Home News ಕಡಲತೀರದಲ್ಲಿ ಸಾವಿರಾರು ಜನರ ಕಣ್ಣೆದುರೇ ಪತನಗೊಂಡ ಹೆಲಿಕಾಪ್ಟರ್ !! | ಬೆಚ್ಚಿಬೀಳಿಸುವ ದೃಶ್ಯ ವೈರಲ್

ಕಡಲತೀರದಲ್ಲಿ ಸಾವಿರಾರು ಜನರ ಕಣ್ಣೆದುರೇ ಪತನಗೊಂಡ ಹೆಲಿಕಾಪ್ಟರ್ !! | ಬೆಚ್ಚಿಬೀಳಿಸುವ ದೃಶ್ಯ ವೈರಲ್

Hindu neighbor gifts plot of land

Hindu neighbour gifts land to Muslim journalist

ಸಂತೋಷದ ಕ್ಷಣ ಒಮ್ಮೆಲೆ ಗಾಬರಿಯ ಕ್ಷಣವಾಗಿ ಬದಲಾದಾಗ ಎಂತಹವರಿಗೂ ಎದೆ ಝಲ್ ಎನ್ನುತ್ತದೆ. ಅಂತಹುದೇ ಘಟನೆಯೊಂದು ಇತ್ತೀಚೆಗೆ ವರದಿಯಾಗಿದೆ. ಅಮೆರಿಕದ ಪ್ರಸಿದ್ಧ ಮಿಯಾಮಿ ಬೀಚ್ ಬಳಿ ಹೆಲಿಕಾಪ್ಟರ್ ಪತನಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಘನೆಯ ವೇಳೆ ಸಾವಿರಾರು ಜನರು ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಮೆರಿಕದ ಪ್ರಸಿದ್ಧ ಮಿಯಾಮಿ ಬೀಚ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ಘಟನೆಯಿಂದ, ಒಂದು ಕ್ಷಣಕ್ಕೆ ಅಲ್ಲಿ ನೆರೆದಿದ್ದವರ ಉಸಿರೇ ನಿಂತು ಹೋದಂತಾಗಿತ್ತು. ವರದಿಯ ಪ್ರಕಾರ, ಫೆಬ್ರವರಿ 19 ರಂದು ಮಿಯಾಮಿಯ ಸೌತ್ ಬೀಚ್‌ನಲ್ಲಿ ಅಪಘಾತ ಸಂಭವಿಸಿದೆ. ಸಾವಿರಾರು ಜನರು ಬೀಚ್‌ನಲ್ಲಿ ಕುಟುಂಬ ಸಮೇತ ಮೋಜು ಮಸ್ತಿಯಲ್ಲಿ ನಿರತರಾಗಿದ್ದ ವೇಳೆ, ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿದೆ.

ಹೆಲಿಕಾಪ್ಟರ್ ಪತನದಿಂದ ಯಾವ ಪ್ರಾಣ ಹಾನಿಯೂ ಆಗಿಲ್ಲ ಎನ್ನುವುದು ಸಂತಸದ ವಿಚಾರ. ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೋವನ್ನು ಮಿಯಾಮಿ ಬೀಚ್ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೆಲಿಕಾಪ್ಟರ್ ಪತನದ ನಂತರ ಸಮುದ್ರದಿಂದ ಹೊಗೆ ಏಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ವರದಿಯ ಪ್ರಕಾರ, ಹೆಲಿಕಾಪ್ಟರ್ ಬಿದ್ದ ತಕ್ಷಣ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ 3 ಜನರಿದ್ದರು, ಅದರಲ್ಲಿ 2 ಜನರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯ ನಂತರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.