Home News ಬೆಳ್ತಂಗಡಿ : ಪತ್ನಿಗೆ ವಂಚಿಸಿ ಎರಡನೇ ಮದುವೆಯಾದ ಸರ್ವೆ ಇಲಾಖೆಯ ನೌಕರ , ಗಂಡನ ವಿರುದ್ಧ...

ಬೆಳ್ತಂಗಡಿ : ಪತ್ನಿಗೆ ವಂಚಿಸಿ ಎರಡನೇ ಮದುವೆಯಾದ ಸರ್ವೆ ಇಲಾಖೆಯ ನೌಕರ , ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

Hindu neighbor gifts plot of land

Hindu neighbour gifts land to Muslim journalist

ಪತಿ ಮತ್ತು ಆತನ ತಾಯಿ ಮಾನಸಿಕವಾಗಿ ಹಿಂಸೆ ನೀಡಿದಲ್ಲದೆ, ತನ್ನನ್ನು ವಂಚಿಸಿ ಎರಡನೇ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಗ್ರಾಮದಲ್ಲಿ ನಡೆದಿದೆ.

ಕರೀಮಣೆಲು ಗ್ರಾಮದ ಗಾಂಧಿನಗರದ ದೀಕ್ಷಾ(24) ಎಂಬವರು ಮೇಲಂತಬೆಟ್ಟು ಗ್ರಾಮದ ಮಾತೃಶ್ರೀ ನಿವಾಸಿ ಬೆಳ್ತಂಗಡಿ ಸರ್ವೆ ಇಲಾಖೆಯ ದಿನಕೂಲಿ ನೌಕರ ಚೇತನ್ ಎಂಬಾತನ ವಿರುದ್ಧ ದೂರು ನೀಡಿದ್ದಾರೆ.

ಚೇತನ್ ಎಂಬುವರನ್ನು ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆಯಾಗಿ ಸುಮಾರು 4 ವರ್ಷದ ದೃತಿ ಎಂಬ ಮಗಳು ಇದ್ದು, ಗಂಡನ ಮನೆಯಾದ ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ಮಾತೃಶ್ರೀ ನಿಲಯ ಎಂಬಲ್ಲಿ ವಾಸ್ತವ್ಯವಿದ್ದಾಗ ಆರೋಪಿಗಳು ಕ್ಷುಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ಆದರೂ ಅದನ್ನೆಲ್ಲ ಸಹಿಸಿಕೊಂಡು ಬಂದಿದ್ದು ನಂತರ ಹಿಂಸೆ ತಾಳಲಾಗದೆ 7 ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದೇನೆ.

ಆ ಸಮಯದಲ್ಲಿ ಆರೋಪಿತನು ಲಾಯಿಲ ಗ್ರಾಮದ ಸುರಕ್ಷಾ ಎಂಬ ಹುಡುಗಿಯನ್ನು ಕುತ್ರೊಟ್ಟು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ ಎಂದು ಆರೋಪಿಸಿ, ಈ ಬಗ್ಗೆ ನ್ಯಾಯ ಕೊಡಿಸುವಂತೆ ಪೊಲೀಸರಿಗೆ ದೀಕ್ಷಾ ದೂರು ನೀಡಿದ್ದಾರೆ.

ಚೇತನ್ ಬೆಳ್ತಂಗಡಿ ತಾಲೂಕು ಕಛೇರಿಯ ಸರ್ವೆ ಇಲಾಖೆಯ ಬಾಂದ್ ಜವಾನನಾಗಿ ದುಡಿಯುತ್ತಿದ್ದು, ಜೆರಾಕ್ಸ್ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದಾಕೆಯನ್ನು ಎರಡನೇ ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪತಿ ಚೇತನ್ ಮತ್ತು ಆತನ ತಾಯಿ ನಳಿನಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.