Home News Belagavi: ನನ್ನ ಸಿಡಿ ಕೇಸ್‌ನಲ್ಲಿಯೂ ಡಿಕೆಶಿ ಆಡಿಯೋ ಇದೆ; ಹಣದಲ್ಲಿ ಈ ಮಹಾನ್‌ ನಾಯಕ ಪ್ರಭಾವಿ...

Belagavi: ನನ್ನ ಸಿಡಿ ಕೇಸ್‌ನಲ್ಲಿಯೂ ಡಿಕೆಶಿ ಆಡಿಯೋ ಇದೆ; ಹಣದಲ್ಲಿ ಈ ಮಹಾನ್‌ ನಾಯಕ ಪ್ರಭಾವಿ ಇದ್ದಾರೆ-ರಮೇಶ್‌ ಜಾರಕಿಹೊಳಿ

Belagavi

Hindu neighbor gifts plot of land

Hindu neighbour gifts land to Muslim journalist

Belagavi: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಅಶ್ಲೀಲ ವಿಡಿಯೋ ಕೇಸಿನಲ್ಲಿ ಮಹಾನ್‌ ನಾಯಕ ಡಿ.ಕೆ.ಶಿವಕುಮಾರ್‌ ಮಾತ್ರ ಭಾಗಿಯಾಗಿಲ್ಲ. ನಮ್ಮವರೂ ಈ ಕೇಸ್‌ನಲ್ಲಿ ಇದ್ದಾರೆ. ಜೂನ್‌ 4 ರ ನಂತರ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Prajwal Revanna: ಎಸ್‌ಐಟಿ ಸಂಪೂರ್ಣ ಡಿಸಿಎಂ ಡಿಕೆ ಶಿವಕುಮಾರ್‌ ಅಧೀನದಲ್ಲಿದೆ, ಶೀಘ್ರದಲ್ಲೇ ಮತ್ತೊಂದು ಸಿಡಿ- ಹೊಸ ಬಾಂಬ್‌ ಸಿಡಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌

ಅವರು ಇಂದು ಮತದಾನ ಮಾಡಿದ ನಂತರ, ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಡಿ.ಕೆ.ಶಿವಕುಮಾರ್‌ ಆಡಿಯೋ ಸುತ್ತುಹಾಕಿಕೊಂಡಿದೆ. ನನ್ನ ಕೇಸಿನಲ್ಲಿ ಕೂಡಾ ಡಿ.ಕೆ.ಶಿವಕುಮಾರ್‌ ನೇರ ಭಾಗಿಯಾಗಿರುವ ಕುರಿತು ನನ್ನ ಬಳಿ ಸಾಕ್ಷಿ ಇದೆ. ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಅವರ ಬಳಿ ಅಲ್ಲಿ, ಇಲ್ಲಿ, ಅಂತಾ ಸುತ್ತು ಹಾಕಿರೋದು ಇದ್ದರೆ, ನನ್ನ ಬಳಿ ನೇರವಾಗಿ ಮಾತನಾಡಿರುವುದೇ ಇದೆ.

ಇದನ್ನೂ ಓದಿ: Petrol Pump: ವಾಹನ ಮಾಲೀಕರಿಗೆ ಹೊಸ ರೂಲ್ಸ್: ಇನ್ಮುಂದೆ ಪೆಟ್ರೋಲ್ ಬಂಕ್ ನಲ್ಲೇ ಬೀಳುತ್ತೆ ದಂಡ!

ನನ್ನ ಕೇಸ್‌ನಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡಿರುವ ಆಡಿಯೋವನ್ನು ನಿಡುತ್ತೇನೆ. ಷಡ್ಯಂತ್ರ ನಡೆದಿರುವ ಕುರಿತು ಇದೆ. ಆದರೆ ಮಾಧ್ಯಮಕ್ಕೆ ನೀಡುವುದಿಲ್ಲ. ಸಿಬಿಐಗೆ ಕೇಸ್‌ ಕೊಟ್ಟರೆ ಮಾತ್ರ ಸಾಕ್ಷಿ ಕೊಡ್ತೀನಿ ಎಂದು ಹೇಳಿದ್ದಾರೆ.

ಮಹಾನ್‌ ನಾಯಕ ಹಣದಲ್ಲಿ ಪ್ರಭಾವಿ ಇರುವುದರಿಂದ ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡುವ ಸೊಕ್ಕು ಇದೆ. ನಾಲ್ಕು ವರ್ಷಗಳ ಹಿಂದೆ ನನ್ನ ಸಿಡಿ ಬಂದಿದೆ. ಈಗ ಪ್ರಜ್ವಲ್‌ ರೇವಣ್ಣನ ಪೆನ್‌ಡ್ರೈವ್‌ ಬಂದಿದೆ. ಮುಂದೆ ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರದ್ದು ಸಿಡಿ ಬರಬಹುದು ಎಂದು ಹೇಳಿದರು.