Home News Crime: ನಿಮ್ಮನೆ ಬಳಿ ಪಾರಿವಾಳ ಬಂತೆಂದರೆ ಎಚ್ಚರವಾಗಿರಿ! ಇದೊಂದು ಪಾರಿವಾಳ ಸ್ಕ್ಯಾಮ್!

Crime: ನಿಮ್ಮನೆ ಬಳಿ ಪಾರಿವಾಳ ಬಂತೆಂದರೆ ಎಚ್ಚರವಾಗಿರಿ! ಇದೊಂದು ಪಾರಿವಾಳ ಸ್ಕ್ಯಾಮ್!

Hindu neighbor gifts plot of land

Hindu neighbour gifts land to Muslim journalist

Crime: ಇತ್ತೀಚಿಗೆ ಕಳ್ಳತನ ಮಾಡಲು ಕಳ್ಳರು, ವಂಚಕರು ಹಲವು ವಿಧಾನಗಳನ್ನು ಕರಗತ ಮಾಡಿಕೊಳ್ಳುತ್ತಾರೆ ಅಂದರೆ ತಪ್ಪಾಗಲಾರದು. ಅಂತೆಯೇ ಇಲ್ಲೊಬ್ಬನ ಪ್ಲಾನ್ ನೋಡಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ! ಹೌದು, ನಿಮ್ಮ ಮನೆಯ ಬಳಿಯೂ ಪಾರಿವಾಳಗಳು ಬರುತ್ತಿದ್ರೆ ನೀವು ಎಚ್ಚರಿಕೆಯಿಂದ ಇರಲೇಬೇಕು. ಯಾಕೆ ಅಂತ ಇಲ್ಲಿ ಹೇಳ್ತಿವಿ ಕೇಳಿ.

ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನ ಕೇಂದ್ರ ಭಾಗದ ಕೆ.ಆರ್. ಮಾರಕಟ್ಟ, ಚಮರಾಜಪೇಟ, ಜಯನಗರ, ಕಾಟನ‌ಪೇಟೆ ಸೇರಿದಂತೆ ವಿವಿಧೆಡೆ ಮನೆಗಳ ಮೇಲೆ ಪಾರಿವಾಳಗಳನ್ನು ಹಾರಿ ಬಿಡುತ್ತಿದ್ದ ಮಂಜ ಪಾರಿವಾಳ ಹಿಡಿದುಕೊಂಡು ಬರುವುದಾಗಿ ಮಾಲೀಕರು ಹಾಗೂ ಸೆಕ್ಯೂರಿಟಿ ಗಾರ್ಡ್ ಅನುಮತಿ ಪಡೆದು ಒಳಗೆ ಹೋದರೆ ಮನೆಗಳ ಕಳ್ಳತನ (Crime) ಮಾಡಿಕೊಂಡೇ ವಾಪಸ್ ಬರುತ್ತಿದ್ದನು.

ಇದೀಗ ಸಿಟಿ ಮಾರ್ಕೆಟ್ ಪೊಲೀಸರಿಂದ ಮನೆಗಳ್ಳ ಮಂಜ ಅಲಿಯಾಸ್ ಪಾರಿವಾಳ ಮಂಜ ಅರೆಸ್ಟ್ ಆಗಿದ್ದಾನೆ. ಈತ ಹಲವಾರು ವರ್ಷಗಳಿಂದ ಮನೆ ಕಳ್ಳತನ ಮಾಡುತ್ತಿದ್ದನು. ಮೂಲತಃ ತಮಿಳುನಾಡಿನವನಾದ ಈತನ ಬಳಿಯಿಂದ 30 ಲಕ್ಷ ಮೌಲ್ಯದ ಚಿನ್ನದ ಆಭರಣ ವಶಕ್ಕೆ ಪಡೆಯಲಾಗಿದೆ. ಈತ ಪಾರಿವಾಳಗಳನ್ನು ಮನೆ ಮೇಲೆ ಹಾರಿಸುವುದು. ನಂತರ ಪಾರಿವಾಳ ಹಿಡಿದುಕೊಂಡು ಬರುವ ನೆಪದಲ್ಲಿ ಬಂದು, ಮನೆಗಳ ಬೀಗವನ್ನು ಒಡೆದು ಮನೆಯಲ್ಲಿದ್ದ ಎಲ್ಲ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುತ್ತಿದ್ದನು.

ಇದೇ ರೀತಿಯಲ್ಲಿ ಬೆಂಗಳೂರಿನ ವಿವಿಧೆಡೆ ಪಾರವಾಳಗಳನ್ನು ಹಾರಿಸುವ ಮಂಜ ಕಳೆದ ಹಲವಾರು ವರ್ಷಗಳಿಂದ ಸುಮಾರು 60 ಕ್ಕಿಂತಲೂ ಹೆಚ್ಚು ಮನೆಯಲ್ಲಿ ಕಳ್ಳತನ ಮಾಡಿದ್ದು . ಒಂದು ಕೇಸ್ ಕೆ.ಆರ್. ಮಾರ್ಕೆಟ್ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ವೇಳೆ ಮತ್ತಷ್ಟು ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಸದ್ಯ ಈ ಆರೋಪಿಯಿಂದ ಪೊಲೀಸರು ಬರೋಬ್ಬರಿ 475 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಇನ್ನಷ್ಟು ಮಾಹಿತಿಗಾಗಿ ಪೊಲೀಸರು ಆರೋಪಿ ಮಂಜನನ್ನು ವಿಚಾರಣೆ ಮಾಡುತ್ತಿದ್ದಾರೆ.