Home News ಬ್ಯಾಂಕ್ ಗ್ರಾಹಕರ ಗಮನಕ್ಕೆ | ಜೂನ್ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿದೆ ನೋಡಿ

ಬ್ಯಾಂಕ್ ಗ್ರಾಹಕರ ಗಮನಕ್ಕೆ | ಜೂನ್ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿದೆ ನೋಡಿ

Hindu neighbor gifts plot of land

Hindu neighbour gifts land to Muslim journalist

ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐ ಕಡೆಯಿಂದ ಜೂನ್ ತಿಂಗಳ ಬ್ಯಾಂಕ್ ರಜಾದಿನಗಳ ಕುರಿತು ಮಾಹಿತಿ ಹೊರಬಿದ್ದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 2022 ರಲ್ಲಿ ರಜಾದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯ ಪ್ರಕಾರ ಜೂನ್ 2022 ರಲ್ಲಿ ಎಂಟು ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ.

ಜೂನ್ ತಿಂಗಳಲ್ಲಿ ದೇಶದಾದ್ಯಂತ ಜನರು ಮಹಾರಾಣಾ ಪ್ರತಾಪ್ ಜಯಂತಿ, ಗುರು ಜಯಂತಿ ಹರಗೋಬಿಂದ್ ಅವರ ಜನ್ಮದಿನವಾದ ರಾಜ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಎಲ್ಲಾ ರಾಜ್ಯಗಳು ಈ ಹಬ್ಬಗಳು ಮತ್ತು ವಿಶೇಷ ದಿನಗಳನ್ನು ಆಚರಣೆ ಮಾಡಲ್ಲ. ಆದ್ದರಿಂದ ಈ ರಜೆಗಳು ಎಲ್ಲಾ ರಾಜ್ಯಗಳಲ್ಲಿ ಇರಲಾರದು. ಆದರೂ ನೀವು ರಜೆ ಇದ್ದ ದಿನ ಬ್ಯಾಂಕ್‌ಗೆ ಹೋಗಿ ಸಮಯ ವ್ಯರ್ಥ ಮಾಡುವ ಮುನ್ನ ರಜೆ ದಿನಗಳ ಬಗ್ಗೆ ತಿಳಿದುಕೊಳ್ಳಿ. ಆದಾಗ್ಯೂ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ದೇಶಾದ್ಯಂತ ಲಭ್ಯವಿರುತ್ತವೆ.

ರಜಾ ಪಟ್ಟಿ ಇಂತಿದೆ:

ಜೂನ್ 2: ಮಹಾರಾಣಾ ಪ್ರತಾಪ್ ಜಯಂತಿ, ಶಿಮ್ಲಾ ಮತ್ತು ಹಿಮಾಚಲ ಪ್ರದೇಶದ ಇತರ ಪ್ರದೇಶಗಳಲ್ಲಿ ಬ್ಯಾಂಕ್‌ ರಜೆ


ಜೂನ್ 5: ತಿಂಗಳ ಮೊದಲ ಭಾನುವಾರ (ವಾರದ ರಜೆ)

ಜೂನ್ 11: ತಿಂಗಳ ಎರಡನೇ ಶನಿವಾರ


ಜೂನ್ 12: ತಿಂಗಳ ಎರಡನೇ ಭಾನುವಾರ (ವಾರದ ರಜೆ)

ಜೂನ್ 15: ಶ್ರೀನಗರ, ಜಮ್ಮು, ಭುವನೇಶ್ವರ್ ಮತ್ತು ಐಜ್ವಾಲ್‌ನಲ್ಲಿ ಗುರು ಹರಗೋಬಿಂದ್ ಅವರ ಜನ್ಮ ವಾರ್ಷಿಕೋತ್ಸವ, ಮಿಜೋರಾಂನಲ್ಲಿ ವೈಎಂಎ ದಿನದ ಆಚರಣೆ ಮತ್ತು ಒಡಿಶಾದಲ್ಲಿ ರಾಜ ಸಂಕ್ರಾಂತಿ ಆಚರಣೆಯ ಸಂದರ್ಭದಲ್ಲಿ ಬ್ಯಾಂಕುಗಳು ಬಂದ್

ಜೂನ್ 19: ತಿಂಗಳ ಮೂರನೇ ಭಾನುವಾರ (ವಾರದ ರಜೆ)

ಜೂನ್ 25: ತಿಂಗಳ ನಾಲ್ಕನೇ ಶನಿವಾರ (ವಾರದ ರಜೆ)

ಜೂನ್ 26: ತಿಂಗಳ ನಾಲ್ಕನೇ ಭಾನುವಾರ (ವಾರದ ರಜೆ)