Home News AP: ‘ಮುಸ್ಲಿಮರಾಗಿ ಹುಟ್ಟಿ ಯೋಗ ಮಾಡಲು ನಾಚಿಕೆ ಆಗಲ್ವಾ?’ – ಯೋಗ ಮಾಡುತ್ತಿದ್ದ ಮಹಿಳೆಯರಿಗೆ ಕಿಡಿಗೇಡಿಗಳಿಂದ...

AP: ‘ಮುಸ್ಲಿಮರಾಗಿ ಹುಟ್ಟಿ ಯೋಗ ಮಾಡಲು ನಾಚಿಕೆ ಆಗಲ್ವಾ?’ – ಯೋಗ ಮಾಡುತ್ತಿದ್ದ ಮಹಿಳೆಯರಿಗೆ ಕಿಡಿಗೇಡಿಗಳಿಂದ ಬೆದರಿಕೆ

Hindu neighbor gifts plot of land

Hindu neighbour gifts land to Muslim journalist

AP: ಯೋಗಾಭ್ಯಾಸದಲ್ಲಿ ನಿರತರಾಗಿದ್ದ ಮುಸ್ಲಿಂ ಮಹಿಳೆಯರಿಗೆ ಕೆಲವು ಗೂಂಡಾಗಳು ನೀವು ಮುಸ್ಲಿಮರಾಗಿ ಹುಟ್ಟಿ ಯೋಗ ಮಾಡುತ್ತೀರಲ್ಲ ಎಂದು ಬೆದರಿಕೆ ಹಾಕಿ ಓಡಿಸಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೌದು, ಆಂ‍ಧ್ರಪ್ರದೇಶದ ಗುಡ್ಡಂ ಬಳಿಯಿರುವ ತ್ಯಾಗರಾಜನಗರದಲ್ಲಿ ಯೋಗ ದಿನಾಚರಣೆಯ ಅಂಗವಾಗಿ ದೇವಸ್ಥಾನದ ಆವರಣವೊಂದರಲ್ಲಿ ಯೋಗದ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ದೈಹಿಕ ತೊಂದರೆಗಳಿಂದ ಬಳಲುತ್ತಿದ್ದ ಹಲವು ಮುಸ್ಲಿಂ ಮಹಿಳೆಯರು ಅಲ್ಲಿ ಬಂದು ಯೋಗದ ಬಗ್ಗೆ ತರಬೇತಿ ಪಡೆಯುತ್ತಿದ್ದರು. ಈ ವೇಳೆ ಕೆಲವರು ಅಚಾನಕ್ಕಾಗಿ ಆಗಮಿಸಿ ಯೋಗ ಮಾಡುತ್ತಿದ್ದ ಬುರ್ಖಾ ಧಾರಿ ಮಹಿಳೆಯರನ್ನು ಬೆದರಿಸಿ ಅಲ್ಲಿಂದ ಓಡಿಸಿದ್ದಾರೆ.

ಅಲ್ಲದೇ , ಅಲ್ಲಿಂದ ಹೊರಟ ಬಳಿಕವೂ ಆ ಮಹಿಳೆಯರನ್ನು ಬೆಂಬೆತ್ತಿದ ದುಷ್ಕರ್ಮಿಗಳು ಇದೇನಾ ನಿಮಗೆ ಮಸೀದಿಯಲ್ಲಿ ಕಲಿಸಿಕೊಟ್ಟಿದ್ದು, ದೇವಸ್ಥಾನದ ಒಳಗೆ ಹೋಗಲು ನಾಚಿಕೆಯಾಗುವುದಿಲ್ಲವೇ. ಚಿಕ್ಕಂದಿನಿಂದ ನಿಮಗೆ ಹೇಳಿಕೊಟ್ಟರೂ ಪ್ರಯೋಜನವಾಗಿಲ್ಲ ಎಂದೆಲ್ಲಾ ನಿಂದಿಸಿ ಕಿರುಕುಳ ನೀಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ:Indian railway: ಜುಲೈ 1ರಿಂದ ರೈಲು ಟಿಕೆಟ್ ದರ ತುಸು ಹೆಚ್ಚಳ!