Home News ಜ.27ಕ್ಕೆ ಬ್ಯಾಂಕ್ ಮುಷ್ಕರ, 4 ದಿನ ರಜೆ

ಜ.27ಕ್ಕೆ ಬ್ಯಾಂಕ್ ಮುಷ್ಕರ, 4 ದಿನ ರಜೆ

Bank Holiday

Hindu neighbor gifts plot of land

Hindu neighbour gifts land to Muslim journalist

ಹೊಸದಿಲ್ಲಿ: ವಾರದಲ್ಲಿ ಐದು ದಿನ ಕೆಲಸದ ಅವಧಿಗೆ ಆಗ್ರಹಿಸಿ ಬ್ಯಾಂಕ್ ನೌಕರರು ಜನವರಿ 27ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮತ್ತು ವಾರಾಂತ್ಯ ಗಣರಾಜ್ಯೋತ್ಸವದ ರಜೆಗಳ ಮರುದಿನವೇ ಮುಷ್ಕರದ ಹಿನ್ನೆಲೆಯಲ್ಲಿ ಸತತ 4 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿವೆ. ಹೀಗಾಗಿ ಹಲವು ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಜನವರಿ 24 ಮತ್ತು 25 ಶನಿವಾರ-ಭಾನುವಾರ ರಜೆಯಾದರೆ, ಜನವರಿ 26 ಸೋಮವಾರ ಗಣರಾಜ್ಯೋತ್ಸವದ ಅಂಗವಾಗಿ ಬ್ಯಾಂಕ್‌ಗಳಿಗೆ ಸಾರ್ವತ್ರಿಕ ರಜೆ ಇರಲಿದೆ. ಜ.27ರಂದು ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ ಕೆಲಸಗಳು ಸ್ಥಗಿತಗೊಳ್ಳಲಿವೆ.

ಮೊಬೈಲ್ ಬ್ಯಾಂಕಿಂಗ್, ಮೂಲಕ ವಹಿವಾಟಿಗೆ ಅಡಚಣೆ ಇರುವುದಿಲ್ಲ. ಆದರೂ ಹಣ ವಿತ್ ಡ್ರಾವಲ್, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್ ಹಾಗೂ ಇತರೆ ಬ್ಯಾಂಕ್ ಶಾಖೆಯಲ್ಲಿ ದೊರೆಯುವಂತಹ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.