುಂಜಾಲಕಟ್ಟೆ, ಬಿಸಿರೋಡ್ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಮಧ್ಯಾಹ್ನದ ಊಟ ಮತ್ತು ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.